Mysuru : 16 ರಿಂದ ರೈತರು ಮಾರುವ ಹಾಲಿಗೆ .1 ಹೆಚ್ಚಳ
ಹೈನುಗಾರಿಕೆ ಪೋ›ತ್ಸಾಹಿಸುವ ಉದ್ದೇಶದಿಂದ ಯುಗಾದಿ ಹಬ್ಬದ ವಿಶೇಷವಾಗಿ ಮಾ. 16 ರಿಂದ ರೈತರು ಮಾರಾಟ ಮಾಡುವ ಹಾಲಿನ ದರವನ್ನು 1 ರು. ಹೆಚ್ಚಳ ಮಾಡಿ ಅವರ ಹಿತ ಕಾಪಾಡಲಾಗುತ್ತಿದೆ ಎಂದು ಮೈಮುಲ… ಅಧ್ಯಕ್ಷ ಪಿ.ಎಂ. ಪ್ರಸನ್ನ ಹೇಳಿದರು.
ಪಿರಿಯಾಪಟ್ಟಣ : ಹೈನುಗಾರಿಕೆ ಪೋ›ತ್ಸಾಹಿಸುವ ಉದ್ದೇಶದಿಂದ ಯುಗಾದಿ ಹಬ್ಬದ ವಿಶೇಷವಾಗಿ ಮಾ. 16 ರಿಂದ ರೈತರು ಮಾರಾಟ ಮಾಡುವ ಹಾಲಿನ ದರವನ್ನು 1 ರು. ಹೆಚ್ಚಳ ಮಾಡಿ ಅವರ ಹಿತ ಕಾಪಾಡಲಾಗುತ್ತಿದೆ ಎಂದು ಮೈಮುಲ… ಅಧ್ಯಕ್ಷ ಪಿ.ಎಂ. ಪ್ರಸನ್ನ ಹೇಳಿದರು.
ಪಟ್ಟಣದ ಬಿ.ಎಂ. ಮುಖ್ಯರಸ್ತೆಯಲ್ಲಿ ಮೈಮುಲ್…ನಿಂದ ನಿರ್ಮಾಣವಾಗಿರುವ ನಂದಿನಿ ಗೆಲಾಕ್ಸಿ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಆಡಳಿತಾವಧಿಯಲ್ಲಿ ಮೈಮುಲ್… ಒಕ್ಕೂಟದಿಂದ ರೈತರಿಂದ ಖರೀದಿಸುವ ಹಾಲಿನ ದರವನ್ನು ರಾಜ್ಯದಲ್ಲಿಯೇ ಅತಿ ಹೆಚ್ಚು ನೀಡುವ ಮೂಲಕ ರೈತರ ಆರ್ಥಿಕಾಭಿವೃದ್ಧಿಗೆ ಸಹಕರಿಸಲಾಗುತ್ತಿದೆ, ನಗರ ಪ್ರದೇಶಗಳಂತೆ ತಾಲೂಕು ಪ್ರದೇಶಗಳಲ್ಲಿಯೂ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆ ತೆರೆದು ರೈತರ ಸಂಸ್ಥೆಯಾದ ಕೆಎಂಎಫ್ ವತಿಯಿಂದ ನೂರಕ್ಕೂ ಹೆಚ್ಚು ವಿವಿಧ ಬಗೆ ಉತ್ಪನ್ನಗಳನ್ನು ಸ್ಥಳೀಯವಾಗಿ ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ ಪಿರಿಯಾಪಟ್ಟಣ ತಾಲೂಕಿನಿಂದ ಅತಿ ಹೆಚ್ಚು ಗುಣಮಟ್ಟದ ಹಾಲು ಪೂರೈಕೆಯಾಗುತ್ತಿದ್ದು, ಸ್ಥಳೀಯರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಸತ್ಯಗಾಲ ಗ್ರಾಮ ಬಳಿ ಫೀಡ್‌್ಸ ಫ್ಯಾಕ್ಟರಿ ನಿರ್ಮಿಸಲು ಈಗಾಗಲೇ ಚಾಲನೆ ನೀಡಲಾಗಿದೆ, ಒಕ್ಕೂಟ ವತಿಯಿಂದ ಹಲವಾರು ಸವಲತ್ತುಗಳನ್ನು ಸಬ್ಸಿಡಿ ದರದಲ್ಲಿ ರೈತರಿಗೆ ಒದಗಿಸಿ ಗ್ರಾಮಾಂತರ ಪ್ರದೇಶಗಳಲ್ಲಿ ಅತಿ ಹೆಚ್ಚು ಬಿಎಂಸಿ ಕೇಂದ್ರ ಹಾಗೂ ನೂತನ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸಿ ರೈತರ ಏಳಿಗೆಗೆ ಶ್ರಮಿಸಲಾಗುತ್ತಿದೆ ಎಂದರು.
ಶಾಸಕ ಕೆ. ಮಹದೇವ್, ಮೈಮುಲ… ನಿರ್ದೇಶಕರಾದ ಎಚ್.ಡಿ ರಾಜೇಂದ್ರ, ಎ.ಟಿ. ಸೋಮಶೇಖರ್, ಮಹೇಶ್, ಉಮಾಶಂಕರ್, ಲೀಲಾಂಬಿಕೆ, ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್, ಪುರಸಭಾ ಅಧ್ಯಕ್ಷ ಕೆ. ಮಹೇಶ್, ಉಪಾಧ್ಯಕ್ಷೆ ಆಶಾ, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ. ಕೃಷ್ಣ, ಸದಸ್ಯರಾದ ನಿರಂಜನ್, ಪ್ರಕಾಶ್‌ಸಿಂಗ್, ಭಾರತಿ, ಮಂಜುನಾಥ್ ಸಿಂಗ್, ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ,
ಜಿಪಂ ಮಾಜಿ ಸದಸ್ಯ ಕೆ.ಎಸ್. ಮಂಜುನಾಥ್, ಮುಖಂಡ ಸೋಮಣ್ಣ, ಗೆಲಾಕ್ಸಿ ಮಾಲೀಕ ಜಾಕಿ ಸುರೇಶ್, ರೇಖಾ ಸುರೇಶ್ ಹಾಗೂ ಮೈಮುಲ… ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಇದ್ದರು.
