ತನ್ನವೇ ಇಬ್ಬರು ಮಕ್ಕಳನ್ನು ಕೆರೆಗೆ ತಳ್ಳಿದ ತಾಯಿ

ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಸಾಯಿಸಿದ ಬಳಿಕ ತಾನೂ ಸಾಯಲು ಯತ್ನಿಸಿ ವಿಫಲವಾಗಿರುವ ಘಟನೆ  ನಡೆದಿದೆ.

Mother Killed Her 2 Children In Bangarapete snr

ಬಂಗಾರಪೇಟೆ (ಡಿ.16): ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಸಾಯಿಸಿದ ಬಳಿಕ ತಾನೂ ಸಾಯಲು ಯತ್ನಿಸಿ ವಿಫಲವಾಗಿರುವ ಘಟನೆ   ನಡೆದಿದೆ.

ತಾಲೂಕಿನ ಕಾವರನಹಳ್ಳಿ ಗ್ರಾಮದ ನಾಗರಾಜ್‌ ಎಂಬುವರ ಪತ್ನಿ ಕವಿತಾ ಎಂಬಾಕೆಯೇ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ಇಬ್ಬರು ಮಕ್ಕಳಾದ ಮೋಹನ್‌ (4) ಮತ್ತು ಧನ್ಯ (2)ರನ್ನು ಕಾವರನಹಳ್ಳಿ ಹಾಗೂ ದಾಸರಹೊಸಹಳ್ಳಿ ಮಧ್ಯೆ ಇರುವ ಕೆರೆಗೆ ಬಿಸಾಡಿ ಅವರು ಸತ್ತ ಬಳಿಕ ತಾನೂ ಕೆರೆಗೆ ಹಾರಲು ಮುಂದಾದಾಗ ದಾರಿ ಹೋಕರು ಇದನ್ನು ಗಮನಿಸಿ ಆಕೆಯನ್ನು ರಕ್ಷಿಸಿದ್ದಾರೆ.

ನಾಗರಾಜ್‌ ಮತ್ತು ಕವಿತ 6 ವರ್ಷಗಳ ಹಿಂದೆ ವಿವಾಹವಾಗಿದ್ದರು. ಅಂದಿನಿಂದಲೂ ಮನೆಯಲ್ಲಿ ಅತ್ತೆ, ನಾದಿನಿ ಜತೆಗೆ ಸೊಸೆಗೆ ಹೊಂದಾಣಿಕೆ ಇರಲಿಲ್ಲ ಎನ್ನಲಾಗಿದೆ. ಇದರಿಂದಾಗಿ ಪತಿ, ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತು. ಇದರಿಂದ ಬೇಸತ್ತ ಆಕೆ ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನಲಾಗಿದೆ.

ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರಲಿ ಎಂದು ಬೋರ್ಡ್‌ ಮೇಲೆ ಬರೆದು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಮಂಗಳವಾರ ಕವಿತ ತವರು ಮನೆ ದಾಸರಹೊಸಹಳ್ಳಿಗೆ ಹೊರಟವಳು ಕಾವರನಹಳ್ಳಿ- ದಾಸರಹೊಸಳ್ಳಿ ನಡುವೆ ಇರುವ ಕೆರೆಯಲ್ಲಿ ತನ್ನ ಇಬ್ಬರು ಮಕ್ಕಳನ್ನು ಎಸೆದಿದ್ದಾಳೆ. ಮಕ್ಕಳು ಮೃತಪಟ್ಟಬಳಿಕ ತಾನೂ ಕಿರುಚಿಕೊಂಡು ಕೆರೆಗ ಹಾರಲು ಮುಂದಾದಾಗ ದಾರಿ ಹೋಕರು ಆಕೆಯನ್ನು ರಕ್ಷಿಸಿದ್ದಾರೆ. ಪೊಲೀಸರು ಎರಡು ಕಡೆ ದೂರನ್ನು ದಾಖಲಿಸಿಕೊಂಡು ಗಂಡ, ಹೆಂಡತಿಯನ್ನು ಬಂಧಿಸಿದ್ದಾರೆ.

Latest Videos
Follow Us:
Download App:
  • android
  • ios