ಬೆಂಗಳೂರು (ಮೇ. 15): ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆ ಶೀಘ್ರದಲ್ಲೇ ಕೊರೋನಾ ಮುಕ್ತವಾಗಿ ಕೆಂಪು ವಲಯದಿಂದ ಕಿತ್ತಳೆ ವಲಯವಾಗುವತ್ತ ಸಾಗಿದೆ.

ಜಿಲ್ಲೆಯಲ್ಲಿ ಕಳೆದ 14 ದಿನಗಳಿಂದ ಯಾವುದೇ ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿಲ್ಲ. ಜಿಲ್ಲೆಯನ್ನು ಇನ್ನಿಲ್ಲದಂತೆ ಕಾಡಿದ್ದ ನಂಜನಗೂಡಿನ ಫಾರ್ಮಾ ಕಂಪನಿಯಲ್ಲೂ ಯಾವುದೇ ಹೊಸ ಪ್ರಕರಣಗಳು ಕಂಡುಬರುತ್ತಿಲ್ಲ.

ಹೊರರಾಜ್ಯದ ಗರ್ಭಿಣಿ, ವೃದ್ಧರು, ಮಕ್ಕಳಿಗೆ ಹೋಂ ಕ್ವಾರಂಟೈನ್‌ ಇಲ್ಲ

ಅಲ್ಲದೆ, ಈ ವರೆಗೆ ಪತ್ತೆಯಾಗಿರುವ 88 ಪ್ರಕರಣಗಳ ಪೈಕಿ 86 ಸೋಂಕಿತರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇನ್ನು ಇಬ್ಬರು ಸಕ್ರಿಯ ಸೋಂಕಿತರು ಮಾತ್ರವೇ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರೆ ಜಿಲ್ಲೆ ಕೊರೋನಾ ಮುಕ್ತವಾಗಲಿದೆ.

ರಾಜ್ಯದಲ್ಲಿ 2ನೇ ಅತಿ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿರುವ ಮೈಸೂರಿನಲ್ಲಿ ಸಮರ್ಥವಾಗಿ ಕೊರೋನಾ ನಿಯಂತ್ರಿಸುವಲ್ಲಿ ಅಲ್ಲಿನ ಜಿಲ್ಲಾಡಳಿತ ಯಶಸ್ವಿಯಾಗಿದ್ದು ಜನರು ನಿರಾಳರಾಗಿದ್ದಾರೆ.