Asianet Suvarna News Asianet Suvarna News

ಯೋಗವನ್ನು ಒಲಿಂಪಿಕ್ಸ್‌ಗೆ ಸೇರಿಸುವುದೇ ಗುರಿ: ಬಾಬಾ ರಾಮ್‌ದೇವ್‌

ಕೇಂದ್ರ ಸರ್ಕಾರ ಶುಕ್ರವಾರವಷ್ಟೇ ಘೋಷಿಸಿರುವ ಅಂತಾರಾಷ್ಟ್ರೀಯ ಯೋಗ ಸ್ಪೋಟ್ಸ್‌ರ್‍ ಫೆಡರೇಶನ್‌ನ ಪ್ರಥಮ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ಯೋಗಋುಷಿ ಬಾಬಾ ರಾಮ್‌ದೇವ್‌ ಅವರು, ಯೋಗವನ್ನು ಕಾಮನ್‌ವೆಲ್ತ್‌ ಗೇಮ್ಸ್‌, ಏಷ್ಯನ್‌ ಗೇಮ್ಸ್‌ ಮತ್ತು ಒಲಿಂಪಿಕ್ಸ್‌ನಲ್ಲಿ ಸೇರಿಸುವುದೇ ತಮ್ಮ ಪರಮಗುರಿ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

my aim to add yoga in Olympic Games says ramdev in udupi
Author
Bangalore, First Published Nov 16, 2019, 11:10 AM IST

ಉಡುಪಿ(ನ.16): ಕೇಂದ್ರ ಸರ್ಕಾರ ಶುಕ್ರವಾರವಷ್ಟೇ ಘೋಷಿಸಿರುವ ಅಂತಾರಾಷ್ಟ್ರೀಯ ಯೋಗ ಸ್ಪೋಟ್ಸ್‌ರ್‍ ಫೆಡರೇಶನ್‌ನ ಪ್ರಥಮ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ಯೋಗಋುಷಿ ಬಾಬಾ ರಾಮ್‌ದೇವ್‌ ಅವರು, ಯೋಗವನ್ನು ಕಾಮನ್‌ವೆಲ್ತ್‌ ಗೇಮ್ಸ್‌, ಏಷ್ಯನ್‌ ಗೇಮ್ಸ… ಮತ್ತು ಒಲಿಂಪಿP್ಸ…ನಲ್ಲಿ ಸೇರಿಸುವುದೇ ತಮ್ಮ ಪರಮಗುರಿ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಭಾರತದ ಯೋಗಕ್ಕೆ ಈಗಾಗಲೇ ಅಂತಾರಾಷ್ಟ್ರೀಯ ಗೌರವ ಸಿಕ್ಕಿದೆ. ಇನ್ನು ಫೆಡರೇಶನ್‌ ಮೂಲಕ ಕ್ರೀಡೆ ರೂಪದಲ್ಲಿ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಲಿದೆ. ದೇಶದ ಲಕ್ಷಾಂತರ ಮಂದಿ ಈ ಕ್ರೀಡೆಗಳಲ್ಲಿ ಭಾಗವಹಿಸುವುದಕ್ಕೆ ಅವಕಾಶವಾಗಲಿದೆ ಎಂದಿದ್ದಾರೆ.

ಉಡುಪಿ: ಬರಲಿದೆ ನಂದಿನಿ ಕಷಾಯ, ಕೋಲ್ಡ್ ಕಾಫಿ.

ಇದುವರೆಗೆ ತಾನು ಒಂದು ಸ್ಥಳದಲ್ಲಿ 1 ರಿಂದ 3 ದಿನಗಳ ಯೋಗ ಶಿಬಿರಗಳನ್ನು ಮಾತ್ರ ನಡೆಸುತ್ತಿದ್ದೆ. ಇದೀಗ ಉಡುಪಿಯಲ್ಲಿ 5 ದಿನಗಳ ಶಿಬಿರವನ್ನು ನಾನೇ ಖುದ್ದು ನಿಂತು ನಡೆಸುವ ಮೂಲಕ ಹೊಸ ಯೋಜನೆಗೆ ಚಾಲನೆ ನೀಡುತ್ತಿದ್ದೇನೆ ಎಂದವರು ಹೇಳಿದ್ದಾರೆ.

ಯೋಗದ ಮೂಲಕ ರೋಗ ಮುಕ್ತ, ಒತ್ತಡ ಮುಕ್ತ, ಹಿಂಸೆ ಮುಕ್ತ, ಯುದ್ಧ ಮುಕ್ತ ವಿಶ್ವ ನಿರ್ಮಾಣ ಸಾಧ್ಯವಾಗಲಿದೆ. ವೈರಭಾವವನ್ನು ನಾಶ ಮಾಡುವ ಮೂಲಕ ಯೋಗದಿಂದ ಭಯೋತ್ಪಾದನೆಯನ್ನು ನಿರ್ನಾಮ ಮಾಡಲು ಸಾಧ್ಯವಿದೆ ಎಂದಿದ್ದಾರೆ.

ಹೊಟೇಲ್‌ ವ್ಯವಹಾರದಲ್ಲಿ ವಂಚನೆ: ಮಂಗಳೂರಿಗೆ ಬಂದ ಮುಂಬೈ ಪೊಲೀಸರು

ತಾವು ಈಗಾಗಲೇ ದೇಶದ 10 ಕೋಟಿ ಜನರಿಗೆ ಪ್ರತ್ಯಕ್ಷವಾಗಿ ಯೋಗ ಶಿಬಿರಗಳ ಮೂಲಕ ಮತ್ತು 20 ಕೋಟಿ ಜನರಿಗೆ ಪರೋಕ್ಷವಾಗಿ ಯೋಗವನ್ನು ಕಲಿಸಿದ್ದು, ಸ್ವಸ್ಥ ಭಾರತ ನಿರ್ಮಾಣ ತನ್ನ ಗುರಿ ಎಂದಿದ್ದಾರೆ.

ಯೋಗ ಕಲಿತವರು ಶೇ.99ರಷ್ಟುಔಷಧಿಗಳಿಂದ ಮತ್ತು ಶಸ್ತ್ರಚಿಕಿತ್ಸೆಯಿಂದ ದೂರ ಇರಬಹುದು. ಯಾವುದೇ ಔಷಧಿ ಇಲ್ಲದ ಕಾಯಿಲೆಗಳನ್ನೂ ಯೋಗದಿಂದ ಗುಣಮಾಡಬಹುದು. ಅದನ್ನು ಈಗಾಗಲೇ ತಾನು ಸಾಧಿಸಿದ್ದೇನೆ ಎಂದಿದ್ದಾರೆ.

 

Follow Us:
Download App:
  • android
  • ios