ಆ.31ಕ್ಕೆ ಮೈಷುಗರ್‌ ಪ್ರಾಯೋಗಿಕ ಕಾರ್ಯಾರಂಭ: ಸಚಿವ ಶಂಕರ ಮುನೇನಕೊಪ್ಪ

ನಾಲ್ಕು ವರ್ಷದಿಂದ ಸ್ಥಗಿತಗೊಂಡಿದ್ದ ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿ ಆ.31ರಂದು ಕಬ್ಬು ಅರೆಯುವಿಕೆಗೆ ಪ್ರಾಯೋಗಿಕ ಚಾಲನೆ ನೀಡಲಾಗುವುದು ಎಂದು ಸ​ಕ್ಕರೆ ಸ​ಚಿವ ಶಂಕರ ಪಾಟೀಲ ಮು​ನೇ​ನ​ಕೊಪ್ಪ ಹೇಳಿದರು. 

MySugar trial launch on 31st August says Shankar Patil Munenakoppa gvd

ಮಂಡ್ಯ (ಆ.30): ನಾಲ್ಕು ವರ್ಷದಿಂದ ಸ್ಥಗಿತಗೊಂಡಿದ್ದ ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿ ಆ.31ರಂದು ಕಬ್ಬು ಅರೆಯುವಿಕೆಗೆ ಪ್ರಾಯೋಗಿಕ ಚಾಲನೆ ನೀಡಲಾಗುವುದು ಎಂದು ಸ​ಕ್ಕರೆ ಸ​ಚಿವ ಶಂಕರ ಪಾಟೀಲ ಮು​ನೇ​ನ​ಕೊಪ್ಪ ಹೇಳಿದರು. ಭಾನುವಾರ ಕಬ್ಬು ಅ​ರೆ​ಯಲು ಸ​ಜ್ಜಾ​ಗಿ​ರುವ ಕಾರ್ಖಾನೆಯ ಎಲ್ಲ ಘ​ಟ​ಕ​ಗ​ಳಿಗೂ ಭೇಟಿ ನೀಡಿ ಪ​ರಿ​ಶೀ​ಲನೆ ನ​ಡೆ​ಸಿದ ಬ​ಳಿಕ ಸುದ್ದಿ​ಗಾ​ರ​ರೊಂದಿಗೆ ಮಾ​ತ​ನಾ​ಡಿ, ಆ.31ಕ್ಕೆ ಕಾ​ರ್ಖಾನೆಗೆ ಕಬ್ಬು ತ​ರಲು ರೈತರಿಗೆ ತಿ​ಳಿ​ಸಿ​ದ್ದೇವೆ. ಅಂದೇ ಪ್ರಾ​ಯೋ​ಗಿ​ಕ​ವಾಗಿ ಕಾರ್ಯಾರಂಭ ಮಾಡಲಾಗುವುದು. ಸೆ.10ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕೃತವಾಗಿ ಕಾರ್ಖಾನೆ ಆರಂಭಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ ಎಂದರು. 

ಮೈ​ಷು​ಗರ್‌ ಕಾರ್ಖಾನೆಯ ಕಷ್ಟದ ದಿನಗಳು ಮುಗಿದಿವೆ. ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ದಿಸೆಯಲ್ಲಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಅ​ನು​ದಾ​ನದ ಕೊ​ರೆತೆ ಉಂಟಾ​ಗದಂತೆ ಎ​ಚ್ಚರ ವ​ಹಿ​ಸಿ​ದ್ದೇವೆ. ಹಿಂದಿನ ವ್ಯ​ವಸ್ಥೆ ಹಾಗೂ ಹಿಂದಿನ ಕಹಿ ಘ​ಟ​ನೆ​ಗಳು ನಮ್ಮ ಕಣ್ಮುಂದಿವೆ. ಅದನ್ನು ಗಮನದಲ್ಲಿಟ್ಟುಕೊಂಡು ತಾಂತ್ರಿಕ ವ​ರ​ದಿ​ಯನ್ನು ಆ​ಧರಿಸಿ ಎಲ್ಲರ ಸ​ಹ​ಕಾ​ರ​ದಿಂದ ಕಾರ್ಖಾನೆ ಪು​ನ​ಶ್ಚೇ​ತ​ನಕ್ಕೆ ಅ​ಧಿ​ಕಾ​ರಿ​ಗ​ಳಿಗೆ ಸೂ​ಚನೆ ನೀ​ಡಿರುವುದಾಗಿ ತಿಳಿಸಿದರು.

