ಮೈಸೂರು : ವೇಶ್ಯಾವಾಟಿಕೆ ಜಾಲ - ಇಬ್ಬರ ಬಂಧನ, ಯುವತಿಯರ ರಕ್ಷಣೆ
ವೇಶ್ಯಾವಾಟಿಕೆ ನಡೆಯುತ್ತಿದ್ದ ಮನೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿ 6 ಜನ ಯುವತಿಯರನ್ನು ರಕ್ಷಿಸಿದ್ದಾರೆ.
ಮೈಸೂರು : ವೇಶ್ಯಾವಾಟಿಕೆ ನಡೆಯುತ್ತಿದ್ದ ಮನೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿ 6 ಜನ ಯುವತಿಯರನ್ನು ರಕ್ಷಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ವಿ.ವಿ. ಪುರಂ ಕಾಳಿದಾಸ ರಸ್ತೆ 8ನೇ ಕ್ರಾಸ್‌ನಲ್ಲಿರುವ ಮನೆಯ ಮಹಡಿಯ ಮೇಲೆ ದಾಳಿ ಮಾಡಿ, ಅಲ್ಲಿ ಸ್ಥಳೀಯ ಯುವತಿಯರನ್ನು ಹಣದ ಆಮಿಷ ಒಡ್ಡಿ ಕರೆಸಿಕೊಂಡು ಅವರನ್ನು ವೇಶ್ಯಾವಾಟಿಕೆ ದಂದೆಯಲ್ಲಿ ತೊಡಗಿಸಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ, . 9150 ಹಣವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, 6 ಜನ ಯುವತಿಯರನ್ನು ರಕ್ಷಣೆ ಮಾಡಿದ್ದು, ಸ್ಥಳದಲ್ಲಿ ಇಬ್ಬರು ಪುರುಷ ಗಿರಾಕಿಗಳು ಸಹ ಹಾಜರಿದ್ದರು. ಈ ಸಂಬಂಧ ವಿ.ವಿ. ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿ ಎಸ್. ಜಾಹ್ನವಿ, ಸಿಸಿಬಿ ಎಸಿಪಿ ಎಸ್.ಎನ್. ಸಂದೇಶ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್ ಪಿ. ಅನೂಪ್ ಮಾದಪ್ಪ, ಎಸ್‌ಐಗಳಾದ ಪ್ರತಿಭಾ ಜಂಗವಾಡ, ರಾಜು ಕೋನಕೇರಿ, ಎಎಸ್‌ಐ ಆರ್. ರಾಜು, ಸಿಬ್ಬಂದಿ ಜೋಸೆಫ್ ನೊರೋನ್ಹ, ಮಂಜುನಾಥ್, ಎಂ. ಗುರುಪ್ರಸಾದ್, ಪುರುಷೋತ್ತಮ್, ಅರುಣ್‌ಕುಮಾರ್, ಸುಭಾನಲ್ಲಾ ಭಾಲದಾರ, ಕೆ. ಪುಟ್ಟಮ್ಮ, ಮಮತ, ಶ್ರೀನಿವಾಸ ಈ ದಾಳಿ ನಡೆಸಿದ್ದಾರೆ.