ಹಾಲಿನ ದರ ಹೆಚ್ಚಳ
ತಿರುವನಂತಪುರಂ: ಕರ್ನಾಟಕದಲ್ಲಿ ಪ್ರತಿ ಲೀಟರ್ ಹಾಲಿನ ದರ (Milk price) 2.ರು ಏರಿಕೆಯಾದ ಬೆನ್ನಲ್ಲೇ, ಕೇರಳದಲ್ಲಿ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದರ ಏರಿಕೆ ಮಾಡಿ ಶಾಕ್ ನೀಡಲಾಗಿದೆ. ಕೇರಳ ರಾಜ್ಯದಲ್ಲಿ ಹಾಲಿನ ದರ ಲೀಟರ್‌ಗೆ 6 ರು. ಏರಿಕೆಯಾಗಿದೆ. ಇದರೊಂದಿಗೆ, ಪ್ರಸ್ತುತ ರಾಜ್ಯದಲ್ಲಿ ಪ್ರತೀ ಲೀಟರ್ 46 ರುಪಾಯಿ ಇರುವ ಹಾಲಿನ ಬೆಲೆ 52 ರೂ.ಗೆ ಏರಿಕೆಯಾಗಲಿದೆ. ಕೇರಳ ಹಾಲು ಸಹಕಾರ ಒಕ್ಕೂಟವು ಬೆಲೆ ಏರಿಕೆ ಕುರಿತು ಘೋಷಣೆ ಮಾಡಿದೆ. ಡಿ.1ರಿಂದ ಹಾಲಿನ ದರದಲ್ಲಿ ಬದಲಾವಣೆಯಾಗಲಿದೆ ಎಂದಿದೆ.
ಒಕ್ಕೂಟವು ಮೂರು ವರ್ಷ ಹಿಂದೆ, ಅಂದರೆ 2019ರಲ್ಲಿ 4.ರೂ ಏರಿಕೆ ಮಾಡಿತ್ತು. ಬಳಿಕ ಏರಿಸಿರಲಿಲ್ಲ. ಆಗ ಹೆಚ್ಚಾದ ಹಾಲಿನ ದರದಲ್ಲಿ 3.35 ರೂ. ರೈತರಿಗೆ ಸೇರುತ್ತಿತ್ತು. ಈ ಬಾರಿ 5.025 ರೂ. ರೈತರಿಗೆ ಸೇರಲಿದೆ ಎಂದು ಒಕ್ಕೂಟ ಹೇಳಿದೆ. ರೈತರ ಹಾಲು ಉತ್ಪಾದನಾ ವೆಚ್ಚದಲ್ಲಿ (Prodcution cost) ಏರಿಕೆ ಆದ ಕಾರಣ ದರ ಹೆಚ್ಚಿಸಲಾಗಿದೆ ಎಂದು ಅದು ಸ್ಪಷ್ಟಪಡಿಸಿದೆ.
Nandini Milk Price Hike :ಹಾಲಿನ ದರ ಹೆಚ್ಚಳವಾದರೂ, ಕಾಫಿ- ಟೀ ಬೆಲೆ ಏರಿಕೆಯಿಲ್ಲ
ಕರ್ನಾಟಕದಲ್ಲಿ ಹಾಲು, ಮೊಸರಿನ ದರ ಪ್ರತಿ ಲೀಟರ್‌ಗೆ 2 ರೂ. ಹೆಚ್ಚಳ
ಕೆಎಂಎಫ್ ನಂದಿನಿ ಹಾಲು ಹಾಗೂ ಮೊಸರಿನ ದರವನ್ನು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸುವುದಾಗಿ ಕೆಎಂಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಹಾಲು ಹಾಗೂ ಮೊಸರು (Curd) ದರ ಹೆಚ್ಚಳದ ಬಗ್ಗೆ KMF ಆಡಳಿತ ಮಂಡಳಿ ಸಭೆ ಬಳಿಕ ಹಾಲಿನ ದರವನ್ನು 2 ರೂ ಹೆಚ್ಚಳ ಮಾಡುವುದಾಗಿ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಪ್ರತಿ ಲೀಟರ್ ಹಾಲಿಗೆ 2 ರೂಪಾಯಿ ಹಾಗೂ ಪ್ರತಿ ಕೆಜಿ ಮೊಸರಿಗೆ 2 ರೂಪಾಯಿ ಏರಿಕೆ ಮಾಡಲಾಗಿದೆ. ನೇರವಾಗಿ ರೈತರಿಗೆ (Farmers) ಈ ಹಣವನ್ನು ನೀಡಲಾಗುತ್ತಿದ್ದು ಗ್ರಾಹಕರು (Customers) ಸಹಕಾರ ಕೊಡುವಂತೆ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದ್ದಾರೆ. ನಿನ್ನೆಯಿಂದಲೇ ಈ ದರ ಜಾರಿಯಾಗಿದೆ.