ಮೈಸೂರು (ಅ.12): ನಾಪತ್ತೆಯಾಗಿದ್ದ ಬಾಬಾ ಅಟೋಮಿಕ್‌ ರೀಸಚ್‌ರ್‍ ಸೆಂಟರ್‌ನ ಸೈಂಟಿಫಿಕ್‌ ಆಫೀಸರ್‌ಅಭಿಷೇಕ್‌ ರೆಡ್ಡಿ ಗುಲ್ಲಾ ನಾಪತ್ತೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದ್ದು, ವಿಜಯವಾಡದಲ್ಲಿ ವಿಜ್ಞಾನಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಭಿಷೇಕ್‌ ರೆಡ್ಡಿ ಗುಲ್ಲಾ ಇಲವಾಲದ ನ್ಯೂ ಜನತಾ ಕಾಲೋನಿಯ ತಮ್ಮ ಮನೆಯಿಂದ ಅ.6ರಂದು ತಮ್ಮ ಸ್ಕೂಟನರ್‌ಲ್ಲಿ ಹೊರ ಹೋದವರು ನಾಪತ್ತೆಯಾಗಿದ್ದು, ಇದುವರೆಗೆ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ಸೆಂಟರ್‌ ಆಡಳಿತಾಧಿಕಾರಿ ಟಿ.ಕೆ.ಬೋಸ್‌ ಇಲವಾಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಲಿವರ್ ಕ್ಯಾನ್ಸರ್‌ಗೆ ಕಾರಣವಾಗುವ ಸಿ ವೈರಸ್ ಪತ್ತೆ ಹಚ್ಚಿದ ಸಂಶೋಧಕರಿಗೆ ನೊಬೆಲ್ ಪ್ರಶಸ್ತಿ! ..

ಈ ಸಂಬಂಧ ಹುಡುಕಾಟ ನಡೆಸಿದ ಪೊಲೀಸರಿಗೆ, ರೆಡ್ಡಿ ಅವರೇ ಕರೆ ಮಾಡಿ ವಿಜಯವಾಡದಲ್ಲಿ ಇರುವುದಾಗಿ ತಿಳಿಸಿದ್ದು, ಹೆಚ್ಚಿನ ಮಾಹಿತಿ ಅವರು ಬಂದ ನಂತರವೇ ತಿಳಿಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.