Asianet Suvarna News Asianet Suvarna News

Mysuru : ಪೋಸ್ಟರ್‌, ಬ್ಯಾನರ್‌ ಅಳವಡಿಕೆ ನಿಷೇಧಿಸಿ

ಹುಣಸೂರು ಉಪವಿಭಾಗ ವ್ಯಾಪ್ತಿಯ ತಾಲೂಕಿನಾದ್ಯಂತ ಮಹನೀಯರ ಜಯಂತಿಗಳು ಇನ್ನಿತರ ಕಾರ್ಯಕ್ರಮಗಳ ಅಂಗವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ಅಳವಡಿಸುವುದನ್ನು ನಿಷೇಧಿಸುವ ಮೂಲಕ ಸಾಮಾಜಿಕ ಸಾಮರಸ್ಯ ಕಾಪಾಡಬೇಕೆಂದು ದಲಿತ ಮುಖಂಡ ನಿಂಗರಾಜ ಮಲ್ಲಾಡಿ ಆಗ್ರಹಿಸಿದರು.

Mysuru  Demand For  Prohibit installation of posters  banners snr
Author
First Published Dec 16, 2022, 5:17 AM IST

 ಹುಣಸೂರು (ಡಿ.16):  ಹುಣಸೂರು ಉಪವಿಭಾಗ ವ್ಯಾಪ್ತಿಯ ತಾಲೂಕಿನಾದ್ಯಂತ ಮಹನೀಯರ ಜಯಂತಿಗಳು ಇನ್ನಿತರ ಕಾರ್ಯಕ್ರಮಗಳ ಅಂಗವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ಅಳವಡಿಸುವುದನ್ನು ನಿಷೇಧಿಸುವ ಮೂಲಕ ಸಾಮಾಜಿಕ ಸಾಮರಸ್ಯ ಕಾಪಾಡಬೇಕೆಂದು ದಲಿತ ಮುಖಂಡ ನಿಂಗರಾಜ ಮಲ್ಲಾಡಿ ಆಗ್ರಹಿಸಿದರು.

ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಉಪವಿಭಾಗ ಮಟ್ಟದ ಪ.ಜಾತಿ ಮತ್ತು ಪಂಗಡಗಳ ದೌರ್ಜನ್ಯ ಪ್ರತಿಬಂಧಕ ಕಾಯ್ದೆಯ ಜಾಗೃತ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ದೇಶದ ಮಹನೀಯರ ಜಯಂತಿಗಳು, ವಿಶೇಷ ಕಾರ್ಯಕ್ರಮಗಳು, ನೇತಾರರ ಹುಟ್ಟುಹಬ್ಬ ಮತ್ತು ಶ್ರದ್ಧಾಂಜಲಿ ಮುಂತಾದ ಸಮಾರಂಭಗಳ ಪೋಸ್ಟರ್‌ ಮತ್ತು ಬ್ಯಾನರ್‌ಗಳನ್ನು ಎಲ್ಲೆಂದರಲ್ಲಿ ಮತ್ತು ತಿಂಗಳುಗಳ ಕಾಲ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುತ್ತಾರೆ. ಇದು ಗ್ರಾಮೀಣ ಪ್ರದೇಶಕ್ಕೂ ಹಬ್ಬಿದ್ದು, ಹಲವಾರು ಬಾರಿ ಸಮಾಜದಲ್ಲಿ ಆಶಾಂತಿಗೆ ಕಾರಣವಾಗುತ್ತಿದೆ. ಪೋಸ್ಟರ್‌ಗಳ ಅಳವಡಿಕೆ ಮತ್ತು ತೆರವಿನ ಕುರಿತು ಸರ್ಕಾರದ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕ್ರಮವಹಿಸಬೇಕು. ಆ ಮೂಲಕ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದು ಅವರು ಕೋರಿದರು.

