ಮಂಗಳೂರಿಂದ ಮೈಸೂರು, ಬೆಂಗಳೂರಿಗೆ ಮಲ್ಟಿಆ್ಯಕ್ಸೆಲ್ ವೋಲ್ವೊ
ಮಂಗಳೂರು - ಮೈಸೂರು- ಮಂಗಳೂರು ಮಾರ್ಗದಲ್ಲಿ ಹೊಸ ವೋಲ್ವೊ ಸಾರಿಗೆಯನ್ನು ಹಾಗೂ ಮಂಗಳೂರು- ಬೆಂಗಳೂರು- ಮಂಗಳೂರು ಮಾರ್ಗದಲ್ಲಿ ಹೊಸ ಮಲ್ಟಿಆ್ಯಕ್ಸೆಲ್ ವೋಲ್ವೊ ಸಾರಿಗೆಯನ್ನು ಜನವರಿ 11ರಿಂದ ಆಂಭಿಸಲಾಗಿದೆ.
ಮಂಗಳೂರು(ಜ.14): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಿಂದ ಮಂಗಳೂರು - ಮೈಸೂರು- ಮಂಗಳೂರು ಮಾರ್ಗದಲ್ಲಿ ಹೊಸ ವೋಲ್ವೊ ಸಾರಿಗೆಯನ್ನು ಹಾಗೂ ಮಂಗಳೂರು- ಬೆಂಗಳೂರು- ಮಂಗಳೂರು ಮಾರ್ಗದಲ್ಲಿ ಹೊಸ ಮಲ್ಟಿಆ್ಯಕ್ಸೆಲ್ ವೋಲ್ವೊ ಸಾರಿಗೆಯನ್ನು ಜನವರಿ 11ರಿಂದ ಆಂಭಿಸಿದೆ.
ಮಂಗಳೂರು- ಮೈಸೂರು- ಮಂಗಳೂರು ವೋಲ್ವೊ ಬಸ್ ಮಂಗಳೂರು ಬಸ್ಸು ನಿಲ್ದಾಣದಿಂದ ಬೆಳಗ್ಗೆ 5.30 ಗಂಟೆಗೆ ಹೊರಟು ಪುತ್ತೂರು 6.30, ಸುಳ್ಯ 7.20, ಮಡಿಕೇರಿ 8.30 ಮಾರ್ಗವಾಗಿ ಮೈಸೂರಿಗೆ ರಾತ್ರಿ 10.30 ಗಂಟೆಗೆ ತಲುಪುವುದು ಹಾಗೂ ಮರು ಪ್ರಯಾಣದಲ್ಲಿ ಮೈಸೂರಿನಿಂದ ಬೆಳಗ್ಗೆ 7 ಗಂಟೆಗೆ ಹೊರಟು ಮಡಿಕೇರಿಗೆ 9 ಗಂಟೆ, ಸುಳ್ಯ 10.10, ಪುತ್ತೂರು 11 ಮಾರ್ಗವಾಗಿ ಮಂಗಳೂರಿಗೆ 12 ಗಂಟೆಗೆ ತಲುಪಲಿದೆ.
ಮೈಸೂರು ವಿವಿ ಫ್ರೀ ಕಾಶ್ಮೀರ ಪೋಸ್ಟರ್ ಪ್ರಕರಣ; ಹಿಂದೆ ಸರಿದ ವಕೀಲ
ಮಂಗಳೂರು- ಬೆಂಗಳೂರು- ಮಂಗಳೂರು ಮಲ್ಟಿಆ್ಯಕ್ಸೆಲ್ ವೋಲ್ವೊ ಬಸ್ ಮಂಗಳೂರಿನಿಂದ ಬೆಳಗ್ಗೆ 7 ಗಂಟೆಗೆ ಹೊರಟು ಪುತ್ತೂರಿಗೆ 8 ಗಂಟೆ, ಮಡಿಕೇರಿ 10, ಮೈಸೂರು 1 ಗಂಟೆಗೆ ತಲುಪಿ ಬೆಂಗಳೂರಿಗೆ 3 ಗಂಟೆಗೆ ತಲುಪಲಿದೆ. ಮರು ಪ್ರಯಾಣದಲ್ಲಿ ಬೆಂಗಳೂರಿನಿಂದ 11 ಗಂಟೆಗೆ ಹೊರಟು ಮೈಸೂರು 2.30, ಮಡಿಕೇರಿ 4.30, ಪುತ್ತೂರು ಮಾರ್ಗವಾಗಿ ಮಂಗಳೂರಿಗೆ 6.45 ಗಂಟೆಗೆ ತಲುಪಲಿದೆ.
ಪತಿ ಕೊಂದು ಹೂತಿಟ್ಲು; ಎರಡೂವರೆ ವರ್ಷಗಳ ನಂತ್ರ ಬಯಲಾದ ಕೊಲೆ ರಹಸ್ಯ..!
ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆ ತಿಳಿಸಿದೆ.