Asianet Suvarna News Asianet Suvarna News

ಮೈಸೂರು : ತಲಕಾಡಿನ ಪ್ರವಾಸಿ ತಾಣಗಳಲ್ಲಿ ಜನಜಂಗುಳಿ

ಕ್ರಿಸ್ ಮಸ್ ರಜೆ, ಹೊಸ ವರ್ಷಾಚರಣೆ, ಸರಣಿ ರಜೆ ಹಾಗೂ ಶಾಲಾ ಶೈಕ್ಷಣಿಕ ಪ್ರವಾಸ ಹಿನ್ನೆಲೆ ತಲಕಾಡಿನ ಪ್ರವಾಸಿ ಪ್ರಸಿದ್ದ ತಾಣಗಳ ಬಳಿ ಜನಜಂಗುಳಿ ಹೆಚ್ಚಿದೆ.

Mysore  Talakad tourist spots are crowded snr
Author
First Published Dec 26, 2023, 9:44 AM IST

 ತಲಕಾಡು :  ಕ್ರಿಸ್ ಮಸ್ ರಜೆ, ಹೊಸ ವರ್ಷಾಚರಣೆ, ಸರಣಿ ರಜೆ ಹಾಗೂ ಶಾಲಾ ಶೈಕ್ಷಣಿಕ ಪ್ರವಾಸ ಹಿನ್ನೆಲೆ ತಲಕಾಡಿನ ಪ್ರವಾಸಿ ಪ್ರಸಿದ್ದ ತಾಣಗಳ ಬಳಿ ಜನಜಂಗುಳಿ ಹೆಚ್ಚಿದೆ.

ಪ್ರವಾಸಿಗರು ಇಲ್ಲಿನಪಂಚಲಿಂಗ ಪ್ರಸಿದ್ದ ದೇವಾಲಯಗಳ ದರ್ಶನ ಸೇರಿದಂತೆ ನಿಸರ್ಗಧಾಮದ ನದಿ ದಂಡೆಯಲ್ಲಿ ಭರಪೂರ ಪ್ರವಾಸಿಗರು ನದಿ ನೀರಿನಲ್ಲಿ ವಿಹಾರ ನಡೆಸಿ ಸಂಭ್ರಮಿಸಿದ್ದಾರೆ.

ಶನಿವಾರ, ಭಾನುವಾರ, ಸೋಮವಾರ ಸರ್ಕಾರಿ ರಜಾ ದಿನವಾಗಿದ್ದು, ಬೈಕ್, ಕಾರು, ಬಸ್, ಮಿನಿ ಟೆಂಪೋ, ಆಟೋ, ಜೀಪು ಇತರೆ ವಾಹನಗಳಲ್ಲಿ ಸಾಲು ಸಾಲಾಗಿ ಇಲ್ಲಿಗೆ ಆಗಮಿಸಿದ ಪ್ರವಾಸಿಗರು, ಇಲ್ಲಿನ ಸಹಜ ಪ್ರಕೃತ್ತಿ ಸೌಂದರ್ಯ ಕಣ್ತುಂಬಿಕೊಂಡರು.

ಶ್ರೀ ಕೀರ್ತಿ ನಾರಾಯಣಸ್ವಾಮಿ ದೇಗುಲದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಹೂವಿನ ಮಾಲೆಯಿಂದ ಮೂಲ ಮೂರ್ತಿ ಅಲಂಕರಿಸಲಾಗಿತ್ತು. ದೇಗುಲಕ್ಕೆ ಆಗಮಿಸುವ ಪ್ರವಾಸಿಗರು ದೇಗುಲದ ಎದುರು ಮರಳುರಾಶಿ ಸೇರಿದಂತೆ ಪ್ರವೇಶ ದ್ವಾರ ಮಂಟಪದ ಹೊರಾವಣದಲ್ಲಿ ತಲಕಾಡು ಭೇಟಿಯ ಸವಿ ನೆನಪಿಗಾಗಿ ಫೋಟೊ ಕ್ಲಿಕ್ಕಿಸಿಕೊಂಡರು.

ಪ್ರವಾಸಿಗರ ಭೇಟಿ ಹೆಚ್ಚಿರುವ ಹಿನ್ನೆಲೆ ಇಲ್ಲಿನ ಪ್ರವಾಸಿ ತಾಣಗಳ ಬಳಿ ವ್ಯಾಪಾರ ಚುರುಕಾಗಿತ್ತು.

ಊರೊಳಗಡೆ ರಸ್ತೆಯದ್ದೇ ಸಮಸ್ಯೆ- ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲಾ ಕೇಂದ್ರಗಳಿಂದ ಹಳೇ ತಲಕಾಡಿಗೆ ಆಗಮಿಸುವ ಪ್ರವಾಸಿ ವಾಹನಗಳಿಗೆ ಊರೊಳಗಡೆ ತೀರಾ ಹದೆಗಟ್ಟ ರಸ್ತೆ ನರಕ ಸದೃಶ್ಯ ಸ್ವಾಗತ ನೀಡಿತ್ತಿವೆ. ನೂರಾರು ಕಿ.ಮೀದೂರದಿಂದ ಇಲ್ಲಿಗೆ ಬರುವ ಪ್ರವಾಸಿಗರು ಊರೊಳಗಡೆ ಎರಡು ಕಿ.ಮೀ ರಸ್ತೆದಾಟಲು ಪ್ರಯಾಸ ಪಡುತ್ತಿದ್ದಾರೆ

ದಶಕದಿಂದ ಇಲ್ಲಿನ ರಸ್ತೆ ಅಭಿವೃದ್ದಿ ನನೆಗುದಿಗೆ ಬಿದ್ದಿರುವುದು, ಪ್ರವಾಸಿ ವಾಹನಗಳಿಗೆ ಇನ್ನಿಲ್ಲದ ನರಕ ದರ್ಶನ ನೀಡಿದೆ. ಇದಲ್ಲದೆ ರಸ್ತೆ ಅಕ್ಕಪಕ್ಕದ ನಿವಾಸಿಗಳು ನಿತ್ಯ ಭರಪೂರ ಪ್ರವಾಸಿ ವಾಹನಗಳ ಸಂಚಾರದಿಂದ ಧೂಳಿನಅಭಿಷೇಕದ ಶಿಕ್ಷೆಗೆ ಗುರಿಯಾಗಿದ್ದಾರೆ.

ಇಲ್ಲಿನ ಇಕ್ಕಟ್ಟಾದ ರಸ್ತೆಯಲ್ಲಿ ಪದೇ ಪದೇ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗುತ್ತಿದೆ. ಇಲ್ಲಿನ ರಸ್ತೆ ಅಭಿವೃದ್ದಿ ಪಡಿಸಬೇಕಾದ ಲೋಕೋಪಯೋಗಿ ಅಧಿಕಾರಿಗಳು ಕಂಡೂ ಕಾಣದಂತಿದ್ದು, ಸ್ಥಳೀಯರು ಹಾಗೂ ಪ್ರವಾಸಿಗರು ನರಕ ಅನುಭವಿಸುತ್ತಿದ್ದಾರೆ.

Follow Us:
Download App:
  • android
  • ios