Asianet Suvarna News Asianet Suvarna News

ಕೋಲಾರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ : ಮುನಿರತ್ನ ಭರವಸೆ

ಈ ಬಾರಿಯ ಬಜೆಟ್‌ನಲ್ಲಿ ಮಾವು ಸಂಸ್ಕರಣಾ ಘಟಕ ಹಾಗೂ ಜಿಲ್ಲೆಗೆ ಮೆಡಿಕಲ್‌ ಕಾಲೇಜು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.

Muniratna Assure About Medical college In Kolar snr
Author
First Published Jan 27, 2023, 7:12 AM IST

 ಕೋಲಾರ : ಈ ಬಾರಿಯ ಬಜೆಟ್‌ನಲ್ಲಿ ಮಾವು ಸಂಸ್ಕರಣಾ ಘಟಕ ಹಾಗೂ ಜಿಲ್ಲೆಗೆ ಮೆಡಿಕಲ್‌ ಕಾಲೇಜು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.

ನಗರದ ಸರ್‌ ಎಂ.ವಿ ಕ್ರೀಡಾಂಗಣದಲ್ಲಿ 74ನೇ ಗಣ ರಾಜ್ಯೋತ್ಸವ ಧ್ವಜಾ ರೋಹಣ ಮಾಡಿ ಮತ್ತು ಸರ್‌ ಎಂ ವಿ ಕ್ರೀಡಾಂಗಣದಲ್ಲಿ 8 ಕೋಟಿ 55 ಲಕ್ಷ ವೆಚ್ಚದ ಕ್ರೀಡಾಂಗಣದಲ್ಲಿ ಸಿಂಥೆಟಿಕ್‌ ಟ್ರಾಕ್‌ಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಜಿಲ್ಲೆಯ ಎಲ್ಲಾ ಕೆರೆ ಅಭಿವೃದ್ದಿಗೆ ನಮ್ಮ ಸರ್ಕಾರ ಬದ್ದವಾಗಿದೆ, ಚುನಾವಣೆ ಬಂದಿದೆ ಎಂದು ಕೆಲವರು ಸಖತ್‌ ಆಲರ್ಚ್‌ ಅಂತಹವರಿಗೆ ಅದಕ್ಕಾಗಿ ರಸ್ತೆ ಗುಂಡಿ ಮುಚ್ಚುತ್ತಿದ್ದಾರೆ, ಇದಕ್ಕೆಲ್ಲ ಮುಂದೆ ಸಾರ್ವಜನಿಕರೆ ಉತ್ತರ ಕೊಡುತ್ತಾರೆ ಎಂದರು.

ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು

ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸ್ಪರ್ಧೆ ಯಾರು ಎಲ್ಲಿ ಬೇಕಾದರೂ ಹೇಳಬಹುದು, ಆದರೆ ಸ್ಪರ್ಧೆ ಮಾಡಿದಾಗ ಮಾತ್ರ ಗೊತ್ತಾಗುತ್ತೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉತ್ತಮ ಆಡಳಿತ ಕೊಡುತ್ತಿವೆ, ರೈತರಿಗಾಗಿ ನಾವು ಸಾಕಷ್ಟು ಯೋಜನೆಗಳನ್ನ ಕೊಟ್ಟಿದ್ದೇವೆ. ಬೇಡಿಕೆ ಇದ್ದಷ್ಟುಅನುದಾನವನ್ನ ರೈತರಿಗೆ ಕೊಡುತ್ತಿದ್ದೇವೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಹಾಗು ಡಿ. ಕೆ. ಶಿವಕುಮಾರ್‌ ಭ್ರಷ್ಟಾಚಾರ ಆರೋಪಕ್ಕೆ ಪ್ರತಿಕ್ರಿಯಿಸಿ ಬೇರೆ ಯಾರಾದ್ರು ಕೇಳಿದರೆ ಅದಕ್ಕೆ ಉತ್ತರ ಕೊಡುತ್ತಿದೆ. ಆದರೆ ಭ್ರಷ್ಟಾಚಾರ ಮಾಡಿರುವವರೆ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಶೇ.40 ಪರ್ಸೆಂಟ್‌ ಕುರಿತು ಮಾತನಾಡುವವರು ನ್ಯಾಯಾಲಯಕ್ಕೆ ಬಂದು ಉತ್ತರ ಕೊಡಲಿ. ಬೆಡ್‌ ರೂಂ ಡಿ. ಕೆ .ಶಿವಕುಮಾರ್‌ ವಿಚಾರ, ನಾನು ಬೆಡ್‌ ರೂಂ ನಲ್ಲಿ ಇಲ್ಲ. ಅವರಿಗೆ ಕೇಳಿ ಏನ್‌ ಬೆಡ್‌ ರೂಂ ವಿಚಾರ ಅಂತ ಎಂದರು.

