ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಸಿದ್ಧ  ಹೊಟೆಲ್‌ ಒಂದರಲ್ಲಿ ವಸ್ತು ಸ್ಫೋಟಗೊಂಡು ಐವರು ಗಂಭೀರ ಗಾಯಗೊಂಡ ಘಟನೆ ರಾಮೇಶ್ವರಂ ಕೆಫೆಯಲ್ಲಿ ನಡೆದಿದೆ. ಸ್ಫೋಟಕ್ಕೆ ನಿಖರಗಳು ತಿಳಿದು ಬಂದಿಲ್ಲ. ಆದರೆ ಕೆಫೆಗೆ ಆಗಮಿಸಿದ್ದ ವ್ಯಕ್ತಿಯೊಬ್ಬರ ಬ್ಯಾಗ್‌ನಲ್ಲಿ ನಿಗೂಢ ವಸ್ತು ಸ್ಫೋಟವಾಗಿದೆ ಎಂದು ಶಂಕಿಸಲಾಗಿದೆ. 

ಬೆಂಗಳೂರು (ಮಾ.1): ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಸಿದ್ಧ ಹೊಟೆಲ್‌ ಒಂದರಲ್ಲಿ ವಸ್ತು ಸ್ಫೋಟಗೊಂಡು ಮೂವರು ಸಿಬ್ಬಂದಿ ಸೇರಿ ಐವರು ಗಂಭೀರ ಗಾಯಗೊಂಡ ಘಟನೆ ವೈಟ್‌ಫೀಲ್ಡ್ ಸಮೀಪದ ಕುಂದಲಹಳ್ಳಿ ಗೇಟ್ ಬಳಿಯ ಬಸ್‌ ನಿಲ್ದಾಣದ ಸಮೀಪದ ರಾಮೇಶ್ವರಂ ಕೆಫೆಯಲ್ಲಿ ನಡೆದಿದೆ.

ಸ್ಫೋಟದ ತೀವ್ರತೆಗೆ ರಾಮೇಶ್ವರಂ ಕೆಫೆ ಹಾನಿಯಾಗಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ. ಕೆಫೆಗೆ ಅಪರಿಚಿತ ವ್ಯಕ್ತಿಯ ಬ್ಯಾಗ್‌ನಲ್ಲಿದ್ದ ಸ್ಫೋಟಕ. ಸ್ಫೋಟಗೊಳ್ಳುತ್ತಿದ್ದ ಭಯಭೀತರಾಗಿದ್ದ ಓಡಿಹೋದ ಜನರು. ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಅಗ್ನಿ ಶಾಮಕ ದಳ ಆಗಮಿಸಿದ್ದು ಬೆಂಕಿ ನಂದಿಸಿದ್ದಾರೆ. 

ಕೆಫೆಗೆ ಬಂದಿದ್ದ ವ್ಯಕ್ತಿಯ ಬ್ಯಾಗ್‌ನಲ್ಲಿ ಸ್ಫೋಟಕ ಶಂಕೆ. ಸಿಲಿಂಡರ್‌ ಅಥವಾ ಬಾಯ್ಲರ್‌ ಸ್ಫೋಟ ಕೂಡ ಆಗಿರಬಹುದೆಂದು ಕೂಡ ಅಂದಾಜಿಸಲಾಗಿದೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದ ನಂತರ ವೈಟ್‌ಫೀಲ್ಡ್ ಪ್ರದೇಶದ ಉಪ ಪೊಲೀಸ್ ಆಯುಕ್ತರು ಸ್ಥಳಕ್ಕೆ ಧಾವಿಸಿದ್ದಾರೆ ಎಂದು ತಿಳಿದುಬಂದಿದೆ. 

 ಹೆಚ್‌ಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ .

ಸಿಎ, ಐಐಎಂ ಪದವೀಧರೆಯಾದ್ರೂ ಬೆಂಗಳೂರಲ್ಲಿ ಪುಟ್ಟ ಹೋಟೆಲ್ ತೆರೆದ ಈಕೆ ತಿಂಗಳ ಗಳಿಕೆ ಈಗ 4.5 ಕೋಟಿ