ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಸಂಸದ ಸಂಗಣ್ಣ ಕರಡಿ ಪುತ್ರನಿಂದ ನೆರವಿನ ಸಹಾಯಸ್ತ

ಅನಾರೋಗ್ಯ ಪೀಡಿತರಾಗಿ ಸದ್ಯದ ಪರಿಸ್ಥಿತಿಯಲ್ಲಿ ಔಷಧ ಖರೀದಿಸಲು ಸಾಧ್ಯವಾಗದ ಸಂಕಷ್ಟಸ್ಥಿತಿಯಲ್ಲಿದ್ದ ಕುಟುಂಬಕ್ಕೆ ಸಂಸದ ಸಂಗಣ್ಣ ಕರಡಿ ಅವರ ಪುತ್ರ, ಜಿಪಂ ಸದಸ್ಯ ಗವಿಸಿದ್ದಪ್ಪ ಕರಡಿ ನೆರವು|  ಮನವಿಗೆ ನಾನು ಸೇರಿದಂತೆ ಇತರರು ಸಹಾಯದ ಹಸ್ತವನ್ನು ಚಾಚಿದ್ದು, ಇನ್ನೂ ಕೆಲ​ ದಾನಿಗಳು ಮುಂದೆ ಬಂದಿದ್ದಾರೆ ಎಂದ  ಗವಿಸಿದ್ದಪ್ಪ ಕರಡಿ|

MP Sanganna Karadi Son Gavisiddappa Karadi Help to Needy Family in Koppal

ಕೊಪ್ಪಳ(ಮೇ.13): ಪತಿ ಮತ್ತು ಮಗು ಅನಾರೋಗ್ಯ ಪೀಡಿತರಾಗಿ ಸದ್ಯದ ಪರಿಸ್ಥಿತಿಯಲ್ಲಿ ಔಷಧ ಖರೀದಿಸಲು ಸಾಧ್ಯವಾಗದ ಸಂಕಷ್ಟಸ್ಥಿತಿಯಲ್ಲಿದ್ದ ಕುಟುಂಬಕ್ಕೆ ಸಂಸದ ಸಂಗಣ್ಣ ಕರಡಿ ಅವರ ಪುತ್ರ, ಜಿಪಂ ಸದಸ್ಯ ಗವಿಸಿದ್ದಪ್ಪ ಕರಡಿ ಸಕಾಲಕ್ಕೆ ನೆರವಿನ ಸಹಾಯ ಹಸ್ತ ಚಾಚಿದ್ದಾರೆ.

ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ವೆಂಕಟೇಶ ಆರೇರ್‌ ಅವರ ಕುಟುಂಬದ ಸ್ಥಿತಿ ಅತ್ಯಂತ ಕರು​ಣಾ​ಜ​ನ​ಕ​ವಾ​ಗಿ​ದ್ದು, ಸದ್ಯದ ಪರಿಸ್ಥಿತಿಯಲ್ಲಿ ಅನಾರೋಗ್ಯ ಪೀಡಿತ ಪತಿ ಮತ್ತು ಮಗುವಿಗೆ ಔಷಧ ಕೊಡಿಸಲು ಸಾಧ್ಯವಾಗದ ಸ್ಥಿತಿಯ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿ ನೋಡಿ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಸಂಸದರ ಪುತ್ರ ಔಷಧ ಮತ್ತು ದಿನಸಿ ಕಿಟ್‌ಗಳನ್ನು ನೀಡಿ ಮಾನ​ವೀ​ಯತೆ ಮೆರೆ​ದಿ​ದ್ದಾ​ರೆ.

ಲಾಕ್‌ಡೌನ್‌ ಎಫೆಕ್ಟ್‌: ಹೊಲದಲ್ಲಿ ರಂಟೆ ಹೊಡೆದ ಶಾಸ​ಕ ಬಸವರಾಜ ದಡೇಸ್ಗೂರು..!

ಕೃಷಿ ಮಾಡುತ್ತಿದ್ದ ವೆಂಕಟೇಶ ಎರಡು ವರ್ಷಗಳ ಹಿಂದೆ ಪಾಶ್ರ್ವವಾಯುವಿಗೆ ತುತ್ತಾಗಿದ್ದರು. ಅವರಿಗಿರುವ ಮೂವರು ಪುಟ್ಟಹೆಣ್ಣು ಮಕ್ಕಳ ಪೈಕಿ ಒಂದು ಮಗುವಿಗೆ ಅನಾರೋಗ್ಯ ಕಾಡುತ್ತಿದೆ. ಲಾಕ್ಡೌನ್‌ ಹಿನ್ನೆಲೆಯಲ್ಲಿ ಶಾಲೆ ಮುಚ್ಚಿದ ಪರಿಣಾಮ ಅಲ್ಲಿಯೇ ಆಯಾ ಕೆಲಸ ಮಾಡಿಕೊಂಡು ಕುಟುಂಬ ಪೋಷಿಸುತ್ತಿದ್ದ ವೆಂಕಟೇಶ ಪತ್ನಿ ರೂಪಾ ಅವರಿಗೂ ದುಡಿಮೆ ಇಲ್ಲದಂತಾಗಿತ್ತು.

ವೆಂಕಟೇಶ ಅವರ ಪತ್ನಿ ರೂಪಾ ಔಷಧೋಪಚಾರಕ್ಕಾಗಿ ನೆರವು ನೀಡುವಂತೆ ಮಾಧ್ಯಮಗಳಲ್ಲಿ ಮಾಡಿಕೊಂಡ ಮನವಿಗೆ ತಕ್ಷಣ ಸ್ಪಂದಿಸಿರುವ ಅಮರೇಶ ಕರಡಿ ಅವರು ಔಷಧ ಹಾಗೂ ಆಹಾರ ಸಾಮಗ್ರಿ ಕಿಟ್‌ ನೀಡಿದ್ದಾ​ರೆ.

ಅನಾರೋಗ್ಯಕ್ಕೆ ಒಳಗಾಗಿರುವ ಪತಿಗೆ ಔಷಧ, ಮತ್ತು ದಿನಸಿ ಖರೀದಿಗೆ ದುಡ್ಡಿಲ್ಲ, ಯಾರಾದರೂ ಔಷಧ ಕೊಡಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ರೂಪಾ ಬೇಡಿಕೊಂಡಿದ್ದರು. ಅವರ ಮನವಿಗೆ ನಾನು ಸೇರಿದಂತೆ ಇತರರು ಸಹಾಯದ ಹಸ್ತವನ್ನು ಚಾಚಿದ್ದು, ಇನ್ನೂ ಕೆಲ​ ದಾನಿಗಳು ಮುಂದೆ ಬಂದಿದ್ದಾರೆ ಎಂದು ಕೊಪ್ಪಳ ಜಿಪಂ ಸದಸ್ಯ ಗವಿಸಿದ್ದಪ್ಪ ಕರಡಿ ಹೇಳಿದ್ದಾರೆ.  
 

Latest Videos
Follow Us:
Download App:
  • android
  • ios