ಮಂಡ್ಯ (ಸೆ.20): ಮೈಸೂರು ದಸರಾವನ್ನು ಈ ಬಾರಿ ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದ್ದು, ಕೊರೋನಾ ವಾರಿಯ​ರ್‍ಸ್ನಿಂದ ಚಾಲನೆ ಕೊಡಿಸಲು ನಿರ್ಧರಿಸಲಾಗಿದೆ ಎಂದು ಸಹ​ಕಾರ ಹಾಗೂ ಮೈಸೂರು ಜಿಲ್ಲಾ ಉಸ್ತು​ವಾರಿ ಸಚಿವ ಎಸ್‌.ಟಿ.ಸೋಮ​ಶೇ​ಖರ್‌ ತಿಳಿ​ಸಿದ್ದಾರೆ.

 ಶನಿವಾರ ನಗ​ರದಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಕೊರೋನಾ ವಾರಿ​ಯ​ರ್‍ಸ್ಗಳಾದ ವೈದ್ಯ​ರು, ದಾದಿ, ಆಶಾ, ಅಂಗ​ನ​ವಾಡಿ ಕಾರ‍್ಯ​ಕರ್ತೆ ಮತ್ತು ಪೊಲೀಸ್‌ ಇಲಾ​ಖೆಯ ಒಬ್ಬರು ಸೇರಿ​ದಂತೆ ಐದು ಮಂದಿ ಕೊರೋನಾ ವಾರಿ​ಯ​ರ್‍ಸ್ರಿಂದ ಮೈಸೂರು ದಸ​ರಾಗೆ ಚಾಲನೆ ನೀಡಲು ನಿರ್ಧರಿ​ಸ​ಲಾ​ಗಿದೆ. 

ದುಂದು ವೆಚ್ಚದ ದಸರಾ ಇಲ್ಲ, ಸರಳ ಆಚರಣೆಗೆ ಸಿಎಂ ಸೂಚನೆ : ಎಸ್‌.ಟಿ.ಸೋಮಶೇಖರ್ ...

ಈಗಾ​ಗಲೇ ಆರೋಗ್ಯ, ಪೊಲೀಸ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪತ್ರ ಬರೆದು ನಿಮ್ಮ ಇಲಾ​ಖೆ​ಗ​ಳಿಂದ ಒಬ್ಬೊ​ಬ್ಬ​ರ ಹೆಸ​ರನ್ನು ಸೂಚಿ​ಸು​ವಂತೆ ಕೋರ​ಲಾ​ಗಿದೆ. ಅವ​ರಿಂದ ಆಯ್ಕೆ​ಯಾಗಿ ಬಂದ ನಂತರ ವೈದ್ಯರೊ​ಬ್ಬ​ರಿಂದ ದಸರಾಗೆ ಚಾಲನೆ ನೀಡ​ಲಾ​ಗು​ವುದು. ಉಳಿ​ದ​ವ​ರನ್ನು ಸನ್ಮಾ​ನಿಸಿ ಗೌರ​ವಿ​ಸ​ಲಾ​ಗು​ವುದು ಎಂದು ವಿವ​ರಿ​ಸಿ​ದರು.