ಉಪವಿಭಾಗಾಧಿಕಾರಿ ರುಚಿ ಬಿಂದಾಲ್‌ ಮಾತನಾಡಿ, ಎಲ್ಲ ತಾಲೂಕುಗಳಲ್ಲೂ ಪೋಸ್ಟರ್‌ಗಳ ಅಳವಡಿಕೆ ಮತ್ತು ತೆರವುಗೊಳಿಸುವ ಕುರಿತು ಕಡ್ಡಾಯವಾಗಿ ನಿಯಮಗಳನ್ನು ಜಾರಿಗೊಳಿಸಬೇಕು. ನಿಗದಿತ ಸ್ಥಳ, ಸಮಯವನ್ನು ತಿಳಿಸಿರಿ. ಯಾವುದೇ ಕಾರಣಕ್ಕೂ ಸಮಾಜದ ಶಾಂತಿ ಕದಡುವಂತಾಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಕ್ಷಿದಾರರಿಗೆ ಕೋರ್ಟಿಗೆ ತೆರಳಲು ಸರ್ಕಾರದಿಂದ ಟಿಎ, ಡಿಎ ನೀಡುತ್ತಿರುವುದು ಸರಿಯಷ್ಟೆ. ಆದರೆ ಇದು ಅತ್ಯಂತ ಕಡಿಮೆ ಮೊತ್ತ(30-40ವರ್ಷ ಹಿಂದಿನ ದರ)ವಾಗಿದ್ದು, ಈಗಿನ ಪರಿಸ್ಥಿತಿಗೆ ತಕ್ಕಂತೆ ಬದಲಿಸಬೇಕು ಹಾಗೂ ಸಾಕ್ಷಿದಾರ ಕೋರ್ಟಿನಲ್ಲಿ ಸಾಕ್ಷಿ ನೀಡಿದ ಕೂಡಲೇ ಅಲ್ಲೇ ಹಣ ಪಾವತಿಸುವಂತಾದಲ್ಲಿ ಮಾತ್ರ ದೌರ್ಜನ್ಯಪ್ರಕರಣಗಳಲ್ಲಿ ನ್ಯಾಯ ಒದಗಿಸಬಹುದಾಗಿದೆ ಎಂದು ಅವರು ಒತ್ತಾಯಿಸಿದಾಗ, ಈ ಕುರಿತು ಸಭೆಯಲ್ಲಿ ನಡಾವಳಿಯನ್ನು ಕೈಗೊಂಡು ತಮಗೆ ಮನವಿ ಸಲ್ಲಿಸಿರಿ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮವಹಿಸುವುದಾಗಿ ಉಪವಿಭಾಗಾಧಿಕಾರಿ ತಿಳಿಸಿದರು.ಸದಸ್ಯ ಹೊಸೂರು ಕುಮಾರ್‌ ಮಾತನಾಡಿ, ದೌರ್ಜನ್ಯ ಪ್ರಕರಣಗಳು ನಡೆಯದಂತೆ ಎಲ್ಲ ಸಮುದಾಯದವರನ್ನು ಒಳಗೊಂಡು ಪ್ರತಿ ತಾಲೂಕುಗಳಲ್ಲೂ ಆಯೋಜಿಸಬೇಕೆಂದು ಒತ್ತಾಯಿಸಿದಾಗ, ಈ ಕುರಿತು ಎಲ್ಲ ತಾಲೂಕುಗಳ ತಹಸೀಲ್ದಾರ್‌ಗಳು ಸೂಕ್ತ ಕ್ರಮವಹಿಸಬೇಕೆಂದು ಉಪವಿಭಾಗಾಧಿಕಾರಿ ಸೂಚಿಸಿದರು.

ಸಮಿತಿ ಸದಸ್ಯರಾದ ನಾಗರಾಜು, ಜಿಲ್ಲಾ ಸಮಿತಿ ಸದಸ್ಯ ದಿವಾಕರ್‌, ದಲಿತ ಮುಖಂಡರಾದ ಕೆಂಪರಾಜು, ಶಿವಣ್ಣ, ತಹಸೀಲ್ದಾರ್‌ ಡಾ.ಎಸ್‌.ಯು. ಅಶೋಕ್‌, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್‌ಕುಮಾರ್‌, ಇತರ ತಾಲೂಕುಗಳ ಅಧಿಕಾರಿಗಳು ಇದ್ದರು.

ಅಂಬೇಡ್ಕರದ ಪೋಸ್ಟರ್ ವೈರಲ್

 

'ಭಾರತೀಯ ಸಂವಿಧಾನದ ಪಿತಾಮಹ' (Father of Indian Constitution) ಡಾ. ಬಿ.ಆರ್.ಅಂಬೇಡ್ಕರ್ (Dr B.R. Ambedkar) ಅವರ ಪುಣ್ಯತಿಥಿಯ (Death Anniversary) ಸಂದರ್ಭದಲ್ಲಿ ತಮಿಳುನಾಡಿನಲ್ಲಿ (Tamil Nadu) ವಿವಾದ ಸೃಷ್ಟಿಯಾಗಿದೆ. ಬಲಪಂಥೀಯ ಗುಂಪು (Right Wing Group) ಹಿಂದೂ ಮುನ್ನಾನಿ ಹಾಕಿರುವ ಪೋಸ್ಟರ್‌ಗಳಲ್ಲಿ ಸಂವಿಧಾನ ಶಿಲ್ಪಿಯನ್ನು ಕೇಸರಿ ಉಡುಪಿನಲ್ಲಿ (Saffron Dress) ಚಿತ್ರಿಸಿರುವ ಕುರಿತು ತಮಿಳುನಾಡಿನಲ್ಲಿ ಗದ್ದಲ ಎದ್ದಿದೆ. ಕೇಸರಿ ನಾಯಕನನ್ನು ವೈಭವೀಕರಿಸೋಣ ಎಂಬ ಅಡಿ ಬರಹದೊಂದಿಗೆ ಅಂಬೇಡ್ಕರ್ ಅವರ ಹಣೆಯಲ್ಲಿ ‘ತಿಲಕ’ ಇಟ್ಟಿರುವ ಹಾಗೂ ಕೇಸರಿ ಶರ್ಟ್‌ ಧರಿಸಿರುವ ಪೋಸ್ಟರ್‌ಗಳು ತಮಿಳುನಾಡಿನ ತಂಜಾವೂರು ಜಿಲ್ಲೆಯ ಹಲವೆಡೆ ಕಾಣಿಸಿಕೊಂಡಿವೆ.

