ಬೆಂಗಳೂರು(ಜ.16): ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು ಶಾಂತಿ ಯುತವಾಗಿರಬೇಕು. ದೇಶದಲ್ಲಿ ಶಾಂತಿ- ನೆಮ್ಮದಿ ನೆಲೆಸಬೇಕು ಎಂದು ಮುಸ್ಲಿಮರು ಬುಧವಾರ ಪ್ರಾರ್ಥನೆ ಸಲ್ಲಿಸಿದ್ದಾರೆ.

ನಗರದ ಮಿಲ್ಲರ್ಸ್‌ ರಸ್ತೆಯಲ್ಲಿರುವ ಹಜ ರತ್ ಖುದ್ದೂಸ್ ಸಾಹೇಬ್ ಈದ್‌ಗಾಹ್ ಸಮೀಪದ ಖಾದರಿಯಾ ಮಸೀದಿಯಲ್ಲಿ ಜುಮಾ ಮಸ್ಜಿದ್ ಟ್ರಸ್ಟ್ ಬೋರ್ಡ್ ಹಾಗೂ ಮರ್ಕಝ್ ಖೈಕಾ ಇನ್‌ಸ್ಟಿಟ್ಯೂಟ್ ಆಫ್ ಇಸ್ಲಾಮಿಕ್ ಸ್ಟಡೀಸ್(ಮರ್ಕಿನ್ಸ್) ಸಹಯೋಗ ದಲ್ಲಿ ಬೃಹತ್ ಆಧ್ಯಾತ್ಮಿಕ ಹಾಗೂ ಪ್ರಾರ್ಥನಾ ಸಂಗಮ ಸಭೆ ನಡೆಯಿತು. ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಮುಸ್ಲಿಂ ಸಂಘಟನೆಗಳ ಧಾರ್ಮಿಕ ಗುರುಗಳು ಹಾಗೂ ಮುಖಂಡರು ಶಾಂತಿ- ಸಹಬಾಳ್ವೆಯಿಂದ ಬದುಕುತ್ತಿರುವ ದೇಶದ ಜನರನ್ನು ರಾಜಕೀಯ ದುರುದ್ದೇಶದಿಂದ ವಿಭ ಜಿಸಲು ಯತ್ನಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಕಾಸರಗೋಡಲ್ಲಿ ಕನ್ನಡ ಶಾಲೆಗೆ ಮತ್ತೆ ಮಲಯಾಳಿ ಶಿಕ್ಷಕಿ!

ಸಿಎಎ ಮತ್ತು ಎನ್‌ಸಿಆರ್ ಮೂಲಕ ದೇಶದಲ್ಲಿನ ವಿವಿಧ ಧರ್ಮಗಳ ನಡುವಿನ ಸೋದರತೆ ಯನ್ನು ಒಡೆಯಲು ಸಾಧ್ಯವಿಲ್ಲ. ಅದಕ್ಕೆ ಅವ ಕಾಶ ನೀಡುವುದಿಲ್ಲ. ಸರ್ವವನ್ನು ಅರಿತಿರುವ ಅಲ್ಲಾನ ಮುಂದೆ ಅರಿಕೆ ಮಾಡುವುದಾಗಿ ಧಾರ್ಮಿಕ ಮುಖಂಡರು ಹೇಳಿದರು. ಆರಂಭದಲ್ಲಿ ಕುರಾನ್ ಖಾನಿ(ಶಾಂತಿಗಾಗಿ ಕುರಾನ್ ಪಠಣ), ೧.೨೬ ಕೋಟಿ ‘ಆಯತೆ ಕರೀಮಾ’ ಸಮರ್ಪಣೆ ಮತ್ತು ದುವಾ ಜಲ್ಸಾ ದಂತಹ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳು ಜರುಗಿದವು.

'ಬೆಂಗಳೂರಿನಲ್ಲಿ ಶೇ.100 ತ್ಯಾಜ್ಯ ವಿಂಗಡಣೆ ಸಾಧ್ಯವೇ ಇಲ್ಲ'

ಆಧ್ಯಾತ್ಮಿಕ ಮುಖಂಡ ಜನಾಬ್ ಡಾ.ಅಲ್ಹಾಜ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್‌ಕಟ್ಟೆ ಅವರು ಪ್ರಾರ್ಥನಾ ಸಮ್ಮಿಲನದ ನೇತೃತ್ವ ವಹಿಸಿದ್ದರು. ಈ ಸಮಾರಂಭದ ಅಧ್ಯಕ್ಷತೆಯನ್ನು ಮರ್ಕಿನ್ಸ್ ಪ್ರಿನ್ಸಿಪಾಲ್ ಜಾಫರ್‌ಅಹ್ಮದ್ ನೂರಾನಿ ವಹಿಸಿದರು. ಎಸ್‌ಎಂಎ ಕಾರ್ಯದರ್ಶಿ ಜಲೀಲ್ ಹಾಜಿ, ಜುಮಾ ಮಸ್ಜಿದ್ ಟ್ರಸ್ಟ್ ಅಧ್ಯಕ್ಷ ವಕೀ ಲ ಮುಶ್ತಾಕ್ ಅಹ್ಮದ್ ಸಾಹೇಬ್, ಜುಮಾ ಮಸ್ಜಿದ್ ಟ್ರಸ್ಟ್ ಸದಸ್ಯರಾದ ಎಸ್‌ಎಸ್‌ಎ ಖಾದರ್ ಹಾಜಿ, ಉಸ್ಮಾನ್ ಶರೀಫ್, ಮೌಲಾನಾ ಹುಸೈನ್ ಮಿಸ್ಬಾಹಿ ಇದ್ದರು.