Asianet Suvarna News Asianet Suvarna News

Puneeth Rajkumar; ಅಪ್ಪುಗೆ ಕರ್ನಾಟಕ ರತ್ನ, ಸಿಎಂ ಬೊಮ್ಮಾಯಿಗೆ ನಿರಾಣಿ ಅಭಿನಂದನೆ

* ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಗೌರವ
* ಮರಣೋತ್ತರ ಕರ್ನಾಟಕ ರತ್ನ ಅಪ್ಪು
* ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಿಗೆ ‌ಅಭಿನಂದನೆ
* ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರಿಂದ ಅಭಿನಂದನೆ

 

Murugesh Nirani congratulates CM Basavaraj Bommai for to honour late Puneeth Rajkumar with Karnataka Ratna award  mah
Author
Bengaluru, First Published Nov 16, 2021, 9:24 PM IST

ಬೆಂಗಳೂರು (ನ.16) ಅಭಿಮಾನಿಗಳ ಒತ್ತಾಸೆಯಂತೆ  ದಿ. ಪುನೀತ್ ರಾಜ್ ಕುಮಾರ್ (Puneeth Rajkumar) ಅವರಿಗೆ ಮರಣೋತ್ತರವಾಗಿವ ಪ್ರತಿಷ್ಠಿತ " ಕರ್ನಾಟಕ ಪ್ರಶಸ್ತಿ" (Karnataka Ratna) ಘೋಷಣೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ (Basavaraj Bommai) ಅವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ (Murugesh Nirani) ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಅತೀ ಚಿಕ್ಕವಯಸ್ಸಿನಲ್ಲೇ ಅತ್ಯುತ್ತಮ ಬಾಲ ನಟನೆಗೆ ' ರಾಷ್ಟ್ರೀಯ ಪ್ರಶಸ್ತಿಗೆ ' ಭಾಜನರಾಗಿದ್ದ ಅವರಿಗೆ   ಕರ್ನಾಟಕ ಪ್ರಶಸ್ತಿ ಘೋಷಣೆ ಮಾಡುವ ಮೂಲಕ ಆಗಲಿದ ಮೇರು ನಟನೆಗೆ ಸಿ.ಎಂ‌ ಅವರು ‌ಅರ್ಹ ಗೌರವವನ್ನು  ನೀಡಿದ್ದಾರೆ  ಎಂದು ಹೇಳಿದ್ದಾರೆ.

ಅವರ ಬದುಕಿನ ಆದರ್ಶ ಯುವ ಜನಾಂಗಕ್ಕೆ ದಾರಿದೀಪ, ದೊಡ್ಡ ಹೆಜ್ಜೆ ಗುರುತನ್ನು ಬಿಟ್ಟು ಹೋಗಿದ್ದಾರೆ. ಪುನೀತ್ ಅವರಲ್ಲಿದ್ದ ನಯ, ವಿನಯ, ಸರಳತೆ, ಸಮಾಜ ಸೇವೆಯನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ನಾವು ಸಲ್ಲಿಸುವ ಗೌರವವಾಗಿದೆ.ಇಂದಿನ ಯುವಜನತೆ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ಮಾಡಿದ್ದಾರೆ.

ಪುನೀತ್ ರಾಜ್ ಕುಮಾರ್ ಕರ್ನಾಟಕ ರತ್ನ

ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಬೇಕು ಎಂಬುದು ಅಭಿಮಾನಿಗಳು ‌ಸೇರಿದಂತೆ ಆರುವರೆಕೋಟಿ ಕನ್ನಡಿಗರ ಒತ್ತಾಸೆಯಾಗಿತ್ತು. ಸೂಕ್ತ ಸಮಯದಲ್ಲಿ ಮುಖ್ಯ ಮಂತ್ರಿ  ಬೊಮ್ಮಯಿ ಅವರು, ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಶ್ಲಾಘಿಸಿದ್ದಾರೆ‌

ಪುನೀತ್​ ರಾಜ್ ಕುಮಾರ್ ಕನ್ನಡನಾಡಿನ ಜನರ ಹೃದಯ ಸಿಂಹಾಸನದಲ್ಲಿ ನೆಲೆಸಿದ್ದರು. ಅವರು ಕೇವಲ ಒಬ್ಬ ನಟನಾಗಿ ಸಮಾಜದಲ್ಲಿ ಜನಪ್ರಿಯರಾಗಿರಲಿಲ್ಲ.  ನಯ, ವಿನಯ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದ ಆದರ್ಶ ವ್ಯಕ್ತಿಯಾಗಿದ್ದರು ಎಂದು ಬಣ್ಣಿಸಿದ್ದಾರೆ.

