ಚಿತ್ರದುರ್ಗ(ಜೂ.02): ನಗರದ ಮುರುಘಾ ಮಠದ ಶ್ರೀ ಮುರುಘಾ ಶರಣರ ಸಹೋದರ ಎಂ.ಜಿ ದೊರೆಸ್ವಾಮಿ(52) ಇಂದು(ಬುಧವಾರ) ಕೋವಿಡ್‌ಗೆ ಬಲಿಯಾಗಿದ್ದಾರೆ. 

ಕಳೆದ 20 ದಿನಗಳಿಂದ ಕೋವಿಡ್‌ನಿಂದ ಬಳಲುತ್ತಿದ್ದ ದೊರೆಸ್ವಾಮಿ ಅವರನ್ನ ಬೆಂಗಳೂರಿನ‌ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಎಂ.ಜಿ ದೊರೆಸ್ವಾಮಿ ಇಂದು(ಬುಧವಾರ) ಕೊನೆಯುಸಿರೆಳಿದ್ದಾರೆ. 

ಕೋವಿಡ್‌ಗೆ ಪ್ರತಿದಿನ ರಾಜ್ಯದ 40 ಯುವಕರು ಬಲಿ! ಆಘಾತದ ಸಂಗತಿ ಬಯಲು

ಎಂ.ಜಿ ದೊರೆಸ್ವಾಮಿ ಅವರು ಮುರುಘಾಮಠದ ಮಾಜಿ ಸಿಇಓ ಆಗಿ ಕಾರ್ಯನಿರ್ವಹಿಸಿದ್ದರು ಎಂದು ತಿಳಿದು ಬಂದಿದೆ. ಎಂ.ಜಿ ದೊರೆಸ್ವಾಮಿ ಹದಿನೈದು ದಿನಗಳ ಹಿಂದೆ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.