ಮಂಗಳೂರು(ಸೆ.11): ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಏನನ್ನೂ ಮಾತನಾಡದೆ ಮೌನಕ್ಕೆ ಶರಣಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮೂಲ್ಕಿಯ ಬಪ್ಪನಾಡು ದೇವಳಲ್ಲಿ ಮಾಧ್ಯಮದವರೊಡನೆ ರಾಜಕೀಯದ ಬಗ್ಗೆ ಏನನ್ನೂ ಮಾತನಾಡಲು ನಿರಾಕರಿಸಿ ಮೌನಕ್ಕೆ ಶರಣಾದರು.

 ನೂತನವಾಗಿ ಆಯ್ಕೆಯಾದ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್‌ ಕುಮಾರ್‌ ಕಟೀಲು ಹಳೆಯಂಗಡಿ ಹಾಗೂ ಮೂಲ್ಕಿಯಲ್ಲಿ ಕಾರ‍್ಯಕರ್ತರನ್ನು ಭೇಟಿಯಾದರು.

ಬೆಳಗ್ಗೆ ಉಡುಪಿ ಜಿಲ್ಲೆಗೆ ತೆರಳುವ ತರಾತುರಿಯಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಸಂಸದರಾಗಿರುವ ನಳಿನ್‌ ಕುಮಾರ್‌ ಕಟೀಲು ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ‍್ಯಕರ್ತರನ್ನು ಭೇಟಿಯಾದರು.

ಸೀಟ್‌ ಬೆಲ್ಟ್ ಧರಿಸದಿದ್ರೂ ಸಂಸದರ ಕಾರ್ ಚಾಲಕನಿಗೆ ದಂಡವಿಲ್ಲ..!

ಬಳಿಕ ಉಡುಪಿ ಜಿಲ್ಲೆಗೆ ತೆರಳಿ ಸಂಜೆ ವಾಪಸಾಗುವಾಗ ಮೂಲ್ಕಿಯ ಬಪ್ಪನಾಡು ದೇವಸ್ಥಾನಕ್ಕೆ ಹಾಗೂ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಬಪ್ಪನಾಡು ದೇವಳಲ್ಲಿ ಮಾಧ್ಯಮದವರೊಡನೆ ರಾಜಕೀಯದ ಬಗ್ಗೆ ಏನನ್ನೂ ಮಾತನಾಡಲು ನಿರಾಕರಿಸಿ ಮೌನಕ್ಕೆ ಶರಣಾದರು.

ಮಹಿಳಾ ವೈದಿಕರನ್ನು ಅಣಿಗೊಳಿಸುವ ವಿನೂತನ ಪ್ರಯೋಗ..!