ಮೈಸೂರು[ಆ. 16]  ಮೈಸೂರು ದಸರಾ ಎಂದಾಕ್ಷಣ ನಮ್ಮ ಕರ್ನಾಟಕದ ಹೆಮ್ಮೆ ಕಣ್ಣ ಮುಂದೆ ಬರುತ್ತದೆ. ಈ ಬಾರಿ ಮೈಸೂರು ದಸರಾದಲ್ಲಿ ಆನೆಗಳು ಎಂದಿನಂತೆ ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಲಿದ್ದು ಲಿಸ್ಟ್ ಫೈನಲ್ ಆಗಿದೆ.

ಎರಡು ತಂಡಗಳಾಗಿ ಮೈಸೂರಿಗೆ ಬರಲಿರುವ ದಸರಾ ಗಜಪಡೆ ತಾಲೀಮು ನಡೆಸಲಿದೆ. ಮೊದಲ ತಂಡದಲ್ಲಿ 6 ಆನೆಗಳು. ಎರಡನೆ ತಂಡದಲ್ಲಿ 8 ಆನೆಗಳಿರಲಿವೆ. ಈ ಬಾರಿ ಎರಡು ಆನೆಗಳು ಹೆಚ್ಚುವರಿಯಾಗಿ ದಸರಾದಲ್ಲಿ ಭಾಗಿಯಾಗಲಿವೆ. ಅರ್ಜುನ ಆನೆಯೇ ಅಂಬಾನಿ ಹೊರುವುದು ಬಹುತೇಕ ಪಕ್ಕಾ ಇದೆ. ಆದರೆ ಅಂತಿಮ ಕ್ಷಣದಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ತರಬೇತಿ ನೀಡಿದ ಮೂರು ಆನೆಗಳಲ್ಲಿ ಒಂದನ್ನು ಆಯ್ಕೆ ಮಾಡಲಾಗುತ್ತದೆ.

ಮೈಸೂರು ಜಂಬೂ ಅಂಬಾರಿ ಹೊತ್ತ ದ್ರೋಣ ಇನ್ನಿಲ್ಲ

ದ್ರೊಣನಿಲ್ಲದ ದಸರಾ: ರಾಜ ಗಾಂಭೀರ್ಯದ ನಡಿಗೆಯೊಂದಿಗೆ, ಲಕ್ಷಾಂತರ ಮಂದಿಯ ಸಮ್ಮುಖದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ಜಗತ್ಪ್ರಸಿದ್ಧ ಜಂಬೂ ಸವಾರಿ ಮೆರವಣೆಗೆಯಲ್ಲಿ ಕಳೆದ ವರ್ಷ ಅಂಬಾರಿ ಹೊತ್ತಿದ್ದ ದ್ರೋಣ ದೀಢೀರ್ ಅಸುನೀಗಿದ್ದನ್ನು ಇನ್ನೂ ನಮ್ಮ ಬಳಿ ಅರಗಿಸಿಕೊಳ್ಳಲಾಗುತ್ತಿಲ್ಲ. ಈ ಬಾರಿ ದ್ರೋಣನಿಲ್ಲದೆ ದಸರಾ ನಡೆಯಲಿದೆ.

ಆಗಸ್ಟ್ 22ಕ್ಕೆ ಮೊದಲ ತಂಡದ ಆನೆಗಳ ಆಗಮನವಾಗಲಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಎರಡನೆ ತಂಡದ ಆನೆಗಳು ಮೈಸೂರಿಗೆ ಹೆಜ್ಜೆ ಇಡಲಿದ್ದು ಯಾವ ಆನೆ ಎಲ್ಲಿಂದ ಬರಲಿದೆ? 

1. ಅರ್ಜುನ- 59 ವರ್ಷ- ಬಳ್ಳೆ ಆನೆ ಶಿಬಿರ.
2. ಬಲರಾಮ - 61 ವರ್ಷ - ಮತ್ತಿಗೋಡು ಆನೆ ಶಿಬಿರ.
3. ಅಭಿಮನ್ಯು - 53 ವರ್ಷ ಮತ್ತಿಗೋಡು ಆನೆ ಶಿಬಿರ.
4. ವರಲಕ್ಷೀ - 63 ವರ್ಷ - ಮತ್ತಿಗೋಡು ಆನೆ ಶಿಬಿರ.
5. ಕಾವೇರಿ - 41 ವರ್ಷ - ದುಬಾರೆ ಆನೆ ಶಿಬಿರ.
6. ವಿಜಯ - 62 ವರ್ಷ - ದುಬಾರೆ ಆನೆ ಶಿಬಿರ.
7. ವಿಕ್ರಮ - 46 ವರ್ಷ - ದುಬಾರೆ ಆನೆ ಶಿಬಿರ.
8. ಗೋಪಿ - 37 ವರ್ಷ - ದುಬಾರೆ ಆನೆ ಶಿಬಿರ.
9. ಧನಂಜಯ - 36 ವರ್ಷ - ದುಬಾರೆ ಆನೆ ಶಿಬಿರ.
10. ಈಶ್ವರ - 49 ವರ್ಷ - ದುಬಾರೆ ಆನೆ ಶಿಬಿರ.
11. ದುರ್ಗಾಪರಮೇಶ್ವರಿ - 52 ವರ್ಷ - ಕೆ.ಗುಡಿ ಆನೆ ಶಿಬಿರ.
12. ಜಯಪ್ರಕಾಶ್ - 57 ವರ್ಷ - ರಾಂಪುರ ಆನೆ ಶಿಬಿರ.
ಹೆಚ್ಚುವರಿಯಾಗಿ ಎರಡು ಆನೆಗಳ ಆಗಮನ.
13. ಲಕ್ಷೀ - 17 ವರ್ಷ - ಬಂಡಿಪುರ ಹುಲಿ ಸಂರಕ್ಷಿತ ಅರಣ್ಯ.
14. ರೋಹಿತ್ - 19 ವರ್ಷ - ಬಂಡಿಪುರ ಹುಲಿ ಸಂರಕ್ಷಕ ಅರಣ್ಯ.