ಮೈಸೂರು(ಜ.10): ಮೈಸೂರಿನಲ್ಲಿ ಮೇಯರ್ ಉಪಮೇಯರ್ ಚುನಾವಣೆ ಗರಿಗೆದರಿದ್ದು, ಕಾಂಗ್ರೆಸ್-ಬಿಜೆಪಿ ನಡುವೆ ಜೆಡಿಎಸ್ ಸಮಾನಂತರ ಕಾಯ್ದುಕೊಂಡಿದೆ. ಜೆಡಿಎಸ್ ಪಾಲಿಕೆ ಸದಸ್ಯರು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಸಿದ್ದ ಎಂದಿದ್ದಾರೆ.

ಎರಡನೇ ಸಭೆಯಲ್ಲೂ ಒಮ್ಮತದ ನಿಲುವಿಗೆ ಬಾರದ ಜೆಡಿಎಸ್ ಕಾಂಗ್ರೆಸ್, ಬಿಜೆಪಿ ಅಂತರಕಾಯ್ದುಕೊಂಡು ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದಾರೆ. ವರಿಷ್ಠರ ಗಮನಕ್ಕೆ ತಂದು ಅಂತಿಮ ನಿರ್ಧಾರ ಎಂದು ಸಾರಾ ಮಹೇಶ್.ಹೇಳಿದ್ದಾರೆ.

ಮಂಗ್ಳೂರಲ್ಲಿ ಬೋಟ್‌ ದುರಸ್ತಿಯ ಅಂಡರ್‌ ವಾಟರ್‌ ಗ್ಯಾರೇಜ್‌!

ನಾವು ಕಾಂಗ್ರೆಸ್-ಜೆಡಿಎಸ್ ನಡುವಿನ ಮೈತ್ರಿ ಬಗ್ಗೆ ಯಾವುದೇ ಮಾತುಕತೆ ಆಡಿಲ್ಲ‌. ಕಾಂಗ್ರೆಸ್ನ ತನ್ವೀರ್ ಸೇಠ್, ಬಿಜೆಪಿ ಪ್ರತಾಪ್ ಸಿಂಹ, ಹೆಚ್ವಿ ರಾಜೀವ್ ನಮ್ಮೊಟ್ಟಿಗೆ ಮಾತನಾಡಿದ್ದಾರೆ. ಬಿಜೆಪಿ, ಕಾಂಗ್ರೆಸ್ ಅವ್ರು ಅಭಿಪ್ರಾಯ ಹೇಳಿದ್ದಾರೆ. ಈ ಬಗ್ಗೆ ರಾಜ್ಯ ನಾಯಕರೊಟ್ಟಿಗೆ ಮಾತ್ನಾಡುತ್ತೇವೆ. ಸದ್ಯಕ್ಕೆ ಕಾಂಗ್ರೆಸ್, ಬಿಜೆಪಿ ಸಹವಾಸ ಸಾಕಾಗಿದೆ ಎಂದಿದ್ದಾರೆ.

ವಿರೋಧ ಪಕ್ಷವಾಗಿಯೇ ಇರೋದು ಬೆಟ್ಟರ್ ಅಂತಿದ್ದಾರೆ ನಮ್ಮ ಸದಸ್ಯರು. ದಿನಾಂಕ ಮತ್ತು ಮೀಸಲಾತಿ ಪ್ರಕಟವಾದ ಮೇಲೆ ಮುಂದಿನ ನಿರ್ಧಾರ ಮಾಡ್ತೀವಿ ಎಂದು ಜೆಡಿಎಸ್ ಪಾಲಿಕೆ ಸದಸ್ಯರ ಸಭೆ ಬಳಿಕ ಸಾರಾ ಮಹೇಶ್ ಹೇಳಿದ್ದಾರೆ.