ಮುದ್ದೇಬಿಹಾಳ: ಶಾಸಕ ನಡಹಳ್ಳಿ ಕುಟುಂಬಸ್ಥರಿಂದ ಪೊಲೀಸರಿಗೆ ಪ್ರೊಟೀನ್ ಕಿಟ್

ಶಾಸಕ ನಡಹಳ್ಳಿ ಪತ್ನಿ ಮಹಾದೇವಿ ಹಾಗೂ ಪುತ್ರ ಭರತಗೌಡ ಪಾಟೀಲ್ ನಡಹಳ್ಳಿಯಿಂದ ಕಿಟ್ ಹಸ್ತಾಂತರ| ಮುದ್ದೇಬಿಹಾಳ ಕ್ಷೇತ್ರದ ಕರ್ತವ್ಯದ ಮೇಲಿರುವ ಎಲ್ಲ ಪೊಲೀಸರಿಗೂ ಪ್ರೊಟೀನ್ ಪುಡ್ ಕಿಟ್‌ ವಿತರಣೆ| 

Muddebihal BJP MLA AS Patil Nadahalli Family Given Protein Kit to Police grg

ವಿಜಯಪುರ(ಮೇ.03): ರಾಜ್ಯಾದ್ಯಂತ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಹೀಗಾಗಿ ರಾಜ್ಯ ಸರ್ಕಾರ ಜನತಾ ಕರ್ಫ್ಯೂ ಜಾರಿ ಮಾಡಿದೆ. ಈ ಅವಧಿಯಲ್ಲಿ ಕೊರೋನಾ ವಾರಿಯರ್‌ಗಳಾದ ಪೊಲೀಸರು ಹಗಳಿರುಲು ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರ ಆರೋಗ್ಯದ ದೃಷ್ಟಿಯಿಂದ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದ ಬಿಜೆಪಿ ಶಾಸಕ ಎ.ಎಸ್‌. ಪಾಟೀಲ್‌ ನಡಹಳ್ಳಿ ಕುಟುಂಬಸ್ಥರು ಪೊಲೀಸರಿಗೆ ಪ್ರೊಟೀನ್ ಕಿಟ್ ನೀಡಿದ್ದಾರೆ.

ಇಂದು(ಸೋಮವಾರ) ಪಟ್ಟಣದ ಶಾಸಕ ನಡಹಳ್ಳಿ ನಿವಾಸದಲ್ಲಿ ಎಸ್‌. ಪಾಟೀಲ್‌ ನಡಹಳ್ಳಿ ಅವರ ಪತ್ನಿ ಮಹಾದೇವಿ ಹಾಗೂ ಪುತ್ರ ಭರತಗೌಡ ಪಾಟೀಲ್ ಅವರು ಕೊರೋನಾ ಮಧ್ಯೆಯೂ ಕರ್ತವ್ಯದಲ್ಲಿ ತೊಡಗಿರುವ ಪೊಲೀಸರಿಗೆ ಪ್ರೊಟೀನ್ ಅಂಶವಿರುವ ಲಘು ಆಹಾರ‌ದ ಕಿಟ್‌ಗಳನ್ನ ನೀಡಿದ್ದಾರೆ.

"

ಕೋವಿಡ್ ನಿರ್ವಹಣೆಯಲ್ಲಿ ನಿರ್ಲಕ್ಷ್ಯತೋರಿದ ವಿಜಯಪುರ DHO ಗೆ ಕಡ್ಡಾಯ ರಜೆ

ಪ್ರೊಟೀನ್ ಅಂಶವಿರುವ ಲಘು ಆಹಾರ‌ದ ಕಿಟ್‌ನಲ್ಲಿ ಮೊಳಕೆ ಕಾಳು, ಕಿತ್ತಳೆ, ಬಾಳೆ, ಮೊಟ್ಟೆ, ಶುದ್ಧ ನೀರಿನ ಬಾಟಲ್ ಒಳಗೊಂಡಿರುತ್ತದೆ. ಶಾಸಕ ನಡಹಳ್ಳಿ ನಿವಾಸದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಪುಡ್ ಕಿಟ್ ಹಸ್ತಾಂತರ ಮಾಡಲಾಗಿದೆ. ಮುದ್ದೇಬಿಹಾಳ ಕ್ಷೇತ್ರದ ಕರ್ತವ್ಯದ ಮೇಲಿರುವ ಎಲ್ಲ ಪೊಲೀಸರಿಗೂ ಪ್ರೊಟೀನ್ ಪುಡ್ ಕಿಟ್‌ ವಿತರಣೆಯಾಗಲಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Latest Videos
Follow Us:
Download App:
  • android
  • ios