ಇದನ್ನು ಓದಿ: ಹುಮನಾಬಾದ್‌: ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಎರಚಿದ ಕಿಡಿಗೇಡಿಗಳು

ಇನ್ನು, ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಯ ಸ್ಥಳೀಯ ಮುಖಂಡರು ನೀಡಿದ ದೂರಿನ ಆಧಾರದ ಮೇಲೆ, ಪೋಸ್ಟರ್‌ಗಳನ್ನು ಹಾಕಿದ್ದಕ್ಕಾಗಿ ಕುಂಭಕೋಣಂ ಪೊಲೀಸರು ಗುರುಮೂರ್ತಿ ಎಂಬ ಹಿಂದೂ ಮುನ್ನಾನಿ ಕಾರ್ಯಕರ್ತನನ್ನು ಬಂಧಿಸಿದ್ದಾರೆ. ತಮಿಳುನಾಡಿನಲ್ಲಿ ಜಾತಿ ಆಧಾರಿತ ತಾರತಮ್ಯದ ವಿರುದ್ಧ ಹೋರಾಡುವ ವಿಸಿಕೆ, ರಾಷ್ಟ್ರೀಯ ನಾಯಕನ ಕೇಸರಿಕರಣವನ್ನು ಖಂಡಿಸಿದೆ. ಅಲ್ಲದೆ, ತಂಜಾವೂರು ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಹಾಕಲಾಗಿದ್ದ ಪೋಸ್ಟರ್‌ಗಳನ್ನು ವಿಸಿಕೆ ಕಾರ್ಯಕರ್ತರು ಹರಿದು ಹಾಕಿದ್ದಾರೆ. ಹಿಂದೂ ಮುನ್ನಾನಿಯು ಈ ಹಿಂದೆಯೂ ಇದೇ ರೀತಿಯ ಪ್ರಯತ್ನವನ್ನು ಮಾಡಿದ್ದು, ಪೂಜ್ಯ ಸಂತ ಕವಿ ತಿರುವಳ್ಳುವರ್ ಕೊಯಮತ್ತೂರಿನಲ್ಲಿ ನಡೆದ ಪುಸ್ತಕ ಮೇಳದಲ್ಲಿ ಸಾಮಾನ್ಯ ಬಿಳಿಯ ಬದಲಿಗೆ ಕೇಸರಿ ನಿಲುವಂಗಿಯನ್ನು ತೋರಿಸಿದ್ದರು. ಇದು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಿಂದ ಕೇಸರಿಕರಣದ ಆರೋಪಗಳೊಂದಿಗೆ ಗದ್ದಲ ಉಂಟುಮಾಡಿತ್ತು.

ವಿದುತಲೈ ಚಿರುತೈಗಲ್ ಕಚ್ಚಿ ನಾಯಕ ಮತ್ತು ಸಂಸದ ತೊಲ್ಕಪ್ಪಿಯನ್ ತಿರುಮಾವಳವನ್ ಅವರು ಕೇಸರಿ ಶರ್ಟ್‌ನಲ್ಲಿ ಹಣೆಯ ಮೇಲೆ ಪವಿತ್ರ ತಿಲಕ ಇರುವ ಡಾ. ಬಿ.ಆರ್‌. ಅಂಬೇಡ್ಕರ್ ಅವರ ಪೋಸ್ಟರ್ ಅನ್ನು ಟ್ವೀಟ್ ಮಾಡಿದ್ದಾರೆ. ಈ ಪೋಸ್ಟರ್ ಅಂಬೇಡ್ಕರ್ ಅವರನ್ನು ಕೀಳಾಗಿ ಮಾಡುವ ಮಾರ್ಗವಾಗಿದೆ ಎಂದೂ ಸಂಸದ  ಬಣ್ಣಿಸಿದ್ದಾರೆ. 

Follow Us:
Download App:
  • android
  • ios