Vijayanagara: ಆಂಬುಲೆನ್ಸ್‌ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

*  ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ನಡೆದ ಘಟನೆ
*  ಆಂಬುಲೆನ್ಸ್‌ನಲ್ಲಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿಕೊಂಡ ಆಸ್ಪತ್ರೆಯ 108 ಸಿಬ್ಬಂದಿ
*  ಗಂಡು, ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ 
 

Mother Gives Birth Twins Babies in Ambulance at Hosapete grg

ವಿಜಯನಗರ(ಮಾ.13):  ಆಂಬುಲೆನ್ಸ್‌ನಲ್ಲಿ(Ambulance) ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ(Twins) ಜನ್ಮ ನೀಡಿದ ಘಟನೆ ಜಿಲ್ಲೆಯ ಹೊಸಪೇಟೆ(Hosapete) ತಾಲೂಕಿನ ಕಮಲಾಪುರದಲ್ಲಿ ಇಂದು(ಭಾನುವಾರ) ನಡೆದಿದೆ. ಕೋಟಗಿನಾಳ್ ಗ್ರಾಮದ ಶಶಿಕಲಾ(26) ಎಂಬ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿಯಾಗಿದ್ದಾಳೆ. 

ಶಶಿಕಲಾಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಅಂಬ್ಯುಲೈನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ, ಮಹಿಳೆಗೆ(Women) ನೋವು ಹೆಚ್ಚಾಗಿ ಆಂಬುಲೆನ್ಸ್‌ನಲ್ಲಿ ಜನ್ಮ ನೀಡಿದ್ದಾಳೆ. ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಯ 108 ಸಿಬ್ಬಂದಿಯಿಂದ ಸುರಕ್ಷಿತವಾಗಿ ಹೆರಿಗೆ(Delivery) ಮಾಡಿಸಿಕೊಂಡಿದ್ದಾರೆ.  

ಪ್ರವಾಹದಲ್ಲಿ ಸಿಲುಕಿದ್ದ ಮಹಿಳೆಗೆ ಡೆಲಿವರಿ ಮಾಡಿಸಿದ ಪೊಲೀಸರು!

ಒಂದು ಗಂಡು ಮತ್ತೊಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ತಾಯಿ. ತಾಯಿ ಮಕ್ಕಳಿಬ್ರೂ ಕೂಡ ಆರೋಗ್ಯವಾಗಿದ್ದು, ಗಾದಿಗನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 108 ಚಾಲಕ ಸುರೇಶ್ ಕೆ. ತಂತ್ರಜ್ಞ ಸುರೇಶ್ ಎಸ್. ಕೆ. ಇವರ ಸಮಯಪ್ರಜ್ಞೆಯಿಂದ ಸೂಸೂತ್ರವಾಗಿ ಹೆರಿಗೆಯಾಗಿದೆ. 

ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

ಹೊಸಪೇಟೆ: ನಗರದ(Hosapete) ಅಂಜುಮನ್‌ ಆಸ್ಪತ್ರೆಯಲ್ಲಿ ತಾಯಿಯೊಬ್ಬರು(Mother) ತ್ರಿವಳಿ ಹೆಣ್ಣು ಮಕ್ಕಳಿಗೆ ಡಿ.11 ರಂದು ಜನ್ಮ ನೀಡಿದ್ದರು. ಬಳ್ಳಾರಿ(Ballari) ಜಿಲ್ಲೆ ಸಂಡೂರು(Sandur) ತಾಲೂಕಿನ ವಿ. ನಾಗಲಾಪುರ ನಿವಾಸಿ ಪ್ರಕಾಶ್ ಎಂಬುವರ ಪತ್ನಿ ಉಮಾ ಮೂವರು ಮಕ್ಕಳಿಗೆ ಜನ್ಮ ನೀಡಿದ ತಾಯಿ. ತಾಯಿ ಮಕ್ಕಳು(Babies) ಆರೋಗ್ಯವಾಗಿದ್ದು, ಮಕ್ಕಳ ತೂಕ ಕಡಿಮೆ ಇರುವ ಹಿನ್ನಲೆಯಲ್ಲಿ ಬಳ್ಳಾರಿ ವಿಮ್ಸ್(VIMS) ಆಸ್ಪತ್ರೆಯಲ್ಲಿ ಚಿಕಿತ್ಸೆ(Treatment) ನೀಡಲಾಗುತ್ತಿದೆ. ಸ್ಥಳೀಯ ಅಂಜುಮನ್‌ ಆಸ್ಪತ್ರೆಯಲ್ಲಿ ತಾಯಿ ಉಮಾ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರಾದ ಡಾ. ಅತಿಕಾಹಿನ, ಡಾ. ಸುರೇಖಾ ಹಾಗೂ ಡಾ. ಬಾಲಚಂದ್ರ ತಿಳಿಸಿದ್ದರು.

