ಮಂಗಳೂರು(ಸೆ.11):  ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ 2000ನೇ ಇಸವಿಯಿಂದ ವೇದ ಶಿಬಿರಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು ಈ ಶಿಬಿರಗಳಲ್ಲಿ ವೇದಾಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಸರಣಿ ಶಿವಪೂಜಾ ಅಭಿಯಾನವನ್ನು ಆಯೋಜಿಸಲಾಗುತ್ತಿದೆ.

ಈಗಾಗಲೇ 418 ಶಿವಪೂಜೆಗಳು ಯಶಸ್ವಿಯಾಗಿ ಸಂಪನ್ನಗೊಂಡಿವೆ. ಈ ಬಾರಿಯ 419ನೇ ಶಿವಪೂಜೆಯು ಸೆ.15ರಂದು ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ ಕೊಡ್ಯಡ್ಕದ ‘ಶ್ರೀಮಾತಾ’ ಉದಯಶಂಕರ ಭಟ್‌ ಅವರ ನಿವಾಸದಲ್ಲಿ ನಡೆಯಲಿದೆ.

ಮಹಿಳಾ ವೈದಿಕರನ್ನು ಅಣಿಗೊಳಿಸಲು ವಿನೂತನ ಪ್ರಯೋಗ:

ಪ್ರಸ್ತುತ ಕಾಲಘಟ್ಟದಲ್ಲಿ ಪುಟ್ಟಬಾಲೆಯರಿಗೆ ವೇದಾಧ್ಯಯನ ಮಾಡಿಸಿ ಮಹಿಳಾ ವೈದಿಕರನ್ನು ಹುಟ್ಟು ಹಾಕುವ ವಿನೂತನ ಪ್ರಯೋಗಕ್ಕೆ ಸುಳ್ಯದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ಮುಂದಡಿಯಿಟ್ಟಿದೆ. ಪ್ರತಿಷ್ಠಾನದ ಇಚ್ಛೆಗೆ ಪೂರಕವಾಗಿ ಕೇರಳದ ಗಡಿಭಾಗದ ಅಡೂರಿನ ಕು. ಅಸೀಮಾ ಅಗ್ನಿಹೋತ್ರಿ ಎಂಬ ಪುಟ್ಟಬಾಲಕಿ ಪ್ರತಿಷ್ಠಾನದ ಮೊದಲ ವೇದ ವಿದ್ಯಾರ್ಥಿನಿಯಾಗಿ ವೇದಕಲಿಕೆಗೆ ಬಂದಿದ್ದು, ಇದೀಗ ಆಕೆ ಮೂರು ವರ್ಷದ ವೇದಾಧ್ಯಯನವನ್ನು ಪೂರ್ತಿಗೊಳಿಸಿದ್ದಾಳೆ.

'ಮಂಗಳೂರಿನ ಫ್ಲೈಓವರ್ ನೋಡಿದ್ರೆ ನಳಿನ್ ಕೆಲಸ ಗೊತ್ತಾಗುತ್ತೆ'..!

ಮಾತ್ರವಲ್ಲದೆ ಶ್ರೀ ಕೇಶವ ಕೃಪಾದ ಸಂಪ್ರದಾಯದಂತೆ ಪ್ರಾಯೋಗಿಕ ಶಿವಪೂಜೆಯೊಂದರ ಪ್ರಧಾನ ಪೌರೋಹಿತ್ಯವನ್ನು ವಹಿಸಿಕೊಂಡು ಕೇಶವಕೃಪಾದ ಮೊದಲ ಮಹಿಳಾ ವೈದಿಕಳಾಗಿಯೂ ಗುರುತಿಸಿಕೊಂಡಿದ್ದಾಳೆ.

ಮಂಗಳೂರು: ಪೊಲೀಸ್ ಠಾಣೆಯಲ್ಲಿ ಸೀಮಂತ ಸಂಭ್ರಮ..!