ಇಲ್ಲಿನ ಆಶ್ರಯ ಬಡಾವಣೆಯ ಒಂದು ಮುಖ್ಯ ರಸ್ತೆ ಸೇರಿದಂತೆ 30 ಅಡಿ ಅಗಲವಿರುವ ಮೂರು ಅಡ್ಡಬೀದಿಗೆ 80 ಲಕ್ಷ ವೆಚ್ಚದಲ್ಲಿ ಸರ್ಕಾರ ನೂತನ ಕಾಂಟ್ ರಸ್ತೆ, ಚರಂಡಿ ಸೌಲಭ್ಯ ಒದಗಿಸಿಕೊಟ್ಟಿದೆ.
ತಲಕಾಡು : ಇಲ್ಲಿನ ಆಶ್ರಯ ಬಡಾವಣೆಯ ಒಂದು ಮುಖ್ಯ ರಸ್ತೆ ಸೇರಿದಂತೆ 30 ಅಡಿ ಅಗಲವಿರುವ ಮೂರು ಅಡ್ಡಬೀದಿಗೆ 80 ಲಕ್ಷ ವೆಚ್ಚದಲ್ಲಿ ಸರ್ಕಾರ ನೂತನ ಕಾಂಟ್ ರಸ್ತೆ, ಚರಂಡಿ ಸೌಲಭ್ಯ ಒದಗಿಸಿಕೊಟ್ಟಿದೆ.
ಆದರೆ ಸ್ಥಳೀಯ ಪಂಚಾಯಿತಿ ನಿರ್ವಹಣೆ ಮಾಡದೆ ಚರಂಡಿಯಲ್ಲಿ ಆಳೆತ್ತರದ ಗಿಡಗಂಟಿ ಬೆಳೆದುಕೊಂಡಿದೆ. ಇಲ್ಲಿಗೆ ಕಾಂಕ್ರಿಟ್ ಚರಂಡಿ ಸೌಲಭ್ಯವನ್ನು ಎರಡು ವರ್ಷದ ಹಿಂದೆಯೇ ಸರ್ಕಾರ ಕಲ್ಪಿಸಿಕೊಟ್ಟಿದ್ದರು. ಆಗಾಗ್ಗೆ ಚರಂಡಿ ಸ್ವಚ್ಛತೆ ಕೈಗೊಳ್ಳಲು ಪಂಚಾಯಿತಿ ನಿರ್ಲಕ್ಷ್ಯವಹಿಸಿದ್ದು ಪರಿಣಾಮ ಚರಂಡಿ ತುಂಬಾ ಗಿಡಗಂಟಿ ಬೆಳೆದು ತ್ಯಾಜ್ಯದಿಂದ ತುಂಬಿ ಹೋಗಿದೆ.
ಇಲ್ಲಿನ ಪಂಚಾಯಿತಿಗೆ ಚರಂಡಿ ಸ್ಬಚ್ಚ ಮಾಡುವಂತೆ ಸಾಕಷ್ಟು ಬಾರಿ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ ಎಂದುಬಡಾವಣೆ ನಿವಾಸಿಗಳು ಅಸಮಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಇಲ್ಲಿನ ಚರಂಡಿ ಸ್ವಚ್ಚತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬಡಾವಣೆ ನಿವಾಸಿಗಳು ಒತ್ತಾಯಿಸಿದ್ದಾರೆ.
ಪೂರ್ಣಕರ್ತವ್ಯಕ್ಕೆ ನಿಯೋಜಿಸಿ
ತಲಕಾಡು, ಟಿ. ನರಸೀಪುರ ತಾಲೂಕಿನ 2ನೇ ದೊಡ್ಡ ಗ್ರಾಪಂ ಹಾಗೂ ಪ್ರಸಿದ್ಧ ಪ್ರವಾಸಿ ತಾಣ. ಹೀಗಾಗಿ ಇಲ್ಲಿನ ಪಂಚಾಯಿತಿಗೆ ವಾರದ ಪೂರ್ಣದಿನಗಳ ಕರ್ತವ್ಯ ನಿರ್ವಹಿಸುವ ಪಿಡಿಒ ನೇಮಿಸುವ ಅಗತ್ಯವಿದೆ.