ಅವರ ಅಭಿನಯ, ಯಶಸ್ಸಿಗೆ ಅವರ ನಡೆ, ನುಡಿ, ವಿನಯ ಕಿರೀಟ ಪ್ರಾಯವಾಗಿತ್ತು. ವರನಟ ಡಾ.ರಾಜ್​ಕುಮಾರ್​ ಅವರಲ್ಲಿದ್ದ ಆ ನಡೆ, ನುಡಿಯನ್ನು ಅವರಲ್ಲಿ ಕಾಣುತ್ತಿದ್ದೆವು. ಇದೆಲ್ಲದರ ನಡುವೆ ಅವರ ಪರೋಪಕಾರಿ ಕೆಲಸಗಳು ಸಮಾಜಕ್ಕೆ ಮಾದರಿಯಾಗಿದ್ದವು ಎಂದು ಅಪ್ಪುವಿನ ಸೇವೆಯನ್ನು ಸ್ಮರಿಸಿದ್ದಾರೆ‌. ಆ ನಗು, ವಿನಯ, ಸರಳತೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ.  ಇದರಿಂದಲೇ ಅವರು ಕರ್ನಾಟಕದ ಎಲ್ಲ ಜನರ ಮನಸ್ಸು ಗೆದ್ದಿದ್ದರು.

ಕೇವಲ, ಚಿತ್ರರಂಗಕ್ಕೆ ತಮ್ಮನ್ನು ‌ಗುರುತಿಸಿಕೊಳ್ಳದ ಪುನೀತ್ ರಾಜ್ ಕುಮಾರ್ ಹಲವಾರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.  ಬಡಮಕ್ಕಳ ಶಿಕ್ಷಣಕ್ಕೆ ‌ನೆರವು, ಆನಾಥಶ್ರಮ, ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವುದು ಸೇರಿದಂತೆ ನೂರಾರು ಸಮಾಜ ಸೇವೆಯನ್ನು ಮಾಡಿದ್ದರು. ಅದರೆ ತಾವು ಮಾಡಿದ ಕೆಲಸಗಳಿಗೆ ಎಲ್ಲಿಯೂ ಪ್ರಚಾರ ಪಡೆಯುತ್ತಿರಲಿಲ್ಲ. ಇದು ‌ಅವರ ದೊಡ್ಡತನಕ್ಕೆ ಸಾಕ್ಷಿ ಎಂದು ತಿಳಿಸಿದ್ದಾರೆ.

ಪುನೀತ್ ಗೆ ನಮನ; ಪುನೀತ್ ರಾಜ್ ಕುಮಾರ್ ಅವರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ  ನಮನ ಸಲ್ಲಿಸಲಾಗುತ್ತಿದೆ.  ಸಿಎಂ ಬಸವರಾಜ ಬೊಮ್ಮಾಯಿ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ ಸೇರಿದಂತೆ ರಾಜಕೀಯ ಗಣ್ಯರು, ಪ್ರಕಾಶ್ ರಾಜ್, ವಿಶಾಲ್ ಸೇರಿದಂತೆ ತಮಿಳು ಮತ್ತು ತೆಲುಗು ಚಿತ್ರರಂಗದ ಗಣ್ಯರು.. ಸ್ಯಾಂಡಲ್ ವುಡ್ ನ  ತಾರೆಗಳು ಭಾಗವಹಿಸಿ ಮತ್ತೊಮ್ಮೆ ನಮನ ಸಲ್ಲಿಸಿದರು.

ಹೃದಯಾಘಾತದಿಂದ ಯುವರತ್ನ ಅಭಿಮಾನಿಗಳನ್ನು ಅಗಲಿದ್ದರು. ಪುನೀತ್ ನಿಧನದ ನಂತರ ಅವರ ಎಲ್ಲ ಸಾಮಾಜಿಕ ಕೆಲಸಗಳು ಅನಾವರಣವಾಗಿದ್ದು ಪ್ರತಿ ದಿನ ಅವರ ಸಮಾಧಿಗೆ ಸಾವಿರಾರು ಅಭಿಮಾನಿಗಳು ನಮನ ಸಲ್ಲಿಸುತ್ತಲೇ ಇದ್ದು ಕರ್ನಾಟಕದ ಮೂಲೆ ಮೂಲೆಗಳಿಂದ ಆಗಮಿಸುತ್ತಿದ್ದಾರೆ. 

ಕವಿ ಕುವೆಂಪು ಹಾಗೂ ಡಾ. ರಾಜ್‌ಕುಮಾರ್‌ ಅವರಿಗೆ ಕರ್ನಾಟಕ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಎಸ್‌. ನಿಜಲಿಂಗಪ್ಪ, ಸಿಎನ್‌ಆರ್‌ ರಾವ್‌, ಡಾ. ದೇವಿಶೆಟ್ಟಿ, ಭೀಮಸೇನ್‌ ಜೋಶಿ, ಡಾ. ಶಿವಕುಮಾರ ಸ್ವಾಮೀಜಿ, ದೇ. ಜವರೇಗೌಡ, ಡಾ.ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಈ ಗೌರವ ನೀಡಲಾಗಿತ್ತು

Follow Us:
Download App:
  • android
  • ios