ಲಾಕ್‌ಡೌನ್: 18 ಎಕರೆ ಕಲ್ಲಂಗಡಿ ಖರೀದಿಸಿದ ಸಂಸದ
ಕೊರೋನಾ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ರೈತರಿಗೆ ಚೈತನ್ಯ ತುಂಬುವ ಸಲುವಾಗಿ ಜಿಲ್ಲೆಯ ರೈತರಿಂದ ಹಣ್ಣು, ತರಕಾರಿಯನ್ನು ಸಂಸದ ಡಿ.ಕೆ. ಸುರೇಶ್ ಖರೀದಿಸಿದರು.
ಚಾಮರಾಜನಗರ(ಏ.21): ಕೊರೋನಾ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ರೈತರಿಗೆ ಚೈತನ್ಯ ತುಂಬುವ ಸಲುವಾಗಿ ಜಿಲ್ಲೆಯ ರೈತರಿಂದ ಹಣ್ಣು, ತರಕಾರಿಯನ್ನು ಸಂಸದ ಡಿ.ಕೆ. ಸುರೇಶ್ ಖರೀದಿಸಿದರು.
ಜಿಲ್ಲೆಯ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಲೂರು ಗ್ರಾಮದಲ್ಲಿ ರೈತ ನಾಗೇಂದ್ರ, ನಾಗರಾಜು ಅವರು 18 ಎಕರೆ ಭೂಮಿಯಲ್ಲಿ ಬೆಳೆದಿರುವ ಕಲ್ಲಂಗಡಿ ತೋಟಕ್ಕೆ ಖುದ್ದು ಭೇಟಿ ನೀಡಿ ಕಲ್ಲಂಗಡಿ ವೀಕ್ಷಿಸಿ ಕಲ್ಲಂಗಡಿ ರುಚಿ ಸವಿದು ಕೆ.ಜಿಗೆ 6 ರು.ನಂತೆ ಖರೀದಿ ಮಾಡಿದರು.
ತಿಂಗಳ ಸಂಪಾದನೆ ಬಡವರ ಊಟಕ್ಕೆ ನೀಡಿದ ವಾಚ್‌ಮನ್
ಕೂಲಿ ಕಾರ್ಮಿಕರು, ಸರ್ಕಾರ, ಉದ್ಯಮಿ, ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳಿಂದ ಹಿಡಿದು ಐಟಿಬಿಟಿ ಕಂಪನಿಯ ಉದ್ಯೋಗಸ್ಥರ ತನಕ ಯಾರಿಗೂ ಕೂಡ ದೇಶದಲ್ಲಿ ಕೊರೋನಾ ಬಂದು 40 ದಿನಗಳ ಕಾಲ ಲಾಕ್‌ಡೌನ್ ಆಗುತ್ತೇ ಅನ್ನುವ ನಿರೀಕ್ಷೆ ಇರಲಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮೆಲ್ಲರ ಮುಂದೆ ಅನೇಕ ಸವಾಲುಗಳು ಇದೆ. ಎಲ್ಲರಿಗೂ ಆರ್ಥಿಕ ಸಂಕಷ್ಟಇದೆ ಎಂದರು.
ಕೈಗಾರಿಕೆಗಳು ಉತ್ಪನ್ನಗಳನ್ನ ಇಂದಲ್ಲ ನಾಳೆ ಮಾರಾಟ ಮಾಡಬಹುದು. ಕಟ್ಟಡ ನಿರ್ಮಾಣಗಳನ್ನು ಮಂದೂಡಬಹುದು ಆದರೆ ರೈತರು ಬೆಳೆದ ತೋಟಗಾರಿಕಾ ಬೆಳೆಗಳನ್ನು ಒಂದು ವಾರದ ತನಕ ಇಟ್ಟುಕೊಳ್ಳಕ್ಕೆ ಆಗೋದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರೈತರ ಸಾಲ ಮಾಡಿ ಹಾಕಿದ ಬಂಡವಾಳ ಸಿಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾ ಪರಿಸ್ಥಿತಿ ಬಂದಿದೆ. ಕೊರೋನಾ ಸಾಯಿಸಬೇಕಿಲ್ಲ ರೈತರು ಸಾಲ ಮಾಡಿ ಹಾಕಿರುವ ಬಂಡವಾಳ ಸಾವಿನ ದವಡೆಗೆ ತಳ್ಳಿದೆ ಎಂದರು.
ಉತ್ತರ ಕೊರಿಯಾದಲ್ಲಿ ಕೊರೋನಾ ಕೇಸುಗಳೇ ಇಲ್ವಂತೆ, ಯಾಕೆ?
ಪಕ್ಕದಲ್ಲೇ ಬೆಳೆದಿದ್ದ ಬದನೆ, ಟಮೊಟೋ ಖರೀದಿಸುವಂತೆ ರೈತರು ಸಂಸದರಲ್ಲಿ ಮನವಿ ಮಾಡಿಕೊಂಡರು ಇದಕ್ಕೆ ಸ್ಪಂದಿಸಿ ಸಂಸದರು ನಿಮಗೆ ಹೆಚ್ಚಿನ ಬೆಲೆ ಸಿಕ್ಕಿದರೆ ಮಾರುಕಟ್ಟೆಗೆ ಮಾರಾಟ ಮಾಡಿ ಇಲ್ಲದಿದ್ದರೆ ಬದನೆ, ಟಮೊಟೋವನ್ನು ರಾಮಾಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಗೆ ಬರುವ ಹಳ್ಳಿಯ ಜನರಿಗೆ ಉಚಿತವಾಗಿ ವಿತರಿಸಿ ನಾನು ಹಣ ಕೊಡುತ್ತೇನೆ ಎಂದು ಭರವಸೆ ನೀಡಿದರು.
ಹಂಪಿಯಿಂದ ಆ್ಯಂಬುಲೆನ್ಸ್ ಜೊತೆಗೆ ಬೆಂಗಳೂರಿಗೆ ಬಂದ ನಟಿ ಜಯಂತಿ!
ಈ ಸಂದರ್ಭ ಮಾಜಿ ಸಂಸದ ಆರ್.ಧ್ರುವನಾರಾಯಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಶಾಸಕರಾದ ಅನಿಲ್‌ಚಿಕ್ಕಮಾಧು, ಡಾ.ರಂಗನಾಥ್, ಎಂಎಲ್‌ಸಿ ರವಿ, ಜಿ.ಪಂ.ಮಾಜಿ ಉಪಾಧ್ಯಕ್ಷ ಬಸವರಾಜು, ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ವಕೀಲರಾದ ಅರುಣ್‌ಕುಮಾರ್, ರಾಮಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚೇತನ್‌ದೊರೈರಾಜ್ ಮುಖಂಡರಾದ ರಾಮಣ್ಣ, ಫಾರುಖ್, ಇದ್ದರು.
ಮಾಜಿ ಸಂಸದ ಆರ್.ಧ್ರುವನಾರಾಯಣ್ ಅವರ ಕರೆಗೆ ಓಗೊಟ್ಟು ಚಾಮರಾಜನಗರ ಜಿಲ್ಲೆಯ ಗಡಿಭಾಗದ ರೈತರಲ್ಲಿ ಕಲ್ಲಂಗಡಿ, ತರಕಾರಿ ಖರೀದಿಸಲಾಗಿದೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.