Asianet Suvarna News Asianet Suvarna News

ಮೈಸೂರು ಅರಮನೆ ಪ್ರವೇಶ ಶುಲ್ಕ ಹೆಚ್ಚಳ

  • ವಿಶ್ವವಿಖ್ಯಾತ ಮೈಸೂರು ಅರಮನೆ ಪ್ರವೇಶ ದರವನ್ನು ಬರೋಬ್ಬರಿ ನಾಲ್ಕು ವರ್ಷದ ಬಳಿಕೆ ಹೆಚ್ಚಿಸಲಾಗಿದೆ
  • ಪರಿಷ್ಕೃತ ದರವನ್ನು ಶನಿವಾರದಿಂದಲೇ ಜಾರಿಗೊಳಿಸಲಾಗಿದೆ
Mysore palace entrance fee hikes up to 100 snr
Author
Bengaluru, First Published Sep 26, 2021, 8:09 AM IST
  • Facebook
  • Twitter
  • Whatsapp

ಮೈಸೂರು (ಸೆ.26): ವಿಶ್ವವಿಖ್ಯಾತ ಮೈಸೂರು ಅರಮನೆ (Mysuru palace) ಪ್ರವೇಶ ದರವನ್ನು (entrance fee) ಬರೋಬ್ಬರಿ ನಾಲ್ಕು ವರ್ಷದ ಬಳಿಕೆ ಹೆಚ್ಚಿಸಲಾಗಿದ್ದು, ಪರಿಷ್ಕೃತ ದರವನ್ನು ಶನಿವಾರದಿಂದಲೇ ಜಾರಿಗೊಳಿಸಲಾಗಿದೆ. ಈ ಹಿಂದೆ ವಯಸ್ಕರಿಗೆ 70 ರು. ಪ್ರವೇಶ ಶುಲ್ಕವಿತ್ತು. ಈಗ  100 ರು.ಗೆ ಹೆಚ್ಚಿಸಲಾಗಿದೆ. 

ಮಕ್ಕಳಿಗೆ  30 ರು. ರಿಂದ 50 ರು.ಗೆ ಶುಲ್ಕ ಹೆಚ್ಚಳ ಮಾಡಲಾಗಿದೆ. ಶಾಲೆಗಳಿಂದ ಶಿಕ್ಷಕರೊಂದಿಗೆ ಬರುವ ವಿದ್ಯಾರ್ಥಿಗಳಿಗೆ (Students) ತಲಾ 30 ರು. ಶುಲ್ಕ ನಿಗದಿಪಡಿಸಲಾಗಿದೆ. ಪ್ರಮುಖ ಪ್ರವಾಸಿ ತಾಣವಾಗಿರುವ ಮೈಸೂರು ಅರಮನೆಗೆ ಕೊರೋನಾ (Corona) ಲಾಕ್‌ಡೌನ್‌ ಭಾರಿ ನಷ್ಟವನ್ನುಂಟು ಮಾಡಿದೆ. 2020ರ ಜನವರಿವರೆಗೂ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಅರಮನೆಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಈಗ ಇಳಿಮುಖವಾಗಿದೆ. ಈ ಹಿಂದೆ ವಾರ್ಷಿಕ ಸುಮಾರು 15ರಿಂದ 18 ಕೋಟಿ ರು. ಆದಾಯ ಸಂಗ್ರಹವಾಗುತ್ತಿದ್ದ ಅರಮನೆಗೆ ಈಗ ವಾರ್ಷಿಕ 60 ಲಕ್ಷ ರು.ದಿಂದ 1 ಕೋಟಿ ರು. ಮಾತ್ರ ಸಂಗ್ರಹವಾಗುತ್ತಿದೆ.

