ಚಿತ್ರದುರ್ಗ (ಜ.16): ರಾಜ್ಯ ಸಚಿವ ಸಂಪುಟದ ನೂತನ ಸಚಿವ ಸಿ.ಪಿ.ಯೋಗೇಶ್ವರ್‌ ನನ್ನ ಬಳಿ ಯಾವುದೇ ಮನೆ, ಮಠ ಆಸ್ತಿ ಅಡವಿಟ್ಟು ಸಾಲ ಪಡೆದುಕೊಂಡಿಲ್ಲ ಎಂದು ನೂತನ ಸಚಿವ ಎಂ.ಟಿ.ಬಿ.ನಾಗರಾಜ್‌ ಹೇಳಿದರು. 

ಈ ಮೂಲಕ ಜಲ ಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಜತೆ ಮಾತನಾಡಿದ್ದು, ಯಾವ ಕಾರಣಕ್ಕೆ ಹೀಗೆ ಹೇಳುತ್ತೀರಿ ಎಂದು ಕೇಳಿದ್ದೇನೆ. ಸತ್ಯಾಸತ್ಯತೆ ಇದ್ದರೆ ಮಾತಾಡಿ ಎಂದು ಹೇಳಿರುವೆ ಎಂದು ತಿಳಿಸಿದರು.

ಯೋಗೇಶ್ವರ್‌ ಸಾಲ ಮಾಡಿ, ರಿಸ್ಕ್‌ ತೆಗೆದುಕೊಂಡವರು: ಜಾರಕಿಹೊಳಿ .. 

ಎಂಟಿಬಿ ನಾಗರಾಜ್ ಬಳಿ ಯೋಗೇಶ್ವರ್ ಸಾಲ ಮಾಡಿ ರಿಸ್ಕ್ ತೆಗೆದುಕೊಂಡರು ಎನ್ನುವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಎಂಟಿಬಿ ಪ್ರತಿಕ್ರಿಯೆ ನೀಡಿದ್ದಾರೆ.