ಹಾಸನ(ಆ.13): ಅತೀ ಮಳೆ ಪರಿಣಾಮ ಕಾವೇರಿ ನದಿ ದಂಡೆಯಲ್ಲಿ ಮನೆ ಕಳೆದುಕೊಂಡವರಿಗೆ ತಂಬಾಕು ಹರಾಜು ಮಾರುಕಟ್ಟೆ ಹತ್ತಿರವಿರುವ ಸುಬ್ರಹ್ಮಣ್ಯ ನಗರದಲ್ಲಿರುವ 6 ಎಕರೆ ಪ್ರದೇಶದಲ್ಲಿ ನಿವೇಶನ ಮತ್ತು ಮನೆ ನಿರ್ಮಿಸಿಕೊಡಲಾಗುವುದು ಎಂದು ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದರು.

ರಾಮನಾಥಪುರ ಶ್ರೀಬಸವೇಶ್ವರ ವೃತ್ತದಲ್ಲಿರುವ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಭಾನುವಾರ ಸಂಜೆ ನಿರಾಶ್ರಿತರನ್ನು ಭೇಟಿ ಮಾಡಿ, ಬಳಿಕ ಮಾತನಾಡಿದ ಅವರು, ಈಗಾಗಲೇ ಸರ್ಕಾರದಿಂದ ಶಾಸಕ ರಾಮಸ್ವಾಮಿ ಈ ಹಿಂದೆಯೇ ನಿವೇಶನ ರಹಿತರಿಗೆ ನಿವೇಶನ ನೀಡಲು 6 ಎಕರೆ ಪ್ರದೇಶವನ್ನು ಕಾಯ್ದಿರಿಸಿದ್ದಾರೆ. ನಮ್ಮ ಮೊದಲ ಅದ್ಯತೆ ಜೀವ ಉಳಿಸಿಕೋಳ್ಳುವುದೇ ಅಗಿರಬೇಕು. ಜೀವ ಉಳಿದರೆ ಆ ಮೇಲೆ ಉಳಿದೆಲ್ಲ ನೋಡಿಕೊಳ್ಳಬಹುದು ಎಂದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ಕಾವೇರಿ ನದಿ ದಂಡೆಯಲ್ಲಿರುವ ಈಗಿರುವ ಜಾಗವನ್ನು ಸರ್ಕಾರಕ್ಕೆ ಬರೆದುಕೊಟ್ಟರೆ ಪಂಚಾಯ್ತಿಯಿಂದ ನಿವೇಶನ ಮತ್ತು ಮನೆ ನಿರ್ಮಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನಿಸಲಾಗುವುದು. ಕಳೆದ ವರ್ಷವೇ ನಾನು ನಿಮಗೆ ಅನೇಕ ಬಾರಿ ಮನವಿ ಮಾಡಿದ್ದೇನೆ ಎಂದರು. ನಿರಾಶ್ರಿತರು ಮನಸ್ಸು ಮಾಡಿ ಈ ನಿಮ್ಮ-ನಿಮ್ಮ ಈ ಸ್ಥಳವನ್ನು ಗ್ರಾಪಂಗೆ ಬಿಟ್ಟು ಕೊಟ್ಟರೆ ನಾವು ಸುಬ್ರಹ್ಮಣ್ಯ ನಗರದಲ್ಲಿ ಮನೆ ನಿರ್ಮಿಸಿಕೊಡುತ್ತೇವೆ ಎಂದು ಭರವಸೆ ನೀಡಿದರು.

ಪ್ರದೇಶದಲ್ಲಿ ನಿರವ ಮೌನ:

ಕಾವೇರಿ ನದಿ ಸ್ವಚ್ಛತಾ ಅಂದೋಲನಾ ಸಮಿತಿ ಖಜಾಂಚಿ ರಘು ಮಾತನಾಡಿ, ಕಾವೇರಿ ನದಿ ಜಲ ಪ್ರಳಯಕ್ಕೆ ತುತ್ತಾದ ಪ್ರವಾಹ ಪೀಡಿತ ಸ್ಥಳ ನೀರಿನಲ್ಲಿ ಮುಳುಗಡೆಯಾಗಿದ್ದು, ಇಲ್ಲಿಯ ಜನವಸತಿ ಪ್ರದೇಶದಲ್ಲಿ ನಿರವ ಮೌನ ಮನೆಮಾಡಿದೆ. ನೀರು ನುಗ್ಗಿದ್ದ ಬಹಳಷ್ಟುಮನೆಗಳು ಮುರಿದು ಬಿದ್ದು, ಇನ್ನಷ್ಟುಮನೆಗಳ ಗೋಡೆ ಬಿರುಕು ಬಿಟ್ಟು ಶಿಥಿಲಗೊಂಡಿವೆ.

ಶಿವಮೊಗ್ಗ: ನೆರೆ ಪರಿಹಾರ ಸ್ವೀಕಾರ ಕೇಂದ್ರ ಆರಂಭ, ನೀವೂ ನೆರವಾಗಬಹುದು

ನಿರಾಶ್ರಿತರು ನೆಲೆ ಇಲ್ಲದಾಗಿ ಮನೆಗಳತ್ತಾ ತೆರಳಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯ ಕಾವೇರಿ ನದಿ ಪ್ರವಾಹದಿಂದ ಇಲ್ಲಿಯ ಐ.ಬಿ. ಸರ್ಕಲ್‌ ಮತ್ತು ರಾಮೇಶ್ವರ ದೇವಸ್ಥಾನದ ಮಧ್ಯೆ ಇರುವ ಸುಮಾರು 50ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದೆ ಎಂದರು.