ಆಸ್ಪತ್ರೆಯಿಂದ ಆ್ಯಂಬುಲೆನ್ಸ್‌ನಲ್ಲಿ ಬಂದು ಬಾಣಂತಿ ಹಕ್ಕು ಚಲಾವಣೆ

ಮಾನ್ವಿ: ರಾಯಚೂರು-ಕೊಪ್ಪಳ(Raichur) ಜಿಲ್ಲೆಯಲ್ಲಿ ನಡೆದ ವಿಧಾನ ಪರಿಷತ್‌ ಚುನಾವಣೆ(Vidhan Parishat Election) ಪಟ್ಟಣದ ಖಾಸಗಿ ಆಸ್ಪತ್ರೆಯಿಂದ ಹೆರಿಗೆ(Delivery) ಆದ 3 ದಿನದಲ್ಲಿ ಗ್ರಾಪಂ ಸದಸ್ಯೆ ಸರಸ್ವತಿ ರಮೇಶ ಮತದಾನ(Vote) ಕೇಂದ್ರಕ್ಕೆ ಬಂದು ಹಕ್ಕು ಚಲಾಯಿಸಿದ್ದಳು.

ಪ್ರಾಣ ಪಣಕ್ಕಿಟ್ಟು, ಒಟ್ಟಿಗೆ 4 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!

ನೀರಮಾನ್ವಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗೋವಿನದೊಡ್ಡಿ ಗ್ರಾಮದ ವಾರ್ಡ್‌ ನಂ. 8 ಸದಸ್ಯೆ ಸರಸ್ವತಿ ರಮೇಶ ಕಳೆದ 3 ದಿನಗಳ ಹಿಂದೆ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಮತದಾನ ಹಕ್ಕು ಇರುವ ಗ್ರಾಪಂ ಸದಸ್ಯೆ ಆ್ಯಂಬುಲೆನ್ಸ್‌ನಲ್ಲಿ(Ambulance) ನೀರಮಾನ್ವಿ ಗ್ರಾಪಂ ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡಿದದ್ದರಿಂದ ತಾಲೂಕಿನಲ್ಲಿ ಶೇ. 100 ರಷ್ಟು ಮತದಾನವಾಗಿತ್ತು.

ಹೆರಿಗೆಯಾಗಿದ್ದು ಹೆಣ್ಣು, ಆಸ್ಪತ್ರೆಯವರು ಕೊಟ್ಟಿದ್ದು ಗಂಡು ಮಗು..!

ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ(Government Maternity Hospital) ನವಜಾತ ಶಿಶು ಬದಲಿಸಿದ ಗಂಭೀರ ಆರೋಪ ನಗರದ(Mangaluru) ಸರ್ಕಾರಿ ಲೇಡಿಗೋಷನ್ ಹೆರಿಗೆ ಆಸ್ಪತ್ರೆ(Govt Lady Goschen Hospital) ವಿರುದ್ಧ ಕೇಳಿ ಬಂದಿದೆ. ಈ ಸಂಬಂಧ ಲೇಡಿಗೋಷನ್ ಹೆರಿಗೆ ಆಸ್ಪತ್ರೆ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ಅ.15 ರಂದು ನಡೆದಿತ್ತು. 

ಆಸ್ಪತ್ರೆಯ ದಾಖಲೆಗಳಲ್ಲಿ ಹೆಣ್ಣು ಮಗು(Female Child)ಅಂತ ತೋರಿಸಿ ಗಂಡು ಮಗು(Male Child) ಕೊಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಉಡುಪಿ(Udupi) ಜಿಲ್ಲೆಯ ಕುಂದಾಪುರ(Kundapur) ತಾಲೂಕಿನ ಕೋಟೇಶ್ವರ ಮೂಲದ ಮುಸ್ತಫಾ ಎಂಬವರ ಪತ್ನಿ ಅಮ್ರೀನಾ ಎಂಬುವರು ಹೆರಿಗೆಗೆಂದು(Delivery) ಸೆ.27ರಂದು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅದೇ ದಿನ ಹೆರಿಗೆಯಾಗಿದ್ದು ಹೆಣ್ಣುಮಗು ಜನಿಸಿದ ಅಂತ ಕುಟುಂಬಸ್ಥರಿಗೆ ಆಸ್ಪತ್ರೆ ಸಿಬ್ಬಂದಿ ಹೇಳಿದ್ದರು ಎಂದು ಹೇಳಲಾಗುತ್ತಿದೆ. ಬಳಿಕ ಮಗುವಿಗೆ ತೀವ್ರ ಅನಾರೋಗ್ಯ ಇದ್ದ ಕಾರಣ ಎನ್ಐಸಿಯುಗೆ ದಾಖಲು ಮಾಡಲಾಗಿತ್ತು. 
 

Latest Videos
Follow Us:
Download App:
  • android
  • ios