Asianet Suvarna News Asianet Suvarna News

ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ವಿರುದ್ಧ ಮುಸ್ಲಿಮರ ಅಸಮಾಧಾನ ರಂಜಾನ್ ವರೆಗೂ ಗಡುವು!

ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ವಿರುದ್ಧ ಮುಸ್ಲಿಮರ ಅಸಮಾಧಾನ ಹೊರಹಾಕಿದ್ದು,  ಹಿರಿಯ ಕಾರ್ಯಕರ್ತರ ಬೆಂಬಲ ಬೇಕೋ ಬೇಡವೋ ನಿರ್ಧಾರ ಹೇಳಿ ಎಂದು ರಂಜಾನ್ ವರೆಗೂ ಗಡುವು ನೀಡಿದ ಮುಸ್ಲಿಂ ಒಕ್ಕೂಟ. ಸಭೆಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಬರುವಂತೆ ಹೇಳಿದ್ವಿ, ಆದರೆ ಬಂದಿಲ್ಲ ಎಂದು ಅಸಮಾಧಾನ.

Muslim resentment against Chikkamagaluru District Congress  gow
Author
First Published Mar 20, 2023, 10:38 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಮಾ.20): ವಿಧಾನಸಭೆ ಚುನಾವಣೆ ಹೊಸ್ತಿಲಲ್ಲೇ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಕರೆಯಲಾಗಿದ್ದ ಅಲ್ಪಸಂಖ್ಯಾತ ಕಾರ್ಯಕರ್ತರ ಸಭೆಗೆ ಪರ್ಯಾಯವಾಗಿ ಪ್ರತ್ಯೇಕ ಸಭೆ ಕರೆದ ಮತ್ತೊಂದು ಗುಂಪು ನಾಯಕರೆದುರು ಹಿರಿಯರನ್ನು ಪಕ್ಷ ಕಡೆಗಣಿಸುತ್ತಿದೆ ಎಂದು ತಮ್ಮ ಅಳಲು ತೋಡಿ ಕೊಂಡಿದ್ದಾರೆ. 

ಮುಸ್ಲಿಂ ವಿಂಗ್ ನಲ್ಲಿ ಸೀನಿಯರ್ ವರ್ಸಸ್ ಜೂನಿಯರ್ ಬಣ :
ಚಿಕ್ಕಮಗಳೂರು ನಗರದ ಕುವೆಂಪು ಕಲಾ ಮಂದಿರದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಇಂದು ಸಂಜೆ ಜಿಲ್ಲಾ ಅಲ್ಪಸಂಖ್ಯಾತರ ಸಮಾವೇಶ ಏರ್ಪಡಿಲಾಗಿತ್ತು. ಇದಕ್ಕೆ ಪ್ರತಿಯಾಗಿ ಪಕ್ಷದ ಅಲ್ಪಸಂಖ್ಯಾತ ಮುಖಂಡರು ನಗರದ ಸಹರಾ ಶಾದಿ ಮಹಲ್‌ನಲ್ಲಿ ಮತ್ತೊಂದು ಸಭೆ ಕರೆದಿದ್ದರು.ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡರುಗಳಾದ ಎಂ.ಎಲ್.ಮೂರ್ತಿ, ಬಿ.ಎಲ್.ರಾಮದಾಸ್, ಗಾಯತ್ರಿ ಶಾಂತೇಗೌಡ ಸೇರಿದಂತೆ ವಿಧಾನಸಭೆ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ 6 ಮಂದಿ ಆಕಾಂಕ್ಷಿಗಳು ಹಾಜರಿದ್ದರು. 