Mandya: ಭಾರೀ ಮಳೆಗೆ ಕೊಚ್ಚಿ ಹೋದ ಸೇತುವೆ: ರಸ್ತೆ ಸಂಪರ್ಕ ಕಡಿತ

ನಷ್ಟದ ಹಾದಿ ಹಿಡಿಯದಂತೆ ಎಚ್ಚರಿಕೆ: ಕಂಪನಿ ಮುಂದೆ ನ​ಷ್ಟದ ಹಾ​ದಿ​ಗೆ ಹೋಗದ ರೀ​ತಿ​ಯಲ್ಲಿ ತಾಂತ್ರಿಕ ವ​ರದಿ ಮತ್ತು ಹ​ಣ​ಕಾ​ಸಿನ ವ್ಯ​ವ​ಸೆ ಮಾಡಿಕೊಂಡು ಹೆಜ್ಜೆ ಇಡಲಾಗುತ್ತಿದೆ. ಹಿಂದೆ ಎ​ಲ್ಲೆಲ್ಲಿ ಹಣ ಪೋ​ಲಾ​ಗುತ್ತಿತ್ತು. ಯಾವ ಘ​ಟ​ಕ​ದಲ್ಲಿ ನಷ್ಟಉಂಟಾ​ಗು​ತ್ತಿತ್ತು ಎಂಬು​ದನ್ನು ಪತ್ತೆ ಹಚ್ಚಿ ಅ​ದನ್ನು ತ​ಡೆ​ಗ​ಟ್ಟುವ ನಿ​ಟ್ಟಿ​ನಲ್ಲಿ ಕಾ​ರ‍್ಯ​ಯೋ​ಜನೆ ರೂ​ಪಿ​ಸಿ​ದ್ದೇವೆ ಎಂದು ವಿ​ವ​ರಿ​ಸಿ​ದರು. ಮುಖ್ಯ​ಮಂತ್ರಿ ಬ​ಸ​ವ​ರಾಜ ಬೊ​ಮ್ಮಾಯಿ ಅ​ವರು ಈ ಭಾ​ಗದ ರೈ​ತ​ರಿಗೆ ನೀ​ಡಿದ್ದ ಮಾ​ತಿ​ನಂತೆ ಕಾರ್ಖಾನೆ​ಯ​ನ್ನು ಪ್ರಾ​ರಂಭಿ​ಸಿ​ದ್ದೇವೆ. ಮುಂದೆ ಕಾರ್ಖಾನೆ ಎಂದಿಗೂ ನಿ​ಲ್ಲದ ರೀತಿ​ಯಲ್ಲಿ ನ​ಡೆಸಿ ತೋ​ರಿ​ಸು​ತ್ತೇವೆ ಎಂದು ದೃಢವಾಗಿ ಹೇ​ಳಿ​ದರು.

ತಾಂತ್ರಿಕ ಅಡೆ-ತಡೆ: ನಿ​ಗ​ದಿತ ಅ​ವ​ಧಿ​ಯೊ​ಳಗೆ ಕಾರ್ಖಾನೆ ಪ್ರಾ​ರಂಭ ಮಾ​ಡಲು ಕೆ​ಲವು ತಾಂತ್ರಿಕ ತೊಂದ​ರೆ​ಗಳು ಎ​ದು​ರಾ​ಗಿದ್ದವು. ಯಂತ್ರೋ​ಪ​ಕ​ರ​ಣ​ಗ​ಳನ್ನು ಬೇ​ರೆ​ಡೆಗೆ ಕೊಂಡೊಯ್ದು ದು​ರಸ್ತಿ ಮಾ​ಡ​ಬೇ​ಕಾದ ಪ​ರಿ​ಸ್ಥಿ​ತಿ ಇತ್ತು. ಅ​ಧಿ​ಕಾ​ರಿ​ಗ​ಳೊಂದಿಗೆ ನಿ​ರಂತರ ಸಂಪರ್ಕದಲ್ಲಿದ್ದು ಎಲ್ಲ ಅಡೆ ತ​ಡೆ​ಗ​ಳನ್ನೂ ನಿ​ವಾ​ರಿ​ಸಿ ಕಾರ್ಖಾನೆ ಪ್ರಾ​ರಂಭಿ​ಸು​ತ್ತಿ​ದ್ದೇವೆ. ಅದಕ್ಕೆ ಸ್ವಲ್ಪ ತ​ಡ​ವಾ​ಗಿದೆ ಎಂದು ಪ್ರ​ಶ್ನೆ​ಯೊಂದ​ಕ್ಕೆ ಉ​ತ್ತ​ರಿ​ಸಿ​ದರು. ಮೈ​ಷು​ಗರ್‌ ಕಾರ್ಖಾನೆ ಕರ್ನಾಟ​ಕಕ್ಕೆ ಹೆ​ಮ್ಮೆಯ ಕಾರ್ಖಾನೆ​ಯಾ​ಗಿದೆ. ಇ​ದನ್ನು ಹೇ​ಗಾ​ದರೂ ಮಾಡಿ ಪು​ನ​ಶ್ಚೇ​ತನ ಮಾ​ಡ​ಬೇಕು ಎ​ಂಬುದು ಮು​ಖ್ಯ​ಮಂತ್ರಿ​ಯ​ವರ ಉ​ದ್ದೇ​ಶ​ವಾ​ಗಿತ್ತು. 

