ಮೈಸೂರು (ಡಿ.06): ಕಾಂಗ್ರೆಸ್ ಜೊತೆ ಸೇರಿ ಕೆಟ್ಟೆ ಎಂದು ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದು ಅವರಿಗೆ ತಡವಾಗಿ ಈ ಬಗ್ಗೆ ಅರಿವಾಗಿದೆ ಎಂದರು.

"

ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಕುಮಾರಸ್ವಾಮಿಯವರಿಗೆ ಕಾಂಗ್ರೆಸ್ ಬಗ್ಗೆ ತಡವಾಗಿ ಗೊತ್ತಾಗಿದೆ. ಹೆಚ್ಡಿಕೆ ಬಿಜೆಪಿ ಜೊತೆ ಸರ್ಕಾರ ಮಾಡಿದ್ದಾಗ ಮನೆಮನೆ ಮಾತಾಗಿದ್ದರು. ಅವರ 20 ತಿಂಗಳ ಆಡಳಿತ ಸಾಕಷ್ಟು ಹೆಸರು ತಂದುಕೊಟ್ಟಿತ್ತು ಎಂದರು.

ಬಿಜೆಪಿಗೆ ಬಂದಿದ್ದರೂ ಸಿಎಂ ಮಾಡುತ್ತಿರಲಿಲ್ಲ: ಎಚ್‌ಡಿಕೆಗೆ ಡಿಸಿಎಂ ಟಾಂಗ್..! .

ಗ್ರಾಮವಾಸ್ತವ್ಯ, ಜನರ ಜೊತೆ ಬೆರೆಯುವ ನಡೆ ಅವರಿಗೆ ಹೆಸರು ತಂದುಕೊಟ್ಟಿತ್ತು. ಎಲ್ಲರನ್ನೂ ಬ್ರದರ್ ಎನ್ನುವ ಅವರ ಮಾತು ಸಾಕಷ್ಟು ಟ್ರೆಂಡ್ ಆಗಿತ್ತು. ಚಿಕ್ಕವಯಸ್ಸಿನಲ್ಲೇ ಸಿಎಂ ಆಗಿದ್ದ ಕುಮಾರ ಸ್ವಾಮಿ ಬಗ್ಗೆ ನಾನು ಲೇಖನ ಬರೆದಿದ್ದೆ ಎಂದು ಪ್ರತಾಪ್ ಸಿಂಹ ಹೇಳಿದರು.

ಆದರೆ ಅವರ ಇಂದಿನ ಪರಿಸ್ಥಿತಿ ಬಗ್ಗೆ ನಾನು ಮಾತನಾಡಲ್ಲ. ಬಿಜೆಪಿ ಜೊತೆ ಸರ್ಕಾರ ಮಾಡಿದ್ದಾಗ ಉತ್ತಮ ಆಡಳಿತ ನಡೆಸಿದ್ದ ಬಗ್ಗೆ ಗೌರವ ಇದೆ ಎಂದು  ಸಂಸದ ಪ್ರತಾಪ್ ಸಿಂಹ ಹೇಳಿದರು.