ಮೈಸೂರು (ಮೇ.10): ಯಾವುದೇ ಕಠಿಣ ಕ್ರಮಕ್ಕೂ ಬಗ್ಗದ ಚೀನಿ ವೈರಸ್ ಅಟ್ಟಹಾಸ ಮುಂದುವರಿದಿದೆ. ಕೋವಿಡ್ ಹತೋಟಿ ಉದ್ದೇಶದಿಂದ ಇಂದಿನಿಂದ  ಹೊರ ಜಿಲ್ಲೆಗಳ ಪ್ರಯಾಣಿಕರು ಸೋಂಕಿತರಿಗೂ ಮೈಸೂರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.  

ಮೈಸೂರಿನಲ್ಲಿಂದು ಮಾತನಾಡಿದ ಸಚಿವ ಎಸ್ ಟಿ ಸೋಮಶೇಖರ್ ಕೊನೆ ಕ್ಷಣದಲ್ಲಿ ಸೋಂಕಿತರು ಮೈಸೂರಿಗೆ ಬರುತ್ತಿದ್ದಾರೆ. ಇದರಿಂದ ಹೆಚ್ಚಿನ ಸಾವು‌ ನೋವುಗಳಾಗುತ್ತಿವೆ. ಆದ್ದರಿಂದ ಮೈಸೂರು ಜಿಲ್ಲೆಗೆ ಎಲ್ಲಾ ರೀತಿಯ ನಿರ್ಬಂಧ ಹೇರಲಾಗಿದೆ ಎಂದರು.

ಆಕ್ಸಿಜನ್‌ಗಾಗಿ ವಿರಸ: ಆಮ್ಲಜನಕ ಕೋಟಾ ನಿಗದಿಗೆ ಸಿಎಂಗೆ ಪ್ರತಾಪ್‌ ಸಿಂಹ ಮನವಿ

ಮೈಸೂರಿನಲ್ಲಿ ಸದ್ಯ ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚೇ ಇದ್ದು, ಹೆಚ್ಚುವರಿ ಆಕ್ಸಿಜನ್ ಅವಶ್ಯಕತೆ ಇದೆ. ನಮ್ಮ ಪ್ರಮಾಣ ಹೆಚ್ಚಿಸಲು ಸರ್ಕಾರವನ್ನ ಈಗಾಗಲೇ ಕೇಳಿದ್ದೇನೆ. ನಮಗೆ ಆಕ್ಸಿಜನ್ ಪೂರೈಕೆ ಹೆಚ್ಚಾಗಬಹುದು ಎಂದು ಸೋಮಶೇಖರ್ ಹೇಳಿದರು. 

ನನ್ನ ಹೆಂಡತಿಗೂ ವೆಂಟಿಲೇಟರ್‌ ಸಿಕ್ಕಿಲ್ಲ, ಸೋತಿದ್ದೇನೆ: ಅಸಹಾಯಕತೆ ತೋಡಿಕೊಂಡ DHO! ...

ನಮ್ಮಲ್ಲಿ ಪಾಸಿಟಿವ್ ಪ್ರಕರಣ ಕೊರೋನಾ ರೋಗಿಗಳ ಸಂಖ್ಯೆ ಆಧರಿಸಿ ಹೆಚ್ಚುವರಿ ಆಕ್ಸಿಜನ್‌ಗೆ ಮನವಿ ಮಾಡಿದ್ದೇನೆ ಎಂದು ಮೈಸೂರಿನಲ್ಲಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು. 

ಸದ್ಯ ಮೈಸೂರಿನಲ್ಲಿ ಈವರೆಗೆ 98747 ಮಂದಿಗೆ ಕೋವಿಡ್ ಬಂದಿದ್ದು,  ಇದರಲ್ಲಿ 81819 ಮಂದಿ ಗುಣಮುಖರಾಗಿದ್ದಾರೆ.  1327 ಮಂದಿ ಮೃತಪಟ್ಟಿದ್ದು , 15601 ಸಕ್ರೀಯ ಸೋಂಕಿನ ಪ್ರಕರಣಗಳಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona