ಮಂಡ್ಯ [ಆ.11]:  ಮಂಡ್ಯದ ಅಭಿವೃದ್ಧಿಗೆ ಸೂಕ್ತ ರೀತಿಯಲ್ಲಿ ಸ್ಪಂದನೆ ನೀಡುವುದಾಗಿ ಪ್ರಧಾನಿ ಹೇಳಿದ್ದಾರೆ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. 

ಎರಡು ತಿಂಗಳ ಬಳಿಕ ಮಂಡ್ಯಕ್ಕೆ ಭೇಟಿ ನೀಡಿದ ಸಂಸದೆ ಸುಮಲತಾ ಅಂಬರೀಶ್ ಕೆಆರ್ ಎಸ್ ಸೇಫ್ಟಿ ವಿಚಾರದ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದು, ಸಿಎಂ ಕರೆದ ಸಭೆಯಲ್ಲಿಯೂ ಈ ಬಗ್ಗೆ ಮಾತನಾಡಿದ್ದೇನೆ. ಈ ಬಗ್ಗೆ ಉತ್ತಮ ಸ್ಪಂದನೆ ಸಿಕ್ಕಿದ್ದಾಗಿ ಹೇಳಿದರು. 

ಮಂಡ್ಯ ಚುನಾವಣೆ ನಂತರ ನಿಖಿಲ್ ಬೆನ್ನುತಟ್ಟಿದ ಸುಮಲತಾ!

ಇನ್ನು ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಆದರೆ ಮಂಡ್ಯಕ್ಕೆ ಯಾವುದೇ ರೀತಿ ಸಮಸ್ಯೆ ಇಲ್ಲ. ಜಿಲ್ಲೆಯು ಸುರಕ್ಷಿತವಾಗಿದೆ ಎಂದರು. ಇನ್ನು ಕಾವೇರಿ ನೀರು ಹಂಚಿಕೆ ವಿಚಾರದ ಬಗ್ಗೆಯೂ ಪ್ರಸ್ತಾಪಿಸಿದ್ದು, ಕಾವೇರಿ ಟ್ರಿಬ್ಯುನಲ್ ನಲ್ಲಿಯೇ ತೀರ್ಮಾನವಾಗಲಿದೆ. ಇದರಲ್ಲಿ ನಮಗೆ ನ್ಯಾಯ ಸಿಗುವ ಭರವಸೆ ಇದೆ. 

ಕುರುಕ್ಷೇತ್ರ ನೋಡಿ ಅಂಬರೀಶ್ ನೆನೆದು ಭಾವುಕರಾದ ಸುಮಲತಾ

ಮುಂದಿನ ಮಂಗಳವಾರದಿಂದ ಸೆಪ್ಟೆಂಬರ್ ವರೆಗೆ ಜಿಲ್ಲಾ ಪ್ರವಾಸ ನಡೆಸಲಿದ್ದೇನೆ. ಅಧಿಕಾರಿಗಳು, ಸಾರ್ವಜನಿಕರ ಜೊತೆಗೆ ಚರ್ಚೆ ಸಭೆ ನಡೆಸಲಾಗುವುದು. ಸಮಾವೇಶದ ಬದಲಾಗಿ ಜನರ ಬಳಿಗೆ ಹೋಗಿ ಸಮಸ್ಯೆ ಪರಿಹರಿಸುವ ಯತ್ನ ಮಾಡುತ್ತೇವೆ ಎಂದರು. 

ಇನ್ನು ಹಲವು ದಿನಗಳಿಂದ ಮಂಡ್ಯ ಜಿಲ್ಲೆಗೆ ಹಲವು ದಿನಗಳಿಂದ ಸುಮಲತಾ ಅಂಬರಿಶ್ ಭೇಟಿ ನೀಡದ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಸಮಲತಾ ಎಲ್ಲಿದ್ಯಮ್ಮಾ ಎಂದು ಟ್ರೋಲ್ ಆಗಿದ್ದು, ಈ ವಿಚಾರವನ್ನು ಯಾವುದೇ ಕಾರಣಕ್ಕೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಸಂಸತ್ ಅಧಿವೇಶನ ಹಿನ್ನೆಲೆ ದಿಲ್ಲಿಗೆ ತೆರಳಿದ್ದು, ಅಲ್ಲಿನ ನಾಯಕರ ಭೇಟಿಯಾಗಿ  ಚರ್ಚೆ ನಡೆಸಲಾಗಿದೆ ಎಂದರು.