ಜಿಲ್ಲಾಧ್ಯಕ್ಷರ ವಿರುದ್ದ ಕಿಡಿ : 
 ಚುನಾವಣಾ ಹೊತ್ತಿನಲ್ಲಿ ಕಾಫಿನಾಡ ಜಿಲ್ಲಾ ಕಾಂಗ್ರೆಸ್ ನಲ್ಲಿ ಕಾಣಿಸಿಕೊಂಡಿರುವ ಭಿನ್ನಮತ ಸಾಕಷ್ಟು ಸದ್ದು ಮಾಡುತ್ತಿದೆ. ಅದರಲ್ಲೂ ಜಿಲ್ಲಾ ಅಲ್ಪಸಂಖ್ಯಾತರ ಘಟಕದಲ್ಲಿ ಅಸಮಾಧಾನದ ಸ್ಟೋಟಗೊಂಡಿದೆ. ಕಾಂಗ್ರೆಸ್ ಮುಸ್ಲಿಂ ವಿಂಗ್ ನಲ್ಲಿ ಸೀನಿಯರ್ ವರ್ಸಸ್ ಜೂನಿಯರ್ ಬಣವೆಂದು ವಿಗಡಣೆ ಆಗುವ ಲಕ್ಷಣಗಳು ಎದ್ದು ಕಾಣುತ್ತಿದೆ. ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರ ಸಭೆಗೂ ಮುನ್ನ ಜಿಲ್ಲಾ ಮುಸ್ಲಿಂ ಒಕ್ಕೂಟದಿಂದ ಸಭೆ ನಡೆಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಂಶುಮಂತ್ ಅಲ್ಪಸಂಖ್ಯಾತ ಅಧ್ಯಕ್ಷ ನಯಾಜ್ ವಿರುದ್ಧ ಕಿಡಿಕಾರಿದರು.

ಈ ವೇಳೆ ಮುಸ್ಲಿಂ ಮುಖಂಡ ಜಿ.ಪಂ. ಮಾಜಿ ಅಧ್ಯಕ್ಷ ಕೆ.ಮಹಮದ್ ಮಾತನಾಡಿ, ಅಲ್ಪಂಖ್ಯಾತರ ಬೇಡಿಕೆಗಳಿಗೆ ಪಕ್ಷ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಜಿಲ್ಲಾ ಘಟಕದ ಗಮನಕ್ಕೆ ಹಲವು ಬಾರಿ ತಂದಿದ್ದೇವೆ. ಆದರೆ ಪಕ್ಷವನ್ನು ಮುನ್ನಡೆಸುತ್ತಿರುವ ಈಗಿನ ಮುಖಂಡರು ಅದಕ್ಕೆ ಗಮನ ಕೊಟ್ಟಿಲ್ಲ. ಇದರಿಂದ ನೋವಾಗಿದೆ ಎಂದರು. ಪಕ್ಷಕ್ಕೆ ಧಕ್ಕೆ ಬರಬಾರದು ಎನ್ನುವ ಕಾರಣಕ್ಕೆ ಈಗ ಎಲ್ಲರನ್ನೂ ಕರೆದು ಹೇಳುತ್ತಿದ್ದೇವೆ. ಪಕ್ಷಕ್ಕೆ ಧಕ್ಕೆ ತರುವುದಾಗಿದ್ದರೆ ಬಹಳಷ್ಟು ಮಂದಿ ಸಮುದಾಯದವರು ಹಿಂದೆಯೇ ಹೇಳಿದ್ದರು. ಪ್ರತಿಭಟನೆ ಮಾಡಿ ನಮ್ಮದೇ ಸಭೆ ಮಾಡಿ ತೀರ್ಮಾನ ತೆಗೆದುಕೊಳ್ಳೋಣವೆಂದು. ಆದರೆ ನಾವು ಹಾಗೆ ಮಾಡಲಿಲ್ಲ. ನಮ್ಮ ಸಮುದಾಯ, ಧಾರ್ಮಿಕ ಭಾವನೆಗಳ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಒಗ್ಗಟ್ಟಾಗಿ ಎದುರಿಸಲು ಒಂದು ವೇದಿಕೆ ಬೇಕು ಅದನ್ನು ಕಾಂಗ್ರೆಸ್ ಪಕ್ಷ ಕೊಡುತ್ತಾ ಬಂದಿದೆ.

ಇಂದು ನಮ್ಮ ನೋವಿಗೆ ಸ್ಪಂದಿಸುತ್ತಿರುವ ರೀತಿ ಸಾಲದು. ಡಿ.ಕೆ.ಶಿವಕುಮಾರ್ ಅವರಿಗೆ ಏನಾದರೂ ಅವಹೇಳನ ಮಾಡಿದರೆ ಹಿಂದೂ, ಮುಸ್ಲಿಮರೆನ್ನದೆ ಪಕ್ಷದ ಎಲ್ಲಾ ಕಾರ್ಯಕರ್ತರು ಬಂದು ಬೀದಿಗಿಳಿದು ಪ್ರತಿಭಟಿಸುತ್ತೇವೆ. ಅದೇ ಸಿದ್ದರಾಮಯ್ಯ ಮೇಲೆ ಅವಹೇಳನ ಮಾಡಿದಾಗಲೂ ಹೋರಾಟ ಮಾಡಿದ್ದೇವೆ. ಹಾಗೆಯೇ ನಮ್ಮ ಮೇಲೆ ದೌರ್ಜನ್ಯ ನಡೆದಾಗ ಯಾಕೆ ಆ ಮಟ್ಟದ ಹೋರಾಟ ನಡೆಯುವುದಿಲ್ಲ ಎಂದು ಪ್ರಶ್ನಿಸಿದರು.

