ಮೈಸೂರು : ರೈತರ ಪಂಪ್ ಸೆಟ್ ಮೋಟಾರ್ ಕಳವು
ರೈತರ ಪಂಪ್ ಸೆಟ್ ಮೋಟಾರ್ಗಳು ನಿರಂತರವಾಗಿ ಕಳ್ಳತನವಾಗುತ್ತಿದ್ದು, ಈ ಸಂಬಂಧ ಬನ್ನೂರು ಪೋಲಿಸ್ ಠಾಣೆಗೆ ದೂರು ನೀಡಿದ್ದರು ಯಾವುದೇ ಪ್ರಯೊಜನವಾಗಿಲ್ಲ.
ಬನ್ನೂರು : ರೈತರ ಪಂಪ್ ಸೆಟ್ ಮೋಟಾರ್ಗಳು ನಿರಂತರವಾಗಿ ಕಳ್ಳತನವಾಗುತ್ತಿದ್ದು, ಈ ಸಂಬಂಧ ಬನ್ನೂರು ಪೋಲಿಸ್ ಠಾಣೆಗೆ ದೂರು ನೀಡಿದ್ದರು ಯಾವುದೇ ಪ್ರಯೊಜನವಾಗಿಲ್ಲ.
ಪಟ್ಟಣ ಸಮೀಪದ ಬೇವಿನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆಯುತ್ತಿದ್ದು, ರೈತರು ಬಂದ ಫಸಲನ್ನು ತೆಗೆಯಲು ನಿರಂತರವಾಗಿ ಮೋಟಾರ್ ಅಳವಡಿಸುತ್ತಿದ್ದರೂ, ಅದನ್ನು ಕಳ್ಳರು ಕದ್ದೋಯ್ಯುತ್ತಿದ್ದಾರೆ.
ಈ ಹಿಂದೆ ಗದ್ದೆಯಲ್ಲಿ ಇದ್ದಂತ 4 ಮೋಟಾರ್ ಗಳು ಕಳ್ಳತನವಾದಾಗ ದೂರು ನೀಡಿದ್ದು ಹುಡುಕುತ್ತೇವೆ ಎಂದ ಪೊಲೀಸರು ಕೈಬಿಟ್ಟರು. ನಂತರ ನಾಲ್ಕು ತಿಂಗಳ ಅವಧಿಯಲ್ಲಿ ಕ್ರಮವಾಗಿ ಸುತ್ತಮುತ್ತಲಿನ ರೈತರ ಎಂಟು ಮೋಟಾರ್ ಗಳು ಕಳ್ಳತನವಾಗಿದ್ದು, ಒಟ್ಟು 40 ಸಾವಿರ ಬೆಲೆ ಬಾಳುವಂತ 12 ಮೋಟಾರ್ ಕಳ್ಳತನವಾಗಿದೆ.
ರೈತ ಸಂಘದ ಅಧ್ಯಕ್ಷ ಹುಚ್ಚೇಗೌಡ ಮಾತನಾಡಿ, ರೈತರ ಮೇಲೆ ಪರೋಕ್ಷವಾಗಿ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿದ್ದು, ಮೋಟರ್ ಕಳ್ಳತನ ನಡೆಯುತ್ತಿದ್ದರೂ ಬನ್ನೂರು ಠಾಣೆ ಪೋಲಿಸರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ರೈತರಾದ ರವಿ, ಶಿವಕುಮಾರ್, ಪಟೇಲ್ ಲೋಕೇಶ್, ಗಾಡಿಜೋಗಿಹುಂಡಿ ಮಾದೇಗೌಡ, ರಾಮಚಂದ್ರು, ಪ್ರಭು ಮೊದಲಾದವರು ಇದ್ದರು.