ಗಣೇಶ ಉತ್ಸವಕ್ಕೆ ಸರ್ಕಾರ ಮುಕ್ತ ಅವಕಾಶ ನೀಡಲಿ ಮುತಾಲಿಕ್ ಆಗ್ರಹ
ಗಣೇಶೋತ್ಸವ ಆಚರಣೆಗೆ ಮುಕ್ತ ಅವಕಾಶ ನೀಡುವಂತೆ ಸರ್ಕಾರಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಆಗ್ರಹಿಸಿದರು.
ಧಾರವಾಡ (ಆ.5) : ಇತ್ತೀಚಿನ ವರ್ಷಗಳಲ್ಲಿ ಗಣೇಶೋತ್ಸವ ಆಚರಣೆಗೆ ಸರ್ಕಾರ ತೀವ್ರ ಕಿರಿಕಿರಿ ಮಾಡುವ ಮೂಲಕ ಯುವಕರ ಉತ್ಸಾಹಕ್ಕೆ ಭಗ್ನ ತರುತ್ತಿದೆ. ಜತೆಗೆ ನೂರಾರು ಕಠಿಣ ನಿರ್ಬಂಧ ವಿಧಿಸುವುದು ಖಂಡನೀಯ. ಉತ್ಸವ ಆಚರಣೆಗೆ ಮುಕ್ತ ಅವಕಾಶ ನೀಡುವಂತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಆಗ್ರಹಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರ್ಮಿಕ, ಶಾಸ್ತ್ರೋಕ್ತ ವಿಧಿ-ವಿಧಾನಗಳ ಮೂಲಕ ಗಣೇಶೋತ್ಸವ ಆಚರಣೆಗೆ ಮುಕ್ತ ಅವಕಾಶ ಇರಬೇಕು. ಗಣೇಶೋತ್ಸವ ವರ್ಷಕ್ಕೆ ಒಂದು ಬಾರಿ ಮಾಡಲಾಗುತ್ತದೆ. ಆದ್ದರಿಂದ ಯಾವುದೇ ನಿರ್ಬಂಧ ವಿಧಿಸಬಾರದು. ಸ್ವಾತಂತ್ರ್ಯ ಹೋರಾಟದಲ್ಲಿ ಜನರ ಸಂಘಟನೆ, ಬ್ರಿಟಿಷರ ವಿರುದ್ಧ ಹೋರಾಡಲು ಬಾಲಗಂಗಾಧರ ತಿಲಕರು ಗಣೇಶ ಉತ್ಸವ ಜಾರಿಗೆ ತಂದಿದ್ದು, ಕರ್ನಾಟಕ-ಮಹಾರಾಷ್ಟ್ರದಲ್ಲಿ ಹೆಚ್ಚು ಆಚರಣೆಯಲ್ಲಿದೆ ಎಂದರು.
ವಿರಾಜಪೇಟೆ: ಗಣೇಶೋತ್ಸವ ಅದ್ಧೂರಿ ಆಚರಣೆಗೆ ತೀರ್ಮಾನ
ಉತ್ಸವಕ್ಕೆ ವಿದ್ಯುತ್, ಪೆಂಡಾಲ್, ಸ್ಪೀಕರ್, ಮಹಾನಗರ ಪಾಲಿಕೆ, ಅಗ್ನಿ ಶಾಮಕ ದಳ, ಪೊಲೀಸ್ ಠಾಣೆ ಹೀಗೆ ಪರಿಸರ, ಶಬ್ಧ ಮಾಲಿನ್ಯದ ಹಿನ್ನೆಲೆ ಪ್ರತಿಯೊಂದಕ್ಕೂ ಸರ್ಕಾರದ ಅನುಮತಿ ಕಡ್ಡಾಯಗೊಳಿಸಿದೆ. ಠಾಣೆಗಳಲ್ಲಿ ಅನುಮತಿಗೆ ಹಿಂಸೆ ನೀಡುತ್ತಾರೆ. ವಿದ್ಯುತ್, ನೀರು, ಆಸ್ತಿ ಕರ ಭರಣದಂತೆ ಕರ್ನಾಟಕ ಒನ್ ಮಾದರಿಯಲ್ಲಿ ಕೇಂದ್ರ ತೆರೆದು, ಗಣೇಶ ಪ್ರತಿಷ್ಠಾಪನೆಗೆ ಉತ್ಸವ ಸಮಿತಿ ಮುಖಂಡರನ್ನು ಅಲೆದಾಡಿಸದೆ, ಎಲ್ಲ ತರಹದ ಪರವಾನಿಗೆ ಒಂದೆಡೆಗೆ ನೀಡುವ ವ್ಯವಸ್ಥೆ ಜಾರಿಗೊಳಿಸುವಂತೆ ಒತ್ತಾಯ ಮಾಡಿದರು.
