Asianet Suvarna News Asianet Suvarna News

ಮೈಸೂರು: ಎಫ್.ಡಿ.ಎಗೆ ಒಂದು ವರ್ಷ ಕಾರಾಗೃಹ ಶಿಕ್ಷೆ

ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ಅಕ್ರಮವಾಗಿ ಹಣ ಇರಿಸಿಕೊಂಡಿದ್ದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಕಚೇರಿಯ ಪ್ರಥಮ ದರ್ಜೆ ಸಹಾಯಕನಿಗೆ ಮೈಸೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಒಂದು ವರ್ಷ ಕಾರಾಗೃಹ ಶಿಕ್ಷೆ, 25 ಸಾವಿರ ರೂ. ದಂಡ ವಿಧಿಸಿದೆ. ಕಚೇರಿಯ ಎಫ್.ಡಿಎ ಡಿ.ಕೆ. ರವಿ ಶಿಕ್ಷೆಗೆ ಒಳಗಾದವರು.

Mysore   One year imprisonment for FDA snr
Author
First Published Feb 1, 2024, 11:13 AM IST

  ಮೈಸೂರು :  ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ಅಕ್ರಮವಾಗಿ ಹಣ ಇರಿಸಿಕೊಂಡಿದ್ದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಕಚೇರಿಯ ಪ್ರಥಮ ದರ್ಜೆ ಸಹಾಯಕನಿಗೆ ಮೈಸೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಒಂದು ವರ್ಷ ಕಾರಾಗೃಹ ಶಿಕ್ಷೆ, 25 ಸಾವಿರ ರೂ. ದಂಡ ವಿಧಿಸಿದೆ. ಕಚೇರಿಯ ಎಫ್.ಡಿಎ ಡಿ.ಕೆ. ರವಿ ಶಿಕ್ಷೆಗೆ ಒಳಗಾದವರು.

ಅಬಕಾರಿ ಲೈಸನ್ಸ್ ನವೀಕರಣಕ್ಕೆ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಲಂಚ ಸ್ವೀಕರಿಸುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಲೋಕಾಯುಕ್ತ ಡಿವೈಎಸ್ಪಿ ಮ್ಯೂಥ್ಯೂಸ್ ಥಾಮಸ್ ಅವರ ನೇತೃತ್ವದಲ್ಲಿ ಅಧಿಕಾರಿಗಳು, 2013 ರ ಆ. 2 ರಂದು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು.

ಈ ವೇಳೆ ರವಿ ಅವರ 40 ಸಾವಿರ ರೂ. ನಗದು ಪತ್ತೆಯಾಗಿತ್ತು. ಈ ಬಗ್ಗೆ ವಿಚಾರ ಮಾಡಿದಾಗ ಸಮರ್ಪಕ ಮಾಹಿತಿ ನೀಡದೇ ಇದ್ದುದ್ದರಿಂದ ಅವರ ವಿರುದ್ದ ಭ್ರಷ್ಟಚಾರ ನಿರ್ಮೂಲನಾ ಕಾಯಿದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಕೆ. ಭಾಗ್ಯ ಅವರು ಈ ತೀರ್ಪು ನೀಡಿದರು.

ಸರ್ಕಾರದ ಪರವಾಗಿ ಮುತ್ತಮ್ಮ ಪೂಣಚ್ಚ ವಾದ ಮಂಡಿಸಿದ್ದರು.