ಅದಕ್ಕಾಗಿ ತಾಂತ್ರಿಕ ಸ​ಮಿತಿ ರ​ಚಿಸಿ ಅ​ಧ್ಯ​ಯನ ಮಾಡಿ ವ​ರದಿ ತೆ​ಗೆ​ದು​ಕೊಂಡ ಬಳಿಕ ಹ​ಣ​ಕಾ​ಸಿನ ವ್ಯ​ವ​ಸ್ಥೆ​ಯನ್ನೂ ನೋ​ಡಿ​ಕೊಂಡು ಯಾ​ವುದೇ ರೀ​ತಿಯಲ್ಲೂ ಕೊ​ರ​ತೆ​ಯಾ​ಗ​ದಂತೆ ಎ​ಚ್ಚರ ವ​ಹಿಸಿ ಪು​ನ​ರಾ​ರಂಭಕ್ಕೆ ಯೋ​ಜನೆ ರೂ​ಪಿ​ಸಿ​ದೆವು. ಪ್ರಾ​ಮಾ​ಣಿಕ ಅ​ಧಿ​ಕಾ​ರಿ​ಗ​ಳನ್ನು ಕಾರ್ಖಾನೆಗೆ ನಿ​ಯೋ​ಜನೆ ಮಾಡಿ ಎ​ಲ್ಲ​ವನ್ನೂ ಸ​ಜ್ಜು​ಗೊ​ಳಿ​ಸ​ಲಾ​ಯಿತು. ಅ​ದ​ರಿಂದಾಗಿ ಸು​ಸೂ​ತ್ರ​ವಾಗಿ ಕಾ​ರ್ಖಾನೆ ಆ​ರಂಭ​ವಾ​ಗು​ತ್ತಿದೆ ಎಂದರು. ಕಾರ್ಖಾನೆ​ಯಲ್ಲಿ ಸಹ ವಿ​ದ್ಯುತ್‌ ಘ​ಟಕ ಇದೆ. ಡಿ​ಸ್ಟಿ​ಲರಿ ಇದೆ. ಇ​ದನ್ನೂ ಸಹ ಉ​ಪ​ಯೋ​ಗಿ​ಸಿ​ಕೊಂಡು ಲಾ​ಭ​ದಾ​ಯ​ಕವಾಗಿ ಕಾರ್ಖಾನೆ​ಯ​ನ್ನು ಮುನ್ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಕಾರ್ಖಾನೆಯಲ್ಲಿ ಎ​ಥ​ನಾಲ್‌ ಘ​ಟಕ ಸ್ಥಾ​ಪಿ​ಸ​ಲಾ​ಗು​ವುದು ಎಂದು ಹೇ​ಳಿ​ದರು.

4 ಲಕ್ಷ ಟನ್‌ ಕಬ್ಬು ಒ​ಪ್ಪಿಗೆ: ಮೈ​ಷು​ಗರ್‌ ವ್ಯಾ​ಪ್ತಿ​ಯಲ್ಲಿ ಸಧ್ಯ 4 ಲಕ್ಷ ಟನ್‌ ಕಬ್ಬು ಒ​ಪ್ಪಿಗೆ ಮಾ​ಡಿ​ಕೊ​ಳ್ಳ​ಲಾ​ಗಿದೆ. ಇನ್ನೂ ಹೆ​ಚ್ಚು​ವರಿ ಕ​ಬ್ಬಿನ ಅ​ಗ​ತ್ಯ​ವಿದ್ದು, ಈ ಹಿಂದೆ ಮೈ​ಷು​ಗರ್‌ ವ್ಯಾ​ಪ್ತಿ​ಯಲ್ಲಿ ಬ​ರ​ಬ​ಹು​ದಾದ ಕ​ಬ್ಬನ್ನೂ ಪ​ಡೆ​ದು​ಕೊ​ಳ್ಳುವ ನಿ​ಟ್ಟಿ​ನ​ಲ್ಲಿ ಸರ್ಕಾರ​ದೊಂದಿಗೆ ವ್ಯ​ವ​ಹ​ರಿಸಿ ಕ್ರಮ ಕೈ​ಗೊ​ಳ್ಳ​ಲಾ​ಗು​ವುದು. ಜೊ​ತೆಗೆ ಇ​ತರೆ ಕಾರ್ಖಾನೆ​ಗ​ಳಿಗೂ ನ​ಷ್ಟ​ವಾ​ಗದ ರೀ​ತಿ​ಯಲ್ಲಿ ಎ​ಚ್ಚರ ವ​ಹಿ​ಸ​ಲಾ​ಗು​ವುದು ಎಂ​ದರು.

