ಬಿಜೆಪಿ ಜೊತೆ ಇದ್ದರೆ ನಾನು ಇನ್ನೂ ಸಿಎಂ ಆಗಿರುತ್ತಿದ್ದೆ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಡಿಸಿಎಂ ಅಶ್ವತ್ಥ ನಾರಾಯಣ ಅವರು ಟಾಂಗ್ ಕೊಟ್ಟಿದ್ದಾರೆ.

ಬೆಂಗಳೂರು, (ಡಿ.05): ಬಿಜೆಪಿ ಜೊತೆ ಇದ್ದರೆ ನಾನು ಇನ್ನೂ ಸಿಎಂ ಆಗಿರುತ್ತಿದ್ದೆ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಡಿಸಿಎಂ ಅಶ್ವತ್ಥ ನಾರಾಯಣ, ಕುಮಾರಸ್ವಾಮಿ ಬಿಜೆಪಿಗೆ ಬಂದರೂ ಸಿಎಂ ಮಾಡುತ್ತಿರಲಿಲ್ಲ ಎಂದಿದ್ದಾರೆ.

Add Asianetnews Kannada as a Preferred SourcegooglePreferred

ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಶ್ವತ್ಥ ನಾರಾಯಣ, ರೈತ ನಾಯಕ, ಬಿ.ಎಸ್. ಯಡಿಯೂರಪ್ಪನವರು ಇರುವಾಗ ಸಿಎಂ ಸ್ಥಾನವನ್ನು ಬೇರೆ ಪಕ್ಷದವರಿಗೆ ಬಿಟ್ಟುಕೊಡುವ ಪ್ರಶ್ನೆಯೇ ಬರಲ್ಲ. ಹಾಗಾಗಿ ಎಚ್.ಡಿ.ಕೆ. ಬಿಜೆಪಿಗೆ ಬಂದಿದ್ದರೂ ಸಿಎಂ ಆಗುತ್ತಿರಲಿಲ್ಲ ಎಂದು ಟಾಂಗ್ ಕೊಟ್ಟರು.

'ದೇವೇಗೌಡ್ರ ಭಾವನಾತ್ಮಕ, ಸಿದ್ದರಾಮಯ್ಯನವರ ಪ್ರೀ ಪ್ಲ್ಯಾನ್‌ನಿಂದ ನಾನು ಟ್ರ್ಯಾಪ್ ಆಗಿದ್ದೇನೆ' 

ಕಾಂಗ್ರೆಸ್ ವಿರೋಧಿ ಮತಗಳೇ ಜೆಡಿಎಸ್ ಹಲವು ಕ್ಷೇತ್ರಗಳಲ್ಲಿ ಗೆಲ್ಲಲು ನೆರವಾಗಿದ್ದವು. ಅದನ್ನು ಮರೆತು ಕುಮಾರಸ್ವಾಮಿ ಕಾಂಗ್ರೆಸ್ ಜೊತೆ ಕೈ ಜೋಡಿಸಿದರು. ಮೈತ್ರಿ ಸರ್ಕಾರದಿಂದ ಕುಮಾರಸ್ವಾಮಿ ನೋವನುಭವಿಸಿದ್ದಾರೆ. ಕಾಂಗ್ರೆಸ್ ನಿಂದ ಅವರಿಗೆ ತೊಂದರೆಯಾಗಿದೆ, ಕಿರುಕುಳ ಕೊಟ್ಟು, ಯಾವ ರೀತಿ ಕಾಲೆಳೆದು ಬೀಳಿಸಿದರು ಎಂಬುದು ಎಲ್ಲರಿಗೂ ಗೊತ್ತಾಗಿದೆ ಎಂದು ಹೇಳಿದರು. 

ಕುಮಾರಸ್ವಾಮಿ ಮೈತ್ರಿ ಸರ್ಕಾರದಲ್ಲಿ ಬೇಸತ್ತಿದ್ದರು. 17 ಶಾಸಕರು ಕೂಡ ಇದೇ ಕಾರಣಕ್ಕೆ ರಾಜೀನಾಮೆ ನೀಡಿ ಬಂದಿದ್ದರು. ಹೀಗಾಗಿ ಕಾಂಗ್ರೆಸ್ ಬಗ್ಗೆ ಈಗ ಕುಮಾರಸ್ವಾಮಿ ಅವರು ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.