Asianet Suvarna News Asianet Suvarna News

Mysuru : ಅ. 13ಕ್ಕೆ ಮಹಿಷ ದಸರಾ ಆಚರಣೆ

ನಗರದಲ್ಲಿ ಮಹಿಷ ದಸರಾ ಆಚರಣಾ ಸಮಿತಿ ವತಿಯಿಂದ ಅ. 13 ರಂದು ಮಹಿಷ ದಸರಾ ಮಹೋತ್ಸವ ಹಮ್ಮಿಕೊಳ್ಳಲಾಗುತ್ತಿದೆ.

Mysuru   Mahisha Dasara celebration on oct 13 snr
Author
First Published Oct 8, 2023, 9:28 AM IST

  ಮೈಸೂರು :  ನಗರದಲ್ಲಿ ಮಹಿಷ ದಸರಾ ಆಚರಣಾ ಸಮಿತಿ ವತಿಯಿಂದ ಅ. 13 ರಂದು ಮಹಿಷ ದಸರಾ ಮಹೋತ್ಸವ ಹಮ್ಮಿಕೊಳ್ಳಲಾಗುತ್ತಿದೆ.

ಅಂದು ಬೆಳಗ್ಗೆ 8 ಗಂಟೆಗೆ ಚಾಮುಂಡಿಬೆಟ್ಟದ ತಪ್ಪಲಿನ ತಾವರೆಕಟ್ಟೆ ಬಳಿ ಎಲ್ಲರೂ ಸೇರಿ, ಬಳಿಕ ಆದಿ ದ್ರಾವಿಡ ದೊರೆ ಮಹಿಷಾಸುರ ಮೂರ್ತಿಗೆ ಪುಷ್ಪನಮನ ಸಲ್ಲಿಸಿ, ನಂತರ ಪುರಭವನಕ್ಕೆ ಬೈಕ್ ರ್ಯಾ ಲಿ ಮೂಲಕ ಆಗಮಿಸಿ ಅಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

ಆದರ್ಶ ಪುರುಷರನ್ನು ಕೊಂದವರ ಹೆಸರಿನಲ್ಲಿ ನಮ್ಮಿಂದಲೇ ಹಬ್ಬ ಮಾಡಿಸುತ್ತಿರುವುದು ಬೇಸರದ ಸಂಗತಿ. ಮಹಿಷ ದಸರಾ ಒಂದು ಸಾಂಸ್ಕೃತಿಕ ಹಬ್ಬವಾಗಿದ್ದು, ಅದು ಮೂಲ ನಿವಾಸಿಗಳ ಅಸ್ಮಿತೆಯಾಗಿದೆ. ಇಂತಹ ಸಂದರ್ಭದಲ್ಲಿ ಓರ್ವ ಸಂಸದರಾಗಿ ಪ್ರತಾಪ್ಸಿಂಹ ಅವರು ಮಹಿಷ ದಸರಾ ಆಚರಣೆ ಸಂಬಂಧ ಸಂಘರ್ಷಕ್ಕೂ ಸಿದ್ಧ ಎನ್ನುವುದು ಸರಿಯಲ್ಲ. ಮಹಿಷ ದಸರಾ ಆಚರಣೆ ಮಾಡಬಾರದೆನ್ನುವ ಅಧಿಕಾರ ಇವರಿಗಿಲ್ಲ ಎಂದರು.

ಬಳಿಕ, ಹಿಂದೂ ಧರ್ಮ ತತ್ವ ಸರ್ವರೂ ಸುಖಿಯಾಗಿರಲಿ ಎಂದದಿದ್ದರೆ, ಇದಕ್ಕೆ ವಿರುದ್ಧವಾಗಿ ಸಂಸದ ಮನು ಸಂವಿಧಾನ ಬೇಕೆನ್ನುವಂತೆ ಮಾತನಾಡುತ್ತಿದ್ದಾರೆ. ಸಂಘರ್ಷಕ್ಕೆ ಇವರು ಪ್ರಚೋದನೆ ನೀಡುವುದು ಸರಿಯಲ್ಲ. ಬೇಕಿದ್ದರೆ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರ ಮತ ತಮಗೆ ಬೇಡ ಎಂದು ಬಹಿರಂಗವಾಗಿ ತಿಳಿಸಲಿ ಎಂದು ತಾಕೀತು ಮಾಡಿದರು.

ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್. ಭಗವಾನ್ ಮಾತನಾಡಿ, ನಿಮ್ಮ ಹಬ್ಬ ನೀವು ಆಚರಿಸಿಕೊಳ್ಳಿ, ನಮ್ಮ ಹಮ್ಮ ನಾವು ಆಚರಿಸುತ್ತೇವೆ. ಹೀಗಾಗಿ ತಮಗಿರುವ ಅಧಿಕಾರವನ್ನು ಸಂಸದರು ದುರುಪಯೋಗ ಪಡಿಸಿಕೊಳ್ಳುವುದು ಬೇಡ, ಸಂವಿಧಾನ ಎಲ್ಲರೂ ಸಮಾನರು ಎಂದಿದೆ. ಯಾವುದೇ ಧರ್ಮ ಗ್ರಂಥ, ಅಂಶವನ್ನು ನಾವು ಒಪ್ಪುವುದಿಲ್ಲ. ಬದಲಾಗಿ ಸಂವಿಧಾನ ಒಪ್ಪುತ್ತೇವೆ. ಮಹಿಷ ಒಂದು ವೇಳೆ ರಾಕ್ಷಸ ಆಗಿದ್ದರೆ ಅವನ ಹೆಸರನ್ನು ಈ ಊರಿಗೇಕೆ ಇರಿಸುತ್ತಿದ್ದರು ಎಂಬ ಜ್ಞಾನವೂ ಸಂಸದರಿಗೆ ಇಲ್ಲ ಎದು ಅವರು ಆರೋಪಿಸಿದರು.

ಮಹಿಷ ದಸರಾಕ್ಕೆ 50ವರ್ಷ; ವಿವಾದ ಹುಟ್ಟುಹಾಕಿದ ಆಹ್ವಾನ ಪತ್ರಿಕೆ!

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಸಂಸದ ಚಾಮುಂಡಿಬೆಟ್ಟ ಚಲೋ ಎನ್ನುವ ವೇಳೆ ಬಿಜೆಪಿ ನಾಯಕರ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಇವರಾರೂ ಮುಖ್ಯರಲ್ಲ. ಇವರು ಪ.ಜಾತಿ ಮತ್ತು ಪ.ಪಂಗಡದ ವಿರುದ್ಧ ಹಿಂದುಳಿದ ವರ್ಗ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇವರು ಸಂಘರ್ಷ ಎಂದಾಗಲೇ ಪೊಲೀಸರು, ಜಿಲ್ಲಾಡಳಿತ ಕ್ರಮ ಕೈಗೊಂಡು ಬಂಧಿಸಬೇಕಿತ್ತು. ಇಂತರಹವರಿಂದ ಸಮಾಜಕ್ಕೆ ಕೆಡುಕಾಗುತ್ತಿದೆ ಎಂದು ಅವರು ದೂರಿದರು.

ಡಾ. ಕೃಷ್ಣಮೂರ್ತಿ ಚಮರಂ, ಸಿದ್ದಸ್ವಾಮಿ ಇದ್ದರು.

Follow Us:
Download App:
  • android
  • ios