ಖತರ್ನಾಕ್ ಗ್ಯಾಂಗ್ ಅರೆಸ್ಟ್

ಬೆಂಗಳೂರು (ಜ.30) :ವರ್ಕ್‌ ಫ್ರಂ ಹೋಂ ಕೆಲಸ ನೀಡೋದಾಗಿ ಜನರನ್ನು ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ್ದ ಖತರ್ನಾಕ್ ಗ್ಯಾಂಗ್ ಮೇಲೆ ಸಿಸಿಬಿ ಡಿಸಿಪಿ ಅಬ್ದುಲ್ ಅಹಾದ್ ನೇತೃತ್ವದಲ್ಲಿ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಭರ್ಜರಿ ದಾಳಿ ನಡೆಸಿದ್ದು, ದಾಳಿಯಲ್ಲಿ ತೆಲಂಗಾಣದ ಇಬ್ಬರು, ಹೈದರಾಬಾದನ ಮೂವರು ಮಹಾರಾಷ್ಟ್ರದ ಇಬ್ಬರು ಸೇರಿ ಒಟ್ಟು 11 ಮಂದಿ ಸೈಬರ್ ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಖದೀಮರಿಂದ 11 ಮೊಬೈಲ್, 2 ಲ್ಯಾಪ್ ಟಾಪ್, 15 ಸಿಮ್ ಕಾರ್ಡ್, 3 ಬ್ಯಾಂಕ್ ಚೆಕ್ ಬುಕ್ ವಶಕ್ಕೆ ಪಡೆದುಕೊಂಡಿರುವ ಸೈಬರ್ ಕ್ರೈಂ ಪೊಲೀಸರು. ಇದುವರೆಗೂ 2143 ಅಕೌಂಟ್ ಗಳಿಂದ 158 ಕೋಟಿ 94 ಲಕ್ಷಕ್ಕೂ ಅಧಿಕ ಹಣ ಎಗರಿಸಿರುವ ಸೈಬರ್ ವಂಚಕರು. ಸದ್ಯ 30 ಅಕೌಂಟ್ ಫ್ರೀಜ್ ಮಾಡಿರುವ ಪೊಲೀಸರು, 62 ಲಕ್ಷದ 83 ಸಾವಿರ ರೂಪಾಯಿಗಳಷ್ಟು ಹಣವನ್ನು ಜಪ್ತಿ ಮಾಡಿದ್ದಾರೆ.

ಸರ್ಕಾರಿ ನೌಕರಿ ಕೊಡಿಸೋದಾಗಿ ಲಕ್ಷ ಲಕ್ಷ ವಂಚನೆ; ಬಗೆದಷ್ಟು ಬಯಲಾಗ್ತಿದೆ ಕಾಂಗ್ರೆಸ್ ನಾಯಕಿ ಕರ್ಮಕಾಂಡ!

ವಂಚನೆ ಹೇಗೆ?

ಪಾರ್ಟ್‌ ಟೈಂ, ವರ್ಕ್ ಫ್ರಂ ಜಾಬ್ ಹುಡುಕು ಯುವಕ, ಯುವತಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಖದೀಮರು. ವರ್ಕ್ ಫ್ರಂ ಹೋಂ ಜಾಬ್ ಖಾಲಿ ಇದೆ ಎಂದು ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುತ್ತಿದ್ದ ವಂಚಕರು ಕಾಲೇಜು, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ದಟ್ಟಣೆ ಇರುವೆಡೆ ವಾಲ್‌ಗಳಿಗೆ ಸ್ಟಿಕರ್ ಅಂಟಿಸುತ್ತಿದ್ದ ಖದೀಮರು. ಮನೆಯಲ್ಲೇ ಕುಳಿತು ಸಾವಿರಾರು ರೂಪಾಯಿ ಗಳಿಸಿ ಎಂದು ಜನರನ್ನು ನಂಬಿಸುತ್ತಿದ್ದ ವಂಚಕರು. ಈ ವಂಚನೆಗೆಂದೇ ಸಾವಿರಾರು ಅಕೌಂಟ್ ಗಳ ಬಳಕೆ ಮಾಡುತ್ತಿದ್ದರು. ಮನೆಯಲ್ಲಿ ಕುಳಿತು ಹಣ ಗಳಿಸಬಹುದು ಎಂಬ ಆಸೆಯಿಂದ ಸಂಪರ್ಕಿಸುತ್ತಿದ್ದ ಯುವಕ, ಯುವತಿಯರಿಗೆ ಗಾಳ ಹಾಕುತ್ತಿದ್ದ ಖದೀಮರು. ಮೊದಲಿಗೆ ಇಂತಿಷ್ಟು ಹಣ ನೀಡುವಂತೆ ಪುಸಲಾಯಿಸುತ್ತಿದ್ದರು. ಇನ್ಸ್‌ಟಾಗ್ರಾಂ ಮೂಲಕ ಲಿಂಕ್ ಕಳಿಸಿ ಹಣ ಎಗರಿಸುತ್ತಿದ್ದ ವಂಚಕರು. ಇದೇ ರೀತಿ ಸಾವಿರಾರು ಜನರಿಗೆ ವಂಚನೆ ಮಾಡಿರುವ ಖತರ್ನಾಕ್ ಗ್ಯಾಂಗ್. ಈ ಬಾರಿ ಸೈಬರ್ ಕ್ರೈಂ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದಾರೆ.

Follow Us:
Download App:
  • android
  • ios