Asianet Suvarna News

ಹಿಂದೂ ವೃದ್ದನ ಅಂತ್ಯ ಸಂಸ್ಕಾರ ಮಾಡಿದ ಮುಸ್ಲಿಂ ಯುವಕರು..!

ತುಮಕೂರಿನಲ್ಲಿ ಹಿಂದೂ ವೃದ್ಧನ ಅಂತ್ಯ ಸಂಸ್ಕಾರವನ್ನು ನೆರವೇರಿಸುವ ಮೂಲಕ ಮುಸ್ಲಿಂ ಯುವಕರು ಮಾನವೀಯತೆ ಮೆರೆದಿದ್ದಾರೆ.

Muslim youth performs final rituals of hindu person in Tumakur
Author
Bangalore, First Published May 13, 2020, 2:02 PM IST
  • Facebook
  • Twitter
  • Whatsapp

ತುಮಕೂರು(ಮೇ 13): ತುಮಕೂರಿನಲ್ಲಿ ಹಿಂದೂ ವೃದ್ಧನ ಅಂತ್ಯ ಸಂಸ್ಕಾರವನ್ನು ನೆರವೇರಿಸುವ ಮೂಲಕ ಮುಸ್ಲಿಂ ಯುವಕರು ಮಾನವೀಯತೆ ಮೆರೆದಿದ್ದಾರೆ. ಲಾಕ್‌ಡೌನ್ ಹಿನ್ನೆಲೆ ಹಿಂದೂ ವೃದ್ದನ ಅಂತ್ಯ ಸಂಸ್ಕಾರಕ್ಕೆ ಕುಟುಂಬಸ್ಥರು ಬಂದಿರಲಿಲ್ಲ. ಈ ಸಂದರ್ಭ ಮುಸ್ಲಿಂ ಯುವಕರು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

ಲಾಕ್ ಡೌನ್ ಹಿನ್ನೆಲೆ ಕುಟುಂಬದವರ ಅನುಪಸ್ಥಿತಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದ ಮುಸ್ಲಿಂ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ತುಮಕೂರು ನಗರದ ಕೆಎಚ್.ಬಿ ಕಾಲೋನಿಯಲ್ಲಿ ಘಟನೆ ನಡೆದಿದೆ.

ರೆಡ್ ಝೋನ್ ಕಳೆದುಕೊಳ್ಳುತ್ತಿರುವ ಮೈಸೂರು: ಕೊರೋನಾಗೆ ಕಡಿವಾಣ ಹಾಕುವಲ್ಲಿ ಜಿಲ್ಲಾಡಳಿತ ಸಕ್ಸಸ್..!

ಸೀಲ್ ಡೌನ್ ಆಗಿರುವ ಕೆ.ಎಚ್ ಬಿ ಕಾಲೋನಿಯಲ್ಲಿ ನಿವಾಸಿ ಎಚ್ ಎಸ್ ನಾರಾಯಣರಾವ್ (60) ಸಹಜ ಸಾವನಪ್ಪಿದ್ದರು. ವೃದ್ದನ ಪತ್ನಿ ಹೊರತು ಪಡಿಸಿ ಯಾರೂ ಅಂತ್ಯ ಸಂಸ್ಕಾರ ಕ್ಕೆ ಬರಲು ಆಗಿರಲಿಲ್ಲ.

ಹಾಗಾಗಿ ಕೊರೋನಾ ವಾರಿಯರ್ಸಗಳಾದ ಮಹಮ್ಮದ್ ಖಲಿದ್, ಇಮ್ರಾನ್, ಶೇರು, ಶಾರುಖ್, ತೋಫಿಕ್ ಖತೀಬ್ ಹಾಗೂ ಮನ್ಸೂರು ಜೊತೆಯಾಗಿ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಗಾರ್ಡನ್  ರಸ್ತೆಯಲ್ಲಿರುವ  ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆದಿದೆ. ಮುಸ್ಲಿಂ ಯುವಕರ  ಮಾನವೀಯತೆಗೆ ಶ್ಲಾಘನೆ ವ್ಯಕ್ತವಾಗಿದೆ.

Follow Us:
Download App:
  • android
  • ios