ಮೈಸೂರು (ಸೆ.25): ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಅರಮನೆಯ ದರ್ಬಾರ್‌ ಹಾಲ್‌ನಲ್ಲಿ ಜೋಡಿಸಲಾದ ರತ್ನಖಚಿತ ಸಿಂಹಾಸನ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದೆ.

50 ರು. ದರ ನಿಗದಿಪಡಿಸಲಾಗಿದೆ. ಬೆಳಗ್ಗೆ 9.30ರಿಂದ ಸಂಜೆ 5.30ರವರೆಗೆ ಸಿಂಹಾಸನ ವೀಕ್ಷಿಸಬಹುದು. ಸಾರ್ವಜನಿಕರು ಸಿಂಹಾಸನದ ಹತ್ತಿರ ಹೋಗದಂತೆ ಪರದೆ ಬಿಟ್ಟಿದ್ದು, ಬ್ಯಾರಿಕೇಡ್‌ ಕೂಡ ಅಳವಡಿಸಲಾಗಿದೆ. ಅ.17ರಿಂದ ನವರಾತ್ರಿ ಕಾರ್ಯಕ್ರಮಗಳು ಆರಂಭವಾಗುವ ಹಿನ್ನೆಲೆಯಲ್ಲಿ ಶುಭಲಗ್ನ ಮತ್ತು ನಕ್ಷತ್ರದಲ್ಲಿ ಸಿಂಹಾಸನ ಜೋಡಿಸಲಾಗಿದೆ.

ಈ ಬಾರಿ ದಸರಾ ಚಾಲನೆ ಮಾಡೋರು ಇವರೇ ! ...

ಅರಮನೆಯ ರಾಜಮನೆತನದವರು ಇದಕ್ಕೆ ಪ್ರತ್ಯೇಕವಾಗಿ ವಯಸ್ಕರಿಗೆ ಮತ್ತು ಮಕ್ಕಳಿಗೆ 50 ರು. ದರ ನಿಗದಿಪಡಿಸಿದ್ದಾರೆ. ಅರಮನೆ ಪ್ರವೇಶಕ್ಕೆ ಅರಮನೆ ಮಂಡಳಿಯಿಂದ ವಯಸ್ಕರಿಗೆ 70 ಮತ್ತು ಮಕ್ಕಳಿಗೆ 35 ರು. ದರ ನಿಗದಿಪಡಿಸಲಾಗಿದೆ. ಸಿಂಹಾಸನ ವೀಕ್ಷಣೆಗೆ ಟಿಕೆಟ್‌ ಪಡೆದವರಿಗೆ ಹಳದಿ ಬಣ್ಣದ ಬ್ಯಾಂಡ್‌ ಧರಿಸಲಾಗುತ್ತದೆ. ಸಿಂಹಾಸನದ ಛಾಯಾಚಿತ್ರ ಸೆರೆಹಿಡಿಯಲು ಅವಕಾಶವಿಲ್ಲ.