ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರಲಿ ಎಂದು ಬೋರ್ಡ್ ಮೇಲೆ ಬರೆದು ಆತ್ಮಹತ್ಯೆಗೆ ಶರಣಾದ ಶಿಕ್ಷಕ
ಶಿಕ್ಷಕನೊಬ್ಬ ವಿದ್ಯಾರ್ಥಿಗಳೇ ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.
ಚಿಕ್ಕಬಳ್ಳಾಪುರ, (ಡಿ.05): ವಿದ್ಯಾರ್ಥಿಗಳೇ ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ತರಗತಿ ಬೋರ್ಡ್ ನಲ್ಲಿ ಬರೆದು ಶಿಕ್ಷಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
32 ವಯಸ್ಸಿನ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ. ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕನಗಾನಕೊಪ್ಪ ಗ್ರಾಮದ ನಿವಾಸಿಯಾಗಿದ್ದಾರೆ. ಶಿಕ್ಷಕ ಚಂದ್ರಶೇಖರ್ ಅವರು ಮಂಚೇನಹಳ್ಳಿಯ ಅನುದಾನಿತ ಆಚಾರ್ಯ ಪ್ರೌಢಶಾಲೆಯ ಶಿಕ್ಷಕಕನಾಗಿ ಸೇವೆ ಸಲ್ಲಿಸುತ್ತಿದ್ದರು.
ಪತಿಗೆ ನಿದ್ದೆ ಮಾತ್ರೆ ಕೊಟ್ಟು ಬೇರೊಬ್ಬನ ಜತೆ ಪತ್ನಿಯ ಪಲ್ಲಂಗದಾಟ ಬಯಲು..!
ಶಾಲಾ ಆಡಳಿತ ಮಂಡಳಿಯಿಂದ ಅನುದಾನಿತ ಶಿಕ್ಷಕನಾಗಿ ಚಂದ್ರಶೇಖರ್ ಅವರನ್ನು ಅನುಮೋದನೆ ಮಾಡದ ಹಿನ್ನಲೆಯಲ್ಲಿ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ತನ್ನ ಆತ್ಮಹತ್ಯೆಗೆ ಆಚಾರ್ಯ ಪ್ರೌಢಶಾಲೆ ಆಡಳಿತ ಮಂಡಳಿ ಕಾರಣ ಎಂದು ಶಿಕ್ಷಕ ಚಂದ್ರಶೇಖರ್ ಡೆತ್‍ನೋಟ್ ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಶಾಲೆಯ ತರಗತಿ ಬೋರ್ಡ್ ನಲ್ಲಿ "ವಿದ್ಯಾರ್ಥಿಗಳೇ.. ನಿಮ್ಮ ಭವಿಷ್ಯ ಉಜ್ವಲವಾಗಲಿ. ಹಾಗೂ ನನ್ನೆಲ್ಲಾ ಪ್ರೀತಿ ಪಾತ್ರರಲ್ಲಿ ಕ್ಷಮೆಯಾಚಿಸುತ್ತಿದ್ದೇನೆ ಎಂದು ಕೂಡ ಬರೆದಿದ್ದಾರೆ.