ಸನಾತನ ಧರ್ಮವು ಜಗತ್ತಿನಲ್ಲಿಯೇ ಶ್ರೇಷ್ಠವಾಗಿದೆ: ಸಂಸದ ಬಚ್ಚೇಗೌಡ
ಸನಾತನ ಹಿಂದೂ ಧರ್ಮಕ್ಕೆ ಯುಗಯುಗಗಳ ಇತಿಹಾಸವಿದ್ದು, ತ್ರೇತಾಯುಗದಲ್ಲಿ ಮಹಾಋಷಿ ವಾಲ್ಮೀಕಿ ರಾಮಾಯಣ ರಚಿಸಿದರು, ದ್ವಾಪರ ಯುಗದಲ್ಲಿ ವ್ಯಾಸರು ಮಹಾಭಾರತ ರಚಿಸಿ ಮನುಷ್ಯನಿಗೆ ಸನಾತನ ಧರ್ಮದ ಸಾರವನ್ನು ತಿಳಿಸಿದ್ದಾರೆ,
ಹೊಸಕೋಟೆ (ಅ.30): ಸನಾತನ ಹಿಂದೂ ಧರ್ಮಕ್ಕೆ ಯುಗಯುಗಗಳ ಇತಿಹಾಸವಿದ್ದು, ತ್ರೇತಾಯುಗದಲ್ಲಿ ಮಹಾಋಷಿ ವಾಲ್ಮೀಕಿ ರಾಮಾಯಣ ರಚಿಸಿದರು, ದ್ವಾಪರ ಯುಗದಲ್ಲಿ ವ್ಯಾಸರು ಮಹಾಭಾರತ ರಚಿಸಿ ಮನುಷ್ಯನಿಗೆ ಸನಾತನ ಧರ್ಮದ ಸಾರವನ್ನು ತಿಳಿಸಿದ್ದಾರೆ, ಇದು ಜಗತ್ತಿನಲ್ಲಿಯೇ ಶ್ರೇಷ್ಠವಾಗಿದೆ. ಇಂತಹ ಧರ್ಮವನ್ನು ತೊಲಗಿಸಬೇಕೆಂದು ತಮಿಳು ನಾಡಿನ ಸ್ಟಾಲಿನ್ ಹಾಗೂ ಇತರರು ಹೇಳಿಕೆ ಕೊಟ್ಟಿರುವುದು ಖಂಡನೀಯ ಎಂದು ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು.
ನಗರದ ತಾಲೂಕು ಕಚೇರಿಯ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಬಾವಚಿತ್ರಕ್ಕೆ ಪುಷ್ಪನಮನ ಸಮರ್ಪಿಸಿ ಅವರು ಮಾತನಾಡಿದರು. ವಾಲ್ಮೀಕಿ ಸಮುದಾಯ ಎಸ್‌ಟಿ ಸಮುದಾಯಕ್ಕೆ ಸೇರಿದ್ದು, ಸಮಾಜದಲ್ಲಿ ಸಮಾನತೆ ಬೇಕಾದರೆ ಮೊದಲು ಶಿಕ್ಷಣ ಪಡೆಯಬೇಕು, ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಸಹಕಾರ ನೀಡುತಿದ್ದು, ನಿಮ್ಮ ಮನೆಯ ಪ್ರತಿಯೊಂದು ಮಗುವಿಗೂ ಉತ್ತಮ ಶಿಕ್ಷಣ ನೀಡಿದರೆ ಸಮಾಜದಲ್ಲಿ ಸಮಾನತೆ ಸಾಧಿಸಿ ಅಭಿವೃದ್ದಿ ಹೊಂದಬಹುದು. ನಗರದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಆಗುತಿದ್ದು, ಸಮುದಾಯದ ನಿರ್ಮಾಣಕ್ಕೆ ಆರ್ಥಿಕ ಕೊರತೆ ಎದುರಾದಲ್ಲಿ ನನ್ನ ಸಂಸದ ನಿಧಿಯಿಂದ 20 ಲಕ್ಷ ಹಣ ಬಿಡುಗಡೆ ಮಾಡಿಸುವುದಾಗಿ ಆಶ್ವಾಸನೆ ನೀಡಿದರು.
ನಟಿ ಶುಭಾ ಪೂಂಜಾರ ಜೊತೆ ಅಸಭ್ಯ ವರ್ತನೆ ಎನ್ನುವುದು ಸತ್ಯಕ್ಕೆ ದೂರ: ಸ್ಥಳೀಯರ ವಾದ
ತಹಸೀಲ್ದಾರ್ ವಿಜಯ್ ಮುಮಾರ್ ಮಾತನಾಡಿ, ರತ್ನಾಕರನು ಸಮಾಜಕ್ಕೆ ಒಳಿತು ಮಾಡಲಿ ಎಂಬ ಉದ್ದೇಶದಿಂದ ಆತನನ್ನು ನಾರದ ಮಹರ್ಷಿಗಳು ವಾಲ್ಮೀಕಿಯಾಗಿ ಪರಿವರ್ತಿಸಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದರು. ಅದೇ ರೀತಿ ಪೋಷಕರು ನಾರದ ಮಹರ್ಷಿಯಂತೆ ತಮ್ಮ ಮಕ್ಕಳ ತಪ್ಪುಗಳನ್ನು ತಿದ್ದಿ, ಮಕ್ಕಳಿಗೆ ಉತ್ತಮ ವಿಧ್ಯಾಭ್ಯಾಸ ನೀಡಿದಲ್ಲಿ ಮಾತ್ರ ಸಮಾಜದಲ್ಲಿ ಸಮಾನತೆ ಸಾದಿಸಬಹುದಾಗಿದೆ ಎಂದರು. ಈ ಕಾರ್ಯಕ್ರಮದಲ್ಲಿ ಸಮುದಾಯದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಾಗೂ ತಾಲೂಕಿನ ಗ್ರಾಪಂಗಳಲ್ಲಿ ಆಯ್ಕೆಯಾದ ಸಮುದಾಯದ ಸದಸ್ಯರನ್ನು ಗೌರವಿಸಲಾಯಿತು.
ಐಟಿ ದಾಳಿ ಚರ್ಚೆ ತಪ್ಪಿಸಲು ಹುಲಿಯುಗುರು ಸದಾರಮೆ ನಾಟಕ: ಸಿ.ಟಿ.ರವಿ
ವಾಲ್ಮೀಕಿ ಸಂಘದ ಅಧ್ಯಕ್ಷ ಹನುಮರಾಜು, ಮುಖಂಡರಾದ ಗೋಪಾಲಗೌಡ, ಬಿ.ವಿ ರಾಜಶೇಖರ ಗೌಡ, ಸಿ. ಮುನಿಯಪ್ಪ, ಡಾ ಡಿ.ಟಿ. ವೆಂಕಟೇಶ್, ಎಡಕನಳ್ಳಿ ಮಂಜು, ನಾಗರಾಜ್, ಮುನಿಯಪ್ಪ, ದೇವರಾಜ್, ಮಾಜಿ ಪುರಸಭೆ ಉಪಾಧ್ಯಕ್ಷೆ ಶೀಲಾವತಿ, ಸಂಪನ್ಮೂಲ ವ್ಯಕ್ತಿ ಕೆಂಪೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದರಾಜ್ ಹಾಜರಿದ್ದರು.