ವೇಶ್ಯಾವಾಟಿಕೆ : ಪೊಲೀಸರ ಕೈಗೆ ಸಿಕ್ಕಿಬಿದ್ದ ನಟಿ
ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಕಾಸ್ಟಿಂಗ್ ನಿರ್ದೇಶಕಿ ಮತ್ತು ಕಿರುತೆರೆಯ ಖ್ಯಾತ ನಟಿ ಆರತಿ ಮಿತ್ತಲ್ ಅವರನ್ನು ಮುಂಬೈ ಪೊಲೀಸರು ಪೊಲೀಸರು ಬಂಧಿಸಿದ್ದಾರೆ. ವೇಶ್ಯಾವಾಟಿಕೆ ದಂಧೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಆಗ ಆರತಿ ಸೇರಿದಂತೆ 2 ಮಾಡೆಲ್ಸ್ ರೆಡ್ ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಮಾಡೆಲ್‌ಗಳನ್ನು ಬಳಕೆ ಮಾಡಿಕೊಂಡು ಈ ದಂಧೆಯನ್ನು ನಡೆಸುತ್ತಿದ್ದರು ಎಂಬುದನ್ನು ಪೊಲೀಸರು ಹೇಳಿದ್ದಾರೆ. ಆರತಿ ಬಂಧನ ಬಾಲಿವುಡ್ ಬಣ್ಣದ ಲೋಕದಲ್ಲಿ ಸಂಚಲನ ಮೂಡಿಸಿದೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ 27 ವರ್ಷದ ನಟಿ ಆರತಿ ಪ್ರಸಿದ್ಧ ಮಾಡೆಲ್‌ಗಳನ್ನು ದೊಡ್ಡ ದೊಡ್ಡ ಹೋಟೆಲ್‌ಗಳಿಗೆ ಸಪ್ಲೆ ಮಾಡುತ್ತಿದ್ದರು ಎಂದಿದ್ದಾರೆ. ಆರತಿ ಅವರನ್ನು ರೆಡ್ ಹ್ಯಾಂಗ್ ಆಗಿ ಹಿಡಿಯುವ ಉದ್ದೇಶದಿಂದ ಸಿನಿಮೀಯ ರೀತಿಯಲ್ಲಿ ಪ್ಲಾನ್ ಮಾಡಿ ಬಂಧಿಸಿದ್ದಾರೆ. ಆರತಿ ಜೊತೆ ಡೀಲ್ ಕುದುರಿಸಿದ ಪೊಲೀಸರು ಇಬ್ಬರೂ ಡಮ್ಮಿ ಗ್ರಾಹಕರನ್ನು ಹೋಟೆಲ್‌ಗೆ ಕಳುಹಿಸಿದ್ದಾರೆ. ಇದನ್ನು ರೆಕಾರ್ಡ್ ಮಾಡಿಕೊಳ್ಳಲಾಗಿದೆ. ತಕ್ಷಣ ಆರತಿಯನ್ನು ಬಂಧಿಸಿದ್ದಾರೆ. ಜೊತೆಗೆ ಎರಡು ಮಾಡೆಲ್‌ಗಳು ಸಹ ಸಿಕ್ಕಿ ಬಿದ್ದಿದ್ದಾರೆ. ಪೊಲೀಸ್ ಇನ್ಸ್‌ಪೆಕ್ಟರ್ ಮನೋಜ್ ಸುತಾರ್ ಆರತಿ ಜೊತೆ ಡೀಲ್ ಕುದುರಿಸಿದ್ದರು. ಆರತಿ ಮನೋಜ್ ಅವರಿಗೆ 60 ಸಾವಿರ ಬೇಡಿಕೆ ಇಟ್ಟಿದ್ದರು.
ವೇಶ್ಯಾವಾಟಿಕೆ ದಂಧೆ : ಖ್ಯಾತ ಹೊಟೇಲ್‌ನ ಮ್ಯಾನೇಜರ್ ಸೇರಿ 18 ಜನರ ಬಂಧನ
ಮಿತ್ತಲ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ತನಿಖೆಯ ವೇಳೆ, ತಲಾ 15,000 ರೂಪಾಯಿ ನೀಡುವುದಾಗಿ ಮಿತ್ತಲ್ ಭರವಸೆ ನೀಡಿದ್ದರು ಎಂದು ಮಾಡೆಲ್‌ಗಳು ಪೊಲೀಸರಿಗೆ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, 'ಚಿತ್ರರಂಗದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮತ್ತು ಹಣ ಗಳಿಸಲು ಮಾಡೆಲ್‌ಗಳನ್ನು ಸಪ್ಲೇ ಮಾಡುತ್ತಿದ್ದ ಆರೋಪದ ಮೇರಿಗೆ ಬಂಧಿಸಲಾಗಿದೆ. ಮಿತ್ತಲ್ ವಿರುದ್ಧ ಐಪಿಸಿಯ ಸೆಕ್ಷನ್ 370 ಮತ್ತು ಹುಡುಗಿಯರ ಕಳ್ಳಸಾಗಣೆಗಾಗಿ ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಯುನಿಟ್ 11 ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ' ಎಂದು ಹೇಳಿದ್ದಾರೆ.