ಆದರೆ ಇಲ್ಲಿಗೆ ದೂರದ ಬನ್ನೂರು ಹೋಬಳಿ ಭಾಗದ ಪಂಚಾಯಿತಿಯಿಂದ ತಲಕಾಡು ಪಂಚಾಯಿತಿಗೆ ಇತ್ತೀಚೆಗಷ್ಟೇ ವರ್ಗಾವಣೆಯಾಗಿ ಬಂದಿರುವ ನೂತನ ಪಿಡಿಒ ಮಹೇಶ್ ಅವರಿಗೆ ಬನ್ನೂರು ಹೋಬಳಿ ಬಿ.ಸೀಹಳ್ಳಿ ಹಾಗು ತಲಕಾಡು ಎರಡು ಕಡೆಯ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದರಿಂದ ತಲಕಾಡು ಗ್ರಾಪಂ ಸೇವೆಗೆ ನಿತ್ಯ ಆಗಮಿಸುವ ಸಾರ್ವಜನಿಕರಿಗೆ ಅನಾನುಕೂಲವಾಗಿದೆ. ಹೀಗಾಗಿ ಕೂಡಲೇ ಇಲ್ಲಿನ ಗ್ರಾಪಂಗೆ ಪೂರ್ಣ ಕರ್ತವ್ಯಕ್ಕೆ ಪಿಡಿಒ ನಿಯೋಜಿಸಿಕೊಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಟ್ರಾಫಿಕ್ ತಡೆಗೆ ಡಿಕೆಶಿ ಪ್ಲಾನ್
ಬೆಂಗಳೂರು (ಅ.08): ವಾರದಲ್ಲಿ ಮೂರು ದಿನ ಬೆಂಗಳೂರಿನಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುತ್ತಿದೆ. ಇದನ್ನು ಸುಧಾರಿಸಲು ಮೆಟ್ರೋ ಸೇರಿದಂತೆ ಇನ್ನಿತರೆ ಸಾರಿಗೆ ವ್ಯವಸ್ಥೆಗಳ ಸಂಪರ್ಕ ಕೊಂಡಿ ಯೋಜನೆಯ ಅಗತ್ಯವಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಹೊರ ವರ್ತುಲ ರಸ್ತೆಯ ಸಂಚಾರ ದಟ್ಟಣೆ ನಿವಾರಣೆಗೆ ಹೊರವರ್ತುಲ ರಸ್ತೆ ಕಂಪನಿಗಳ ಸಂಘದ (ಒಆರ್‌ಆರ್ ಸಿಎ) ಸದಸ್ಯರೊಂದಿಗೆ ಕಾಡುಬೀಸನಹಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, ಜನರ ಸಮಯ ರಸ್ತೆಗಳಲ್ಲಿ ವ್ಯರ್ಥವಾಗಲು ಬಿಡುವುದಿಲ್ಲ.
ಬೆಂಗಳೂರಿನ ಐದನೇ ಒಂದು ಭಾಗದಷ್ಟು ಆದಾಯ ಹೊರ ವರ್ತುಲ ರಸ್ತೆಯ ಉದ್ದಿಮೆಗಳಿಂದಲೇ ಬರುತ್ತಿದೆ. ಬೆಂಗಳೂರಿನ ಹಾಗೂ ಹೊರ ವರ್ತುಲ ರಸ್ತೆಯ ಉದ್ದಿಮೆಗಳ ಮಹತ್ವ ಮತ್ತಿತರ ವಿಚಾರಗಳ ಬಗ್ಗೆ ಅರಿವಿದೆ. ನೌಕರರರಿಗೆ, ಆ ಭಾಗದ ನಿವಾಸಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಸಮಸ್ಯೆ ನಿವಾರಿಸಲು ಆದ್ಯತೆ ನೀಡುತ್ತೇವೆ ಎಂದರು. ಹೆಚ್ಚು ಸಂಚಾರ ದಟ್ಟಣೆ ಉಂಟಾಗುವ 6ರಿಂದ 8 ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಸಂಚಾರ ದಟ್ಟಣೆಗೆ ಇರುವ ಸಮಸ್ಯೆಗಳನ್ನು ಮೊದಲು ನಿವಾರಿಸಲಾಗುವುದು.
ಉದ್ಯೋಗ ಸೃಷ್ಟಿ ಉದ್ದೇಶದಿಂದ ಸೂಕ್ತ ಸ್ಥಳದಲ್ಲಿ ಮದ್ಯದಂಗಡಿ ತೆರೆಯಲು ಚಿಂತನೆ: ಡಿಕೆಶಿ
ಮುಂದಿನ ಮೂರು ತಿಂಗಳಲ್ಲಿ ರಸ್ತೆ ಗುಂಡಿ ಸಮಸ್ಯೆ ಹಾಗೂ ಸಂಚಾರ ದಟ್ಟಣೆಗೆ ಕಾರಣವಾಗಿರುವ ಅನಧಿಕೃತ ಅಂಗಡಿ- ಮುಂಗಟ್ಟುಗಳನ್ನು ಗುರುತಿಸಿ ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ತೆರವುಗೊಳಿಸಲಾಗುವುದು ಎಂದು ತಿಳಿಸಿದರು. ಬೆಂಗಳೂರಿನ ಪೊಲೀಸ್, ಬಿಬಿಎಂಪಿ, ಬಿಡಿಎ, ಮೆಟ್ರೋ ಕಮಿಷನರ್‌ಗಳಿಗೆ ಸಂಚಾರ ದಟ್ಟಣೆ ಬಗ್ಗೆ ಅರಿವಿದೆ, ಅವರೂ ಸಹ ಸರ್ಕಾರದ ಒತ್ತಾಸೆಯಂತೆ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