"

ಮೈಸೂರು ಸದರಾ : ಅರಮನೆಗೆ ಬೆಳಕು - ಬಣ್ಣದ ಸಿಂಗಾರ ಆರಂಭ

ಇದರಿಂದ ಅರಮನೆಯ ನಿರ್ವಹಣೆ, ಸಿಬ್ಬಂದಿ ವೇತನದ ಹಿನ್ನೆಲೆಯಲ್ಲಿ ಅರಮನೆ ಆಡಳಿತ ಮಂಡಳಿಗೆ ಹೊರೆಯಾಗುತ್ತಿತ್ತು. ಹೊರೆ ತಗ್ಗಿಸುವ ನಿಟ್ಟಿನಲ್ಲಿ ಕಳೆದ 4 ವರ್ಷ ನಂತರ ಅರಮನೆಗೆ ಭೇಟಿ ನೀಡುವ ಪ್ರವಾಸಿಗರ(Tourists) ಪ್ರವೇಶ ಶುಲ್ಕ ಹೆಚ್ಚಿಸಲಾಗಿದೆ.ಅರಮನೆಗೆ ಹೊಸ ಪ್ರವೇಶ ಶುಲ್ಕ: ಸ್ವದೇಶಿ ಮತ್ತು ವಿದೇಶಿ ವಯಸ್ಕರಿಗೆ 100 ರು.

10 ರಿಂದ 18 ವರ್ಷದ ಮಕ್ಕಳಿಗೆ  50 ಶೈಕ್ಷಣಿಕ ಪ್ರವಾಸಕ್ಕೆ ಬರುವ ವಿದ್ಯಾರ್ಥಿಗಳಿಗೆ 30 ರು.ಗೆ ಏರಿಕೆ ಮಾಡಲಾಗಿದೆ. 

ದಸರೆಗೆ ಸಿದ್ಧತೆ : 

 ಕೋವಿಡ್  (covid ) ಮೂರನೇ ಅಲೆಯ ಆತಂಕ ನಡುವೆಯೂ ಸಾಂಸ್ಕೃತಿಕ ನಗರಿ ಮೈಸೂರು (Mysuru) ದಸರಾ ಮಹೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ. ಕೊರೋನಾ ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಪ್ರದಾಯಿಕ ದಸರಾ ಮಹೋತ್ಸವ ಆಚರಿಸಲಾಗುತ್ತಿದ್ದು, ಇದಕ್ಕಾಗಿ ದಸರಾ (Dasara) ಕೇಂದ್ರ ಬಿಂದುವಾದ ಮೈಸೂರು ಅರಮನೆಯನ್ನು ವಿದ್ಯುತ್ ಬೆಳಕು, ಬಣ್ಣದಿಂದ ಸಿಂಗಾರಗೊಳಿಸಲಾಗುತ್ತಿದೆ.

 ವಿಶ್ವ ವಿಖ್ಯಾತಿ ಪಡೆದಿರುವ ಮೈಸೂರು ಅರಮನೆಯ ದೀಪಾಲಂಕಾರವು ದಸರಾ ಸಂದರ್ಭದಲ್ಲಿ ಹೆಚ್ಚಿನ ಜನಮನ್ನಣೆ ಪಡೆದಿದೆ. ಅರಮನೆ (palace), ಅರಮನೆ ಆವರಣ, ದೇವಸ್ಥಾನಗಳು ಹಾಗೂ ಪ್ರವೇಶಕ್ಕೆ ದ್ವಾರಕ್ಕೆ ಅಳವಡಿಸಿರುವ ಬಲ್‌ಬ್ಗಳಲ್ಲಿ ಕೆಲವು ಬರ್ನ್ ಆಗಿವೆ. ಇದರಿಂದ ಅರಮನೆಯು ಜಗಮಗಿಸುವಾಗ ಯಾವುದೇ ಕೊರತೆ ಆಗಬಾರ ದೆಂಬ ಕಾರಣಕ್ಕಾಗಿ ಬರ್ನ್ ಆಗಿರುವ ಬಲ್ಬ್ ಗಳ ಬದಲಾವಣೆ, ವಿದ್ಯುತ್ ದೀಪಗಳ ದುರಸ್ತಿ, ವಿದ್ಯುತ್ ಕಂಬಗಳ ದುರಸ್ತಿ, ಪಾರಂಪರಿಕ ವಿದ್ಯುತ್ ಕಂಬಗಳಿಗೆ ಪೇಂಟಿಂಗ್ ಕಾರ್ಯವು ಭರದಿಂದ ಸಾಗುತ್ತಿದೆ. 

Follow Us:
Download App:
  • android
  • ios