ದರ್ಶನ್ ಕುರುಕ್ಷೇತ್ರ ಸಿನಿಮಾ ರಿಲೀಸ್ ಗೂ ಮುನ್ನ ಮಂತ್ರಿಮಾಲ್ ನಲ್ಲಿ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ನಟ ದರ್ಶನ್ , ಸುಮಲತಾ ಅಂಬರೀಶ್ ಹಾಗೂ ನಿರ್ಮಾಪಕ ‌ಮುನಿರತ್ನ ಸೇರಿದಂತೆ ಹಲವು ಗಣ್ಯರು ಕುರುಕ್ಷೇತ್ರ ವೀಕ್ಷಣೆ ಮಾಡಿದ್ದಾರೆ.  

ದರ್ಶನ್ ಇಲ್ಲದೇ ಕುರುಕ್ಷೇತ್ರವೇ ಇಲ್ಲ; ಮುನಿರತ್ನ ಮಾತುಗಳಿವು

ಕುರುಕ್ಷೇತ್ರ ವೀಕ್ಷಿಸಿದ ಸುಮಲತಾ ಅಂಬರೀಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದರ್ಶನ್ ಗೆ ಸಂಗೋಳ್ಳಿ ರಾಯಣ್ಣ ಸಿನಿಮಾ ನಂತರ ಇದು ಒಂದೊಳ್ಳೆ ಮೈಲ್ ಸ್ಟೋನ್ ಸಿನಿಮಾವಾಗಿದೆ .ದರ್ಶನ್ ಅಂದ್ರೆ ದುರ್ಯೋಧನ ,ದುರ್ಯೋಧನ ಅಂದರೆ ದರ್ಶನ್ ಅನ್ನುವಷ್ಟು ಪರ್ಫೆಕ್ಟ್ ಆಗಿ ನಟಿಸಿದ್ದಾರೆ .ಗೆಟಪ್, ನಡಿಗೆ, ಮಾತು ಎಲ್ಲಾ ಸಖತ್ ಅಗಿ‌ ಸೆಟ್ ಆಗುತ್ತೆ. ಕನ್ನಡಿಗರು ನೆನಪಿಟ್ಟುಕೊಳ್ಳುವಂತಹ  ಸಿನಿಮಾ ಇದಾಗಿದೆ ಎಂದು ಶ್ಲಾಘಿಸಿದ್ದಾರೆ. 

 

ದುರ್ಯೋಧನನ ಮೈಮೇಲಿತ್ತು ಕೆಜಿ ಭಾರದ ಕಾಸ್ಟ್ಯೂಮ್; ಇಲ್ಲಿದೆ ಫೋಟೋಗಳು

ನನಗೆ ಇದು ಒಂದು ಭಾವನಾತ್ಮಕ ಸಿನಿಮಾ. ಅಂಬರೀಶ್ ಅವರನ್ನ ಕೊನೆಯ ಬಾರಿಗೆ ನೋಡುವಂತಹ ಅವಕಾಶವನ್ನ ನಿರ್ಮಾಪಕ ಮುನಿರತ್ನ ಮಾಡಿಕೊಟ್ಟಿದ್ದಾರೆ. ಅರ್ಜುನ್ ಸರ್ಜಾ ಹಾಗೂ ರವಿಚಂದ್ರನ್, ನಿಖಿಲ್ ಕುಮಾರಸ್ವಾಮಿ ಹಾರ್ಟ್ ಟಚಿಂಗ್ ಫರ್ಪಾಮೆನ್ಸ್ ಚಿತ್ರದಲ್ಲಿದೆ ಎಂದಿದ್ದಾರೆ.