ಮೈಸೂರು(ಫೆ.18): ಸಂಸದ ಪ್ರತಾಪ್ ಸಿಂಹ ಮಾಜಿ ಸಿಎಂ ಸಿದ್ದರಾಮಯ್ಯ ಅವ್ರನ್ನು ಸಾಹೇಬ್ರೇ ಎಂದು ಹೊಗಳಿದ್ದಾರೆ. ಸಿದ್ದರಾಮಯ್ಯ ಅವರನ್ನು ಹೃತ್ಪೂರ್ವಕವಾಗಿ ಪ್ರತಾಪ್ ಸಿಂಹ ಹೊಗಳಿದ್ದಾರೆ.

ಸಿದ್ದರಾಮಯ್ಯರನ್ನ ಹೊಗಳಿದ ಪ್ರತಾಪ್‌‌ಸಿಂಹ ಫೇಸ್‌ಬುಕ್  ಹಾಗೂ ಟ್ವಿಟರ್‌ನಲ್ಲಿ ಸಿದ್ದು ಪೋಸ್ಟ್ ಮಾಡಿದ್ದಾರೆ. ಮೈಸೂರಿನ ಜಯದೇವ ಆಸ್ಪತ್ರೆ ನಿರ್ಮಾಣ ಮಾಡಿರುವ ಬಗ್ಗೆ ಸಿದ್ದರಾಮಯ್ಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಪ್ರತಾಪ್‌ಸಿಂಹ ಸಿದ್ದರಾಮಯ್ಯರನ್ನ ಸಾಹೇಬ್ರು ಎಂದು ಉಲ್ಲೇಖಿಸಿದ್ದಾರೆ.

ಆತ್ಮಿಯರನ್ನ ನೋಡಲು ಜಯದೇವ ಆಸ್ಪತ್ರೆಗೆ ಭೇಟಿ ನೀಡಿದ್ದ ಪ್ರತಾಪ್‌ಸಿಂಹ ಆಸ್ಪತ್ರೆಯ ಅತ್ಯಾಧುನಿಕ ವ್ಯವಸ್ಥೆ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ಇಂತಹ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಕಾರಣರಾದ ಸಿದ್ದರಾಮಯ್ಯರಿಗೆ ಧನ್ಯವಾದ ಎಂದ ಪೋಸ್ಟ್ ಮಾಡಿದ್ದಾರೆ. ಸಿದ್ದು ಜೊತೆ ಶಾಸಕ ವಾಸು,ಜಯದೇವ ಆಸ್ಪತ್ರೆ ನಿರ್ದೇಶ ಡಾ.ಮಂಜುನಾಥ್, ಡಾ.ಸದಾನಂದ‌ರಿಗೂ ಧನ್ಯವಾದ ಎಂದು ಪೋಸ್ಟ್ ಮಾಡಿದ್ದಾರೆ.