ಡಿಜೆ ಹಚ್ಚದಂತೆ ಸುಪ್ರೀಂ ಆದೇಶವಿದೆ. ಈ ಆದೇಶ ಪಾಲಿಸಲು ಗಣೇಶ ಉತ್ಸವದ ಮಂಡಳಿಗಳಿಗೂ ತಿಳಿಸುತ್ತೇವೆ. ಉತ್ಸವದಲ್ಲಿ ಅಶ್ಲೀಲ, ಅಸಭ್ಯ ಹಾಡು, ಜೂಜಾಟ, ಮಧ್ಯಪಾನದ ಘಟನೆಗಳ ವಿರುದ್ಧವೂ ಸಹ ಶ್ರೀರಾಮ ಸೇನೆಯು ಹೋರಾಡಲಿದೆ ಎಂದ ಅವರು, ಒಂದು ವೇಳೆ ಸರ್ಕಾರ ಗಣೇಶ ಉತ್ಸವ ಆಚರಣೆಗೆ ಮುಕ್ತ ಅವಕಾಶ ನೀಡದೇ, ಕಠಿಣ ನಿರ್ಬಂಧ ವಿಧಿಸಿದರೆ, ಗಣೇಶ ಉತ್ಸವ ಮಂಡಳಿಗಳ ಸಹಯೋಗದಲ್ಲಿ ಸರ್ಕಾರದ ವಿರುದ್ಧ ಬೃಹತ್ ಆಂದೋಲನ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದರು.
ಬಳ್ಳಾರಿ: ಗಣೇಶ ವಿಸರ್ಜನೆಯಲ್ಲಿ ರೆಡ್ಡಿ-ರಾಮುಲು ಕುಚುಕು ಗೆಳೆಯರ ಸಂಭ್ರಮ
ಗಣೇಶ ಉತ್ಸವದಲ್ಲಿ ಮೈಕ್(ಸ್ಪೀಕರ್) ಬಳಕೆಗೆ ಅನುಮತಿ ಪಡೆಯಲ್ಲ. ಏಕೆಂದರೆ ಮಸೀದಿಗಳಲ್ಲಿ ಮೈಕ್ ಬಳಸದಂತೆ 15 ವರ್ಷದ ಹಿಂದೆಯೇ ಕೋರ್ಚ್ ಆದೇಶ ಮಾಡಿದರೂ, ಕೆಲವರು ಪಾಲಿಸಿಲ್ಲ. ಹೀಗಾಗಿ ಮೈಕ್ ಬಳಸಲು ನಾವು ಪರವಾನಿಗೆ ಪಡೆಯಲ್ಲ. ಮಸೀದಿ ಪರವಾನಿಗೆ ತೋರಿಸಿದರೆ ಮಾತ್ರ ಉತ್ಸವ ಸಮಿತಿ ಪರವಾನಿಗೆ ಪಡೆಯಲಿದೆ ಎಂದು ನೇರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹಿಂದುಗಳ ಬಳಿ ವ್ಯವಹಾರ:
ಗಣೇಶ ಉತ್ಸವದಲ್ಲಿ ಹಿಂದುಗಳು ಹಿಂದುಗಳ ಬಳಿ ವ್ಯವಹರಿಸಬೇಕು. ಹೂವು, ಹಣ್ಣು, ಪೆಂಡಾಲ್, ಲೈಟಿಂಗ್, ಅಲಂಕಾರ ಸೇರಿ, ಸಾಮಗ್ರಿ ಖರೀದಿಸಬೇಕು. ಏಕೆಂದರೆ, ಹಿಂದುಗಳಾದ ಹರ್ಷ, ಚಂದ್ರು, ಪ್ರವೀಣ ಅವರ ಹತ್ಯೆಯಾಗಿದೆ. ಎಲ್ಲಿವರೆಗೆ ಗೋಹತ್ಯೆ, ಕಾರ್ಯಕರ್ತರ ಹತ್ಯೆ, ಕೋಮು-ಗಲಭೆ ನಿಲ್ಲುವುದಿಲ್ಲವೋ ಅಲ್ಲಿವರೆಗೂ, ಮುಸ್ಲಿಂರೊಂದಿಗೆ ವ್ಯವಹಾರ ಮಾಡಬಾರದು ಎಂದರು.