ಖರ್ಗೆ, ಪರಮೇಶ್ವರರನ್ನು ಮುಗಿಸಿರುವ ಸಿದ್ಧರಾಮಯ್ಯ, ಡಿಕೆಶಿಯನ್ನು ಕೂಡಾ ಮುಗಿಸ್ತಾರೆ:

ಅಲ್ಪಸಂಖ್ಯಾತರ ಜೊತೆ ಕಾಂಗ್ರೆಸ್ ಇರುತ್ತೆವೆ ಎಂದು ಹೇಳಿದರೆ ಸಾಲದು:
ಆಜಾನ್, ಹಿಜಾಬ್, ಹಲಾಲ್ ಕಟ್, ವ್ಯಾಪಾರಕ್ಕೆ ನಿಷೇಧ ಹೇರಿದ್ದಿರಬಹುದು, ದತ್ತಪೀಠ ವ್ಯವಸ್ಥಾಪನ ಸಮಿತಿ ರಚಿಸಿದ್ದಿರಬಹುದು ಯಾವುದೇ ವಿಚಾರದಲ್ಲಿ ಪಕ್ಷ ಸೂಕ್ತ ರೀತಿ ಪಕ್ಷ ಸ್ಪಂದಿಸಲಿಲ್ಲ. ಅಲ್ಪಸಂಖ್ಯಾತರ ಜೊತೆ ಕಾಂಗ್ರೆಸ್ ಇರುತ್ತೆವೆ ಎಂದು ಹೇಳಿದರೆ ಸಾಲದು, ಇದ್ದು ತೋರಿಸಬೇಕು ಎಂದರು. ಗುಂಪುಗಾರಿಕೆ ಮಾಡಿಕೊಳ್ಳುವುದು ನಮಗೆ ಇಷ್ಟವಿಲ್ಲ. ಕ್ಷೇತ್ರದಲ್ಲಿರುವ ಮುಸ್ಲಿಂ ಮತದಾರರಲ್ಲಿ ಏನಾದರೂ ಮಾಡಿ ಎರಡು ಗುಂಪು ಮಾಡಬೇಕೆಂದು ಹೊರಗಿನ ಶಕ್ತಿ ಕೆಲಸ ಮಾಡುತ್ತಿದೆ ಎನ್ನುವುದು ನನ್ನ ಅನಿಸಿಕೆ ಎಂದರು.

ಕಾಂಗ್ರೆಸ್ ಅವಧಿಯಲ್ಲಿ ಭಾರತವನ್ನ ಹೀಯಾಳಿಸಲಾಗ್ತಿತ್ತು: 

ಇನ್ನು ನಾವು ಕರೆದ ಸಭೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಬಾರದಿರುವ ಹಿನ್ನೆಲೆಯಲ್ಲಿ ಅವರು ಕರೆದಿರುವ ಸಭೆಗೆ ನಾವು ಹೋಗುವುದಿಲ್ಲ ಎಂದು ಸಂಜೆ ನಡೆದ ಸಭೆಯಿಂದ ಕೆಲ ಮುಸ್ಲಿಂ ಹಿರಿಯ ಮುಖಂಡರು ಹೊರಗೆಉಳಿದರು.  ಚುನಾವಣೆ ಪ್ರಕ್ರಿಯೆ ಆರಂಭವಾಗುವ ಮುನ್ನ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಗಡುವು ಕೊಟ್ಟಿದ್ದೇವೆ. ಏನು ಮಾಡುತ್ತಾರೋ ನೋಡಿ ಆಮೇಲೆ ನಮ್ಮ ತೀರ್ಮಾನ ತಿಳಿಸುತ್ತೇವೆ ಎಂದರು.

Follow Us:
Download App:
  • android
  • ios