Asianet Suvarna News Asianet Suvarna News

ಉತ್ತರ ಕರ್ನಾಟಕ ರೈಲ್ವೆ ಅಭಿವೃದ್ಧಿಗೆ ಸಂಸದರ ಧ್ವನಿ

ಕುಡಚಿ ರೈಲ್ವೆ ಮಾರ್ಗ ವಿದ್ಯುತ್‌ಕರಣಗೊಳಿಸುವುದು ಸೇರಿದಂತೆ ಗದಗ-ಯಲವಗಿ, ಗದಗ-ವಾಡಿ, ಧಾರವಾಡ-ಕಿತ್ತೂರ, ಹುಬ್ಬಳ್ಳಿ-ಅಂಕೋಲಾ, ಮುನಿರಾಬಾದ-ಮೆಹಬೂಬನಗರ ಸೇರಿದಂತೆ ಅನೇಕ ರೈಲು ಮಾರ್ಗಗಳ ಕಾಮಗಾರಿ ಕಳೆದ ದಶಕಗಳಿಂದ ಕುಂಟುತ್ತಾ ಸಾಗಿದ್ದು ಅವು ಎಲ್ಲಾ ಮಾರ್ಗಗಳ ಕಾಮಗಾರಿ ಚೂರುಕುಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಹೇಳಿದರು.

MPs Request to Union Minister for North Karnataka Railway Development grg
Author
First Published Aug 10, 2023, 8:57 PM IST

ಬಾಗಲಕೋಟೆ(ಆ.10): ಕುಡಚಿ-ಬಾಗಲಕೋಟೆ ರೈಲ್ವೆ ಮಾರ್ಗದ ಕಾಮಗಾರಿ ತ್ವರಿತಗೊಳಿಸಬೇಕೆಂದು ಒತ್ತಾಯಿಸಿ ಉತ್ತರ ಕರ್ನಾಟಕದ ಸಂಸದರ ಸಮ್ಮುಖದಲ್ಲಿ ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ಲೋಕಸಭೆಯಲ್ಲಿ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದರು.

ಸಚಿವಾಲಯದಲ್ಲಿ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ, ಚಿಕ್ಕೋಡಿ ಸಂಸದ ಅನ್ನಾಸಾಹೇಬ ಜೊಲ್ಲೆ, ಬಳ್ಳಾರಿ ಸಂಸದ ದೇವೇಂದ್ರಪ್ಪ, ಕೊಪ್ಪಳ ಸಂಸದ ಸಂಗಣ್ಣ ಕರಡಿ ಹಾಗೂ ಬೆಳಗಾವಿ ರಾಜ್ಯ ಸಭಾ ಸದಸ್ಯರಾದ ಈರಣ್ಣ ಕದಾಡಿ ಅವರ ಜೊತೆಯಲ್ಲಿ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕುತುಬುದಿನ್‌ ಖಾಜಿ ಸಮಗ್ರ ಉತ್ತರ ಕರ್ನಾಟಕದಲ್ಲಿ ನಡೆದಿರುವ ರೈಲು ಮಾರ್ಗಗಳ ಕಾಮಗಾರಿ ತ್ವರಿತಗೊಳಿಸಲು ಒತ್ತಾಯಿಸಿದರು.

ತಿಮ್ಮಾಪೂರಗೆ ನೂರಂದ್ರು ಗೊತ್ತಿಲ್ಲ..ಸಾವಿರ ಅಂದ್ರೂ ಗೊತ್ತಿಲ್ಲ: ಗೋವಿಂದ ಕಾರಜೋಳ

ಉತ್ತರ ಕರ್ನಾಟಕಕ್ಕೆ ಅಗತ್ಯ ರೈಲುಗಳ ಸೌಲಭ್ಯ ಕಲ್ಪಿಸುವಲ್ಲಿ ಶ್ರಮಿಸಬೇಕೆಂದು ಸಂಸದರಲ್ಲಿ ಮನವಿ ಮಾಡಿದ ಅವರು, ಕುಡಚಿ ರೈಲ್ವೆ ಮಾರ್ಗ ವಿದ್ಯುತ್‌ಕರಣಗೊಳಿಸುವುದು ಸೇರಿದಂತೆ ಗದಗ-ಯಲವಗಿ, ಗದಗ-ವಾಡಿ, ಧಾರವಾಡ-ಕಿತ್ತೂರ, ಹುಬ್ಬಳ್ಳಿ-ಅಂಕೋಲಾ, ಮುನಿರಾಬಾದ-ಮೆಹಬೂಬನಗರ ಸೇರಿದಂತೆ ಅನೇಕ ರೈಲು ಮಾರ್ಗಗಳ ಕಾಮಗಾರಿ ಕಳೆದ ದಶಕಗಳಿಂದ ಕುಂಟುತ್ತಾ ಸಾಗಿದ್ದು ಅವು ಎಲ್ಲಾ ಮಾರ್ಗಗಳ ಕಾಮಗಾರಿ ಚೂರುಕುಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಹೇಳಿದರು.

