ಕ್ಷೇತ್ರದ ಜನರು ಕಣ್ಣೀರು ಹಾಕುವುದು ಇಷ್ಟವಿಲ್ಲ; ಎಂ.ಪಿ.ರೇಣುಕಾಚಾರ್ಯ
- ಕ್ಷೇತ್ರದ ಜನರು ಕಣ್ಣೀರು ಹಾಕುವುದು ಇಷ್ಟವಿಲ್ಲ
- ಮನೆಹಾನಿ ಪರಿಹಾರದ ವಿಚಾರ ನಾಲ್ಕನೇ ಪರಿಹಾರ ವಿತರಣೆ ಸಮಾರಂಭದಲ್ಲಿ ಶಾಸಕ ರೇಣುಕಾಚಾರ್ಯ
ಹೊನ್ನಾಳಿ (ಅ.11) : ಅವಳಿ ತಾಲೂಕಿನಲ್ಲಿ ಕಳೆದ 5-6 ತಿಂಗಳಿನಿಂದ ನಿರಂತರ ಮಳೆ ಸುರಿಯುತ್ತಿದ್ದು ಸಾಕಷ್ಟುಮನೆಹಾನಿ ಹಾಗೂ ಬೆಳೆಹಾನಿ ಸಂಭವಿಸಿದೆ. ಮನೆಹಾನಿ ಪರಿಹಾರದ ವಿಚಾರವಾಗಿ ಇದು ನಾಲ್ಕನೇ ಪರಿಹಾರ ವಿತರಣಾ ಸಮಾರಂಭ. ಹೊನ್ನಾಳಿ ತಾಲೂಕಿನ 215, ನ್ಯಾಮತಿ ತಾಲೂಕಿನ 108 ಫಲಾನುಭವಿಗಳು ಸೇರಿ ಒಟ್ಟು 323ಜನರಿಗೆ ಸೋಮವಾರ ಪರಿಹಾರ ಆದೇಶ ಪತ್ರಗಳ ವಿತರಿಸಲಾಗುತ್ತಿದೆ. ಇದರಿಂದ ಒಟ್ಟು 1983 ಸಂತ್ರಸ್ತರಿಗೆ ಆದೇಶ ಪತ್ರಗಳನ್ನು ವಿತರಿಸಿದ್ದೇನೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಶಾಸಕ ರೇಣುಕಾಚಾರ್ಯರದ್ದು ಆಧಾರ ರಹಿತ ಆರೋಪ; ಎಂ.ಎಲ್.ಸುರೇಶ್
ಗುರುಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆದೇಶ ಪತ್ರ ವಿತರಣೆ ಸಮಾರಂಭದಲ್ಲಿ ಮಾತನಾಡಿ ಮನೆಹಾನಿ ಸಂಭವಿಸಿದಾಗ ನಾನೊಬ್ಬನೇ ಭೇಟಿ ನೀಡಿ ಪರಿಶೀಲನೆ ಮಾಡಿಲ್ಲ, ಆಯಾ ತಾಲೂಕಿನ ಗ್ರಾಮಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರು, ತಹಸೀಲ್ದಾರರು, ಎಂಜಿನಿಯರ್‌ಗಳು ಭೇಟಿ ನೀಡಿ ಪರಿಶೀಲನೆ ಮಾಡಿ ವರದಿ ನೀಡಿದ್ದಾರೆ. ಎರಡು ಬಾರಿ ಅರ್ಜಿ ಸಲ್ಲಿಸುವ ದಿನಾಂಕ ಮುಗಿದಿದ್ದರೂ ಸಿಎಂ ಗೆ ಪರಿಸ್ಥಿತಿಯ ಮನವರಿಕೆ ಮಾಡಿ ಮತ್ತೊಮ್ಮೆ ದಿನಾಂಕ ಮುಂದೂಡಿಸಿದ್ದೇನೆ. ಏಕೆಂದರೆ ನನ್ನ ಕ್ಷೇತ್ರದ ಜನರು ಮನೆ ಕಳೆದುಕೊಂಡು ಕಣ್ಣೀರು ಹಾಕುವುದು ನನಗೆ ಇಷ್ಟವಿಲ್ಲ ಎಂದರು.