ಸೆಸ್ಕ್‌ಗೆ 31 ಕೋ​ಟಿ ರು. ಪಾ​ವತಿ: ಕಾರ್ಖಾನೆಗೆ ಸ​ರ​ಬ​ರಾಜು ಮಾ​ಡಿದ ವಿ​ದ್ಯುತ್‌ಗಾಗಿ ಚಾ​ಮುಂಡೇ​ಶ್ವರಿ ವಿ​ದ್ಯುತ್‌ ಸ​ರ​ಬ​ರಾಜು ನಿ​ಗ​ಮಕ್ಕೆ 31 ಕೋಟಿ ರು. ಬಾಕಿ ಪಾ​ವತಿ ಮಾ​ಡ​ಲಾ​ಗಿದೆ. ಉ​ಳಿ​ದಂತೆ ಕಾರ್ಖಾನೆಗೆ ಅ​ಗ​ತ್ಯ​ವಾ​ಗಿ​ರುವ ದು​ಡಿ​ಯುವ ಬಂಡ​ವಾ​ಳ​ವನ್ನೂ ಹಂತ ಹಂತ​ವಾಗಿ ಪ​ರಿ​ಶೀ​ಲನೆ ನ​ಡೆಸಿ ಬಿ​ಡು​ಗ​ಡೆಗೆ ಕ್ರಮ ವ​ಹಿ​ಸ​ಲಾ​ಗು​ವುದು ಎಂದು ಭ​ರ​ವಸೆ ನೀ​ಡಿ​ದರು.

ಗಣೇಶ, ಸಾವರ್ಕರ್‌ ಹೆಸರಲ್ಲಿ ಬಿಜೆಪಿ ರಾಜಕೀಯ: ಚಲುವರಾಯಸ್ವಾಮಿ

33 ಕಾರ್ಖಾನೆ​ಗಳಿಗೆ ಅ​ನು​ಮತಿ: ರಾ​ಜ್ಯದಲ್ಲಿ​ರುವ ಸಕ್ಕರೆ ಕಾರ್ಖಾನೆಗಳ ಪೈಕಿ 33 ಕಾರ್ಖಾನೆ​ಗ​ಳಿಗೆ ಎ​ಥೆ​ನಾಲ್‌ ಉ​ತ್ಪಾ​ದ​ನೆಗೆ ಅ​ನು​ಮತಿ ನೀ​ಡ​ಲಾ​ಗಿದೆ. ಶೀಘ್ರ ಎಲ್ಲ ಕಾರ್ಖಾನೆ​ಗಳೂ ಎ​ಥೆ​ನಾಲ್‌ ಘ​ಟ​ಕ​ಗ​ಳನ್ನು ಅ​ಳ​ವ​ಡಿ​ಸಿ​ಕೊಂಡು ಶೀಘ್ರ ಕಾ​ರಾರ‍ಯ​ರಂಭ ಮಾ​ಡ​ಲಿವೆ ಎಂದು ವಿ​ಶ್ವಾಸ ವ್ಯ​ಕ್ತ​ಪ​ಡಿ​ಸಿ​ದರು. ಕಾರ್ಖಾನೆ ವ್ಯ​ವ​ಸ್ಥಾ​ಪ​ಕ ನಿರ್ದೇಶಕ ಪಾ​ಟೀಲ್‌ ಅಪ್ಪಾ ಸಾ​ಹೇಬ, ಪ್ರ​ಧಾನ ವ್ಯ​ವ​ಸ್ಥಾ​ಪಕ ಬಿ.ಸಿ. ಶಿ​ವಾ​ನಂದ​ಮೂರ್ತಿ, ಮಾಜಿ ಶಾ​ಸಕ ಕೆ.ಟಿ. ಶ್ರೀ​ಕಂಠೇ​ಗೌಡ, ಬಿ​ಜೆಪಿ ಮು​ಖಂಡ ಡಾ. ಸಿ​ದ್ದ​ರಾ​ಮಯ್ಯ, ರೈ​ತ​ ಮು​ಖಂಡ​ರಾದ ಸು​ನಂದಾ ಜ​ಯರಾಂ, ಕೆ. ಬೋ​ರಯ್ಯ, ಕಬ್ಬು ಬೆ​ಳೆ​ಗಾ​ರರ ಸಂಘದ ಅ​ಧ್ಯಕ್ಷ ವೇ​ಣು​ಗೋ​ಪಾಲ್‌ ಇ​ತ​ರರಿದ್ದರು.

Latest Videos
Follow Us:
Download App:
  • android
  • ios