Asianet Suvarna News Asianet Suvarna News

ಕೊಪ್ಪಳ: ಹಂದಿ ಕಳ್ಳರ ಗ್ಯಾಂಗ್ ಹಿಡಿಯಲು ಹೋದ ಪುರಸಭೆ ಸದಸ್ಯ ಸಾವು

ಹಂದಿ ಕದಿಯಲು ಬಂದಿದ್ದ ಕಳ್ಳರ ಗ್ಯಾಂಗ್‌ ಹಿಡಿಯಲು ಹೋಗಿ ಪುರಸಭೆ ಸದಸ್ಯರೊಬ್ಬರು ಮೃತಪಟ್ಟ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನಲ್ಲಿ ನಡೆದಿದೆ. 
 

municipality member dies due to who went to catch pig gang of thieves in koppal grg
Author
First Published Aug 14, 2024, 6:35 AM IST | Last Updated Aug 14, 2024, 6:35 AM IST

ಕಾರಟಗಿ(ಆ.14):  ಹಂದಿ ಕದಿಯಲು ಬಂದಿದ್ದ ಕಳ್ಳರ ಗ್ಯಾಂಗ್‌ ಹಿಡಿಯಲು ಹೋಗಿ ಪುರಸಭೆ ಸದಸ್ಯರೊಬ್ಬರು ಮೃತಪಟ್ಟ ಘಟನೆ ಸೋಮವಾರ ರಾತ್ರಿ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನಲ್ಲಿ ನಡೆದಿದೆ. 

ಕಾಂಗ್ರೆಸ್ ಸದಸ್ಯ ರಾಮಣ್ಣ ಕೊರವರ ಮೃತ ವ್ಯಕ್ತಿ. ಪುರಸಭೆ ಹಿಂಭಾಗದ ರಸ್ತೆಯಲ್ಲಿ ಕೊರವರ ಸಮುದಾಯದವರು ಸಾಕಿದ್ದ ಹಂದಿಗಳನ್ನು ಕದಿಯಲು ಸೋಮವಾರ ರಾತ್ರಿ ಬುಲೆರೋ ವಾಹನದಲ್ಲಿ ಗ್ಯಾಂಗ್‌ವೊಂದು ಬಂದಿದೆ. ಕಳ್ಳರು ವಾಹನದಲ್ಲಿ 45 ಹಂದಿಗಳನ್ನು ಹೇರಿಕೊಂಡು ಹೋಗುತ್ತಿದ್ದಾಗ ಹಂದಿಗಳು ಚೀರಿದ ಶಬ್ದದಿಂದ ಎಚ್ಚೆತ್ತ ರಾಮಣ್ಣ ಹೊರಗಡೆ ಬಂದಿದ್ದು, ಹಂದಿಗಳನ್ನು ಹೊತ್ತುಕೊಂಡು ಹೋಗುವುದನ್ನು ಕಂಡಿದ್ದಾರೆ. 

ಟಿಬಿ ಡ್ಯಾಂಗೆ ಗೇಟ್‌ ಅಳವಡಿಕೆ ಇಂದು ಶುರು: ಸಿಎಂ ಸಿದ್ದರಾಮಯ್ಯ

ಕೂಡಲೇ ಅವರನ್ನು ಹಿಡಿಯಲು ಬೆನ್ನತ್ತಿದ್ದಾರೆ. ಇವರೊಂದಿಗೆ ಇವರ ಮಗ ಮತ್ತು ಇವರ ನೆರೆಯ ಮೂವರೂ ಓಡಿ ಹೋಗಿದ್ದಾರೆ. ಆದರೆ, ಕಳ್ಳರು ರಾಮಣ್ಣ ಕೊರವರಿಗೆ ಹಲ್ಲೆ ಮಾಡಿ ತಮ್ಮ ವಾಹನದಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ರಾಮಣ್ಣರನ್ನು ಆಸ್ಪತ್ರೆಗೆ ಕರೆದ್ಯೋಯ್ಯುವಷ್ಟರಲ್ಲೇ ಮೃತಪಟ್ಟಿದ್ದಾರೆ.

Latest Videos
Follow Us:
Download App:
  • android
  • ios