ನಾನು ಬೀದಿ ಬದಿಯಲ್ಲಿ ಬೋರ್ ವೆಲ್ ಲಾರಿಯ ಕೆಳಗೆ ನನ್ನ ಸಹೋದರರೊಂದಿಗೆ ಮಲಗಿ ದುಡಿಮೆ ಮಾಡಿ ಬಂದ ಕಮಿಷನ್ ಹಣದಿಂದ ನಿವೇಶನ ಖರೀದಿಸಿ, ಈಗ ವಾಸಿಸುತ್ತಿರುವ ಮನೆ ಕಟ್ಟಿದ್ದೇನೆ, ಜಮೀನು, ತೋಟ ಖರೀದಿಸಿದ್ದೇನೆ, ನಾನು ಬೆವರು ಬಸಿದಿದ್ದೇನೆ, ಭ್ರಷ್ಟಾಚಾರ ಮಾಡಿ ಆಸ್ತಿ ಮಾಡಿಲ್ಲ, ಮನೆ ಕಟ್ಟುತ್ತಿಲ್ಲ ಎಂದು ವಿಪಕ್ಷಗಳ ಟೀಕೆಗೆ ಉತ್ತರಿಸಿದರು.
ಆಹಾರ ನಿಗಮದ ಉಪ ನಿರ್ದೇಶಕಿ ನಜ್ಮಾ ಮಾತನಾಡಿ, ಮನೆಹಾನಿ ಸಂತ್ರಸ್ಥರಿಗೆ ಇಷ್ಟೊಂದು ತ್ವರಿತವಾಗಿ ಪರಿಹರ ತಂದುಕೊಡುತ್ತಿರುವ ಶಾಸಕ ರೇಣುಕಾಚಾರ್ಯರ ಕಾರ್ಯವನ್ನು ಮೆಚ್ಚಲೇಬೇಕು ಎಂದು ಹೇಳಿದರು. ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿಯೊಬ್ಬರಿಗೂ 5 ಕೆ.ಜಿ. ಅಕ್ಕಿ ವಿತರಣೆ ಅವಧಿ ಮುಗಿದಿತ್ತು, ಆದರೆ ಕೇಂದ್ರ ಸರ್ಕಾರ ಮತ್ತೇ ಅದನ್ನು ಡಿಸೆಂಬರ್ ವರೆಗೂ ಮುಂದುವರೆಸಲು ಆದೇಶ ಮಾಡಿದೆ ಎಂದರು. ತಾ.ಪಂ. ಇ.ಒ. ರಾಮಾಭೋವಿ, ಹೊನ್ನಾಳಿ ತಹಸೀಲ್ದಾರ್ ಎಚ್.ಜೆ. ರಶ್ಮಿ, ನ್ಯಾಮತಿ ತಹಸೀಲ್ದಾರ್ ರೇಣುಕಾ, ಅವಳಿ ತಾಲೂಕುಗಳ ರಾಜಸ್ವ ನಿರೀಕ್ಷಕರು, ಗ್ರಾಮಲೆಕ್ಕಾಧಿಕಾರಿಗಳು, ಹಾಗೂ 323 ಫಲಾನುಭಗಳು ಸೇರಿದಂತೆ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಚಿವ ಸ್ಥಾನ ಸಿಗದ ಬಗ್ಗೆ ರೇಣುಕಾಚಾರ್ಯ ಅಸಮಾಧಾನ
ಋುಣ ತೀರಿಸಬೇಕಾದ್ದು ನನ್ನ ಕರ್ತವ್ಯ
ಅವಳಿ ತಾಲೂಕಿನ ತಹಸೀಲ್ದಾರ್‌ಗಳು ನನ್ನ ಕಾರ್ಯ ಒತ್ತಡದಿಂದ ಕಣ್ಣೀರು ಹಾಕುತ್ತಿದ್ದಾರೆ. ನನ್ನ ಕ್ಷೇತ್ರದ ಜನರಿಗೆ ಅನ್ಯಾಯವಾಗುತ್ತಿದೆ ಎಂದು ನಾನೂ ಕಣ್ಣೀರು ಹಾಕಿದ್ದೇನೆ. ಸಾಮಾನ್ಯ ಶಿಕ್ಷಕನ ಮಗನಾದ ನನಗೆ ಮೂರು ಬಾರಿ ಗೆಲ್ಲಿಸಿ ಅಧಿಕಾರ ಕೊಟ್ಟಿದ್ದೀರಿ, ನಿಮ್ಮ ಋುಣ ನನ್ನ ಮೇಲಿದೆ. ಆ ಋುಣ ತೀರಿಸಬೇಕಾದ್ದು ನನ್ನ ಕರ್ತವ್ಯ ಎಂದು ರೇಣುಕಾಚಾರ್ಯ ಭಾವುಕರಾಗಿ ನುಡಿದರು.