ಗದಗ-ಹುಟಗಿ, ಜೋಡಿ ಮಾರ್ಗದ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು ಹುಬ್ಬಳ್ಳಿ ವಲಯವು ಅಂದಾಜು 2000 ಕಿ.ಮೀ. ವ್ಯಾಪ್ತಿಯಲ್ಲಿ ಇರುವುದು ಪ್ರಯಾಣಿಕರ ಸೌಲಭ್ಯಕ್ಕಾಗಿ ಪ್ಲಾಟ ಫಾರ್ಮಗಳ ಸುಧಾರಣೆ, ನೈರ್ಮಲ್ಯ, ಶೌಚಗೃಹ ದೀಪಗಳ ಅಗತ್ಯ, ಆಸನಗಳು ಅಗತ್ಯವಿದ್ದ ನಿಲ್ದಾಣಗಳಲ್ಲಿ ಲಿಫ್‌್ಟಸೇರಿದಂತೆ ವಿಶ್ರಾಂತಿ ಗೃಹಗಳನ್ನು ನಿರ್ಮಿಸುವ ಸಲುವಾಗಿ ರೈಲ್ವೆ ಇಲಾಖೆ ಮೇಲೆ ತಾವು ಒತ್ತಡ ಹೇರಬೇಕೆಂದು ಒತ್ತಾಯಿಸಿದರು.

ಹುಬ್ಬಳ್ಳಿ-ನಿಜಾಮುದ್ದಿನ:

ಗದಗ-ಬಾಗಲಕೋಟೆ, ಸಪ್ತಾಹಿಕ ಇದ್ದು ವಾರದಲ್ಲಿ 2 ಸಲ ಸಂಚರಿಸುವಂತೆ ಮಾಡಬೇಕು. ವಿಜಯಪುರ-ತಿರುಪತಿ ಹೊಸ ರೈಲು ಪ್ರಾರಂಭಿಸಲು ಪ್ರಯತ್ನಿಸಬೇಕು. ವಿಜಯಪುರ-ಬಾಗಲಕೋಟೆ, ಗದಗ- ಹೊಸಪೇಟೆ, ಬಳ್ಳಾರಿ-ಗುಂಟಕಲ್ಲ ಮಾರ್ಗದಲ್ಲಿ ಹೊಸ ಪ್ಯಾಸೆಂಜರ್‌ ರೈಲು ಪ್ರಾರಂಭಿಸಲು ಪ್ರಯತ್ನಿಸಬೇಕು. ಉತ್ತರ ಕರ್ನಾಟಕ ಭಾಗದಲ್ಲಿ ಉತ್ತರ ಭಾರತ ಅಂದರೆ ರಾಜಸ್ಥಾನ, ಗುಜರಾತ, ಮಧ್ಯಪ್ರದೇಶದ ಉದ್ಯೋಗಿಗಳು, ಕಾರ್ಮಿಕರು ಹೆಚ್ಚಿನ ಪ್ರಮಾಣದಲ್ಲಿ ವಾಸಿಸುತ್ತಿರುವುದರಿಂದ ಹುಬ್ಬಳ್ಳಿಯಿಂದ ಗುಜರಾತಿನ ಭೂಜ ನಗರಕ್ಕೆ ತಲುಪುವ ಹೊಸ ರೈಲು, ಬೆಂಗಳೂರು-ಗಾಂಧಿಧಾಮ ರೈಲನ್ನು ಭೂಜವರೆಗೆ ವಿಸ್ತರಿಸಲು ರೈಲ್ವೆ ಇಲಾಖೆ ಮೇಲೆ ಒತ್ತಡ ತರಬೇಕೆಂದು ಸಮಿತಿ ಅಧ್ಯಕ್ಷ ಕುತುಬುದ್ದೀನ ಖಾಜಿ ಎಲ್ಲಾ ಸಂಸದರಲ್ಲಿ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶ್ರೀನಿವಾಸ ಬಳ್ಳಾರಿ ಗಣ್ಯರಾದ ಗಣಪತರಾವ ಹಜಾರೆ ಡಾ.ರವಿ ಜಮಖಂಡಿ ಮತ್ತಿತರಿದ್ದರು.

Follow Us:
Download App:
  • android
  • ios