Mysuru : ಜಂತು ಹುಳು ಮಾತ್ರೆಗಳನ್ನು ಎಲ್ಲಾ ಮಕ್ಕಳಿಗೂ ನೀಡಿ : ಕೆ.ಎಂ. ಗಾಯತ್ರಿ

ಮಕ್ಕಳ ಅಪೌಷ್ಟಿಕತೆ, ರಕ್ತಹೀನತೆ ಹೋಗಲಾಡಿಸುವ ಹಾಗೂ ಜಂತು ಹುಳು ಬಾಧೆಯನ್ನು ನಿವಾರಣೆ ಮಾಡುವ ಜಂತು ನಿವಾರಣಾ ಮಾತ್ರೆಯನ್ನು ಎಲ್ಲಾ ಅರ್ಹ ಮಕ್ಕಳಿಗೆ ನೀಡಿ ಎಂದು ಜಿಪಂ ಸಿಇಒ ಕೆ.ಎಂ. ಗಾಯತ್ರಿ ತಿಳಿಸಿದರು

Mysuru Give deworming tablets to all children  K M Gayatri  snr

  ಮೈಸೂರು :  ಮಕ್ಕಳ ಅಪೌಷ್ಟಿಕತೆ, ರಕ್ತಹೀನತೆ ಹೋಗಲಾಡಿಸುವ ಹಾಗೂ ಜಂತು ಹುಳು ಬಾಧೆಯನ್ನು ನಿವಾರಣೆ ಮಾಡುವ ಜಂತು ನಿವಾರಣಾ ಮಾತ್ರೆಯನ್ನು ಎಲ್ಲಾ ಅರ್ಹ ಮಕ್ಕಳಿಗೆ ನೀಡಿ ಎಂದು ಜಿಪಂ ಸಿಇಒ ಕೆ.ಎಂ. ಗಾಯತ್ರಿ ತಿಳಿಸಿದರು.

ಜಿಪಂ ಸಭಾಂಗಣದಲ್ಲಿ, ದಡಾರ ಮತ್ತು ರೂಬೆಲ್ಲಾ, ಪ್ಲೋರಸಿಸ್‌ ಹಾಗೂ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

1 ರಿಂದ 19 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೆ ಜಂತು ಹುಳು ನಿವಾರಣಾ ಮಾತ್ರೆಯನ್ನು ಎಲ್ಲಾ ಅಂಗನವಾಡಿ ಕೇಂದ್ರಗಳು ಹಾಗೂ ಶಾಲೆಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಜಂತು ಹುಳು ಬಾಧೆಯಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ಜಿಲ್ಲೆಯಲ್ಲಿ ಪೌಷ್ಟಿಕತೆ ಹೆಚ್ಚಿಸುವ ಆರೋಗ್ಯ ಕ್ರಮಗಳನ್ನು ಕೈಗೊಳ್ಳಿ. ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡಲು ಅಗತ್ಯ ಚಿಕಿತ್ಸೆ ನೀಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಆರೋಗ್ಯ ಸೌಲಭ್ಯವನ್ನು ಸಾರ್ವಜನಿಕರಿಗೆ ನೀಡಬೇಕು. ದಡಾರ ಮತ್ತು ರುಬೆಲ್ಲಾ ಚಿಕಿತ್ಸೆಯನ್ನು ಶೇ. 100 ರಷ್ಟುಪರಿಣಾಮಕಾರಿಯಾಗಿ ನೀಡಿ ದಡಾರ ಮತ್ತು ರುಬೆಲ್ಲಾ ಸಂಖ್ಯೆಯನ್ನು ಶೂನ್ಯಕ್ಕೆ ತರಬೇಕು ಎಂದು ಅವರು ಸೂಚಿಸಿದರು.

ಪ್ಲೊರಸಿಸ್‌ನಿಂದ ಮಾನವನ ಹಲ್ಲುಗಳು ಹಾಗೂ ಮೂಳೆಗಳ ಮೇಲೆ ಕೆಟ್ಟಪರಿಣಾಮ ಬೀರುತ್ತದೆ. ಫೆä್ಲೕರೈಡ್‌ ಹೆಚ್ಚಾಗಿರುವ ಕುಡಿಯುವ ನೀರು ಮತ್ತು ಫೆä್ಲೕರೈಡ್‌ ಆಹಾರ ಪದಾರ್ಥ ಸೇವಿಸುವುದರಿಂದ ಪ್ಲೋರಾಸಿಸ್‌ ಬರುತ್ತದೆ. ಇದು ಟ್ರೈಬಲ್‌ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸುತ್ತದೆ ಕಾರಣ ಬೋರ್ವೆಲ್‌ ನೀರು ನೇರವಾಗಿ ಬಳಕೆ. ಮಾಡುವುದು. ಮೈಸೂರು ನಗರದಲ್ಲಿ ಕಾವೇರಿ ನೀರು ಇದೆ. ಆದರೂ ಇಲ್ಲಿ ಪ್ಲೋರಸಿಸ್‌ ಇರುವುದು ಆಶ್ಚರ್ಯ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯಾಧಿಕಾರಿಗಳು ಪ್ಲೋರಸಿಸ್‌ ಇರುವುದು ಪಿರಿಯಾಪಟ್ಟಣ, ನಂಜನಗೂಡು, ಟಿ. ನರಸೀಪುರ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ. ಕೆಲವರು ನೇರವಾಗಿ ಬೋರ್‌ವೆಲ್‌ ನೀರನ್ನು ಕುಡಿಯಲು ಬಳಸುತ್ತಿದ್ದಾರೆ. ಇದರಿಂದ ಪ್ಲೋರಸಿಸ್‌ ಕಂಡುಬರುತ್ತಿದೆ ಎಂದು ಮಾಹಿತಿ ನೀಡಿದರು.

ಡಿಎಚ್‌ಒ ಡಾ.ಕೆ.ಎಚ್‌. ಪ್ರಸಾದ್‌ ಮಾತನಾಡಿ, 10 ಲಕ್ಷ ಮಕ್ಕಳಿಗೆ ಜಂತು ಹುಳು ನಿವಾರಣಾ ಮಾತ್ರೆ ನೀಡುವ ಗುರಿ ಹೊಂದಲಾಗಿದೆ. ಜಿಲ್ಲೆಯ ಅಂಗನವಾಡಿ ಹಾಗೂ ಶಾಲೆಗಳಲ್ಲಿ ಮಾ. 13 ರಿಂದ 25 ರವರಿಗೆ ನೀಡಲಾಗುತ್ತದೆ ಎಂದರು.

ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಜಯಂತ್‌ ಮಾತನಾಡಿ, 2ನೇ ಸುತ್ತಿನ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ ಆಚರಣೆ ಮಾಡಲಾಗುತ್ತಿದೆ. ಜಂತು ಹುಳುಗಳಿಂದ ಅಪೌಷ್ಟಿಕತೆ ಉಂಟಾಗುತ್ತದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಟಿಎಚ್‌ಒಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Latest Videos
Follow Us:
Download App:
  • android
  • ios