ರಾಷ್ಟ್ರ, ರಾಜ್ಯ ಅಭಿವೃದ್ಧಿಗೆ ಶ್ರಮಿಸೋಣ

ಇದಕ್ಕೆ ಮುನ್ನ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದ ಮಾತನಾಡಿದ ಸಚಿವ ಮುನಿರತ್ನ, ಗಣತಂತ್ರ ವ್ಯವಸ್ಥೆಯಲ್ಲಿ ಜನರ ಸಕ್ರಿಯ ಸಹಭಾಗಿತ್ವ ಇಲ್ಲದೆ ಯಾವುದೇ ಅಭಿವೃದ್ಧಿ ಕಾರ್ಯವು ಅರ್ಥಪೂರ್ಣ ಆಗದು. ನಾವೆಲ್ಲರೂ ರಾಷ್ಟ್ರ ಮತ್ತು ರಾಜ್ಯದ ಅಭಿವೃದ್ಧಿಗೆ ಕಟಿಬದ್ಧರಾಗೋಣ ಎಂದರು.

ಒಂದು ದೇಶ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಅದರ ಸರ್ವತೋಮುಖ ಅಭಿವೃದ್ಧಿ ಅತ್ಯಗತ್ಯ. ಆರ್ಥಿಕ ಸಬಲತೆ, ಸಾಮಾಜಿಕ ಕಳಕಳಿ, ಸಮೃದ್ಧ ಸಂಪನ್ಮೂಲದ ಜೊತೆಜೊತೆಗೆ ಆರೋಗ್ಯಕರ ಸಮಾಜವೂ ಅತಿ ಮುಖ್ಯ. ಈ ಗಣತಂತ್ರವನ್ನು ಸುಭದ್ರವಾಗಿರಿಸಲು ಗಡಿ ಕಾಯುವ ಯೋಧರ ತ್ಯಾಗ ಬಲಿದಾನಗಳನ್ನು ನಾವು ಗೌರವಿಸಬೇಕು. ನಮ್ಮ ಯೋಧರ ಧೈರ್ಯ ಮತ್ತು ಅನ್ನದಾತರ ಸಂಯಮ ನಮಗಿಂದು ಆದರ್ಶಗಳಾಗಬೇಕಿದೆ ಎಂದು ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮ

ಸಚಿವರ ಭಾಷಣದ ನಂತರ ವಿವಿಧ ಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಪಥಸಂಚಲದಲ್ಲಿ ಆಕರ್ಷಕವಾಗಿ ಭಾಗಿಯಾದ ತಂಡಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಕ್ರೀಡಾಂಗಣವನ್ನು ಉನ್ನತ ದರ್ಜೆಗೇರಿಸಲು ಶಂಕು ಸ್ಥಾಪನೆ ಮಾಡಲಾಯಿತು.

ಸಂಸದ ಎಸ್‌.ಮುನಿಸ್ವಾಮಿ, ಎಂಎಲ್‌ಸಿಗಳಾದ ಎಂ.ಎಲ್‌.ಅನಿಲ್‌ ಕುಮಾರ್‌, ಇಂಚರ ಗೋವಿಂದರಾಜು, ಶಾಸಕ ಕೆ.ಶ್ರೀನಿವಾಸಗೌಡ, ನಗರಸಭೆ ಅಧ್ಯಕ್ಷೆ ಶ್ವೇತ ಶಬರೀಶ್‌, ಜಿಲ್ಲಾಧಿಕಾರಿ ವೆಂಕಟ್‌ ರಾಜಾ , ಜಿಪಂ ಸಿಇಒ ಯುಕೇಶ್‌ ಕುಮಾರ್‌, ಜಿಲ್ಲಾ ರಕ್ಷಣಾಧಿಕಾರಿ ಎಂ.ನಾರಾಯಣ, ಪ್ರೊಬೆಷನರಿ ಜಿಲ್ಲಾಧಿಕಾರಿ ವಿನಾಯಕ್‌, ಅಪರ ಜಿಲ್ಲಾಧಿಕಾರಿ ಅಮರೇಶ್‌.ಎಚ್‌, ಮಾಜಿ ಸಚಿವ ವರ್ತೂರು ಪ್ರಕಾಶ್‌, ಮಾಜಿ ಶಾಸಕ ವೈ.ಸಂಪಂಗಿ, ಕುಡಾ ಅಧ್ಯಕ್ಷ ವಿಜಯಕುಮಾರ್‌ ಇದ್ದರು.

Follow Us:
Download App:
  • android
  • ios