Gadag| ಚಿಕ್ಕ ವಯಸ್ಸಲ್ಲೇ ಕಿಡ್ನಿ ವೈಫಲ್ಯ, ಮಗನ ಚಿಕಿತ್ಸೆಗೆ ಹಣವಿಲ್ಲದೇ ಹೆತ್ತವಳ ಪರದಾಟ..!

*  ಮಗನ ಕಿಡ್ನಿ ವೈಫಲ್ಯ, ಡಯಾಲಿಸ್‌ಗೂ ಹಣವಿಲ್ಲದೇ ತಾಯಿಯ ಪರದಾಟ
*  ಕಳೆದ 5 ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಚನ್ನಯ್ಯ ಶೇಖರಯ್ಯ ಬೆಟದೂರ
*  ಮಗನ ಜೀವ ಉಳಿಸಿಕೊಡಿ ಅಂತ ಅಂಗಲಾಚಿ ಬೇಟಿಕೊಳ್ಳುತ್ತಿರುವ ತಾಯಿ ಈರಮ್ಮ

Mother Faces Financial Problem to Son Treatment in Gadag grg

ಸಂಜೀವಕುಮಾರ ಹಿರೇಮಠ

ಹೊಳೆಆಲೂರ(ನ.14):  10 ವರ್ಷದ ಕೆಳಗೆ ಆನಾರೋಗ್ಯದಿಂದ(Illness) ಮೃತಪಟ್ಟ ಪತಿಯ ನೋವು ಒಂದು ಕಡೆಯಾದರೆ, ಇದ್ದ ಒಬ್ಬ ಮಗನ ಎರಡೂ ಕಿಡ್ನಿ ವೈಪಲ್ಯದಿಂದಾಗಿ ಮಗನ ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚು ಮಾಡಿ, ಈಗ ಡಯಾಲಿಸಿಸ್‌ಗೂ ಹಣ ಹೊಂದಿಸಲಾಗದ ಶೋಚನೀಯ ಸ್ಥಿತಿ ಹೊಳೆಆಲೂರ ಹೋಬಳಿಯ ಹೊಳೆಹಡಗಲಿ ಗ್ರಾಮದ ಬಡ ತಾಯಿಗೆ(Mother) ಬಂದೊದಗಿದೆ.

ಹೊಳೆಹಡಗಲಿ ಗ್ರಾಮದ ಚನ್ನಯ್ಯ ಶೇಖರಯ್ಯ ಬೆಟದೂರ ಎಂಬ 11 ವರ್ಷದ ಬಾಲಕನು ಕಳೆದ 5 ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ(Kidney Failure) ಬಳಲುತ್ತಿದ್ದು ಈಗ ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ತಾಯಿ ಈರಮ್ಮ ಕಳೆದ 5 ವರ್ಷಗಳಿಂದ ಸಾಕಷ್ಟು ಸಾಲ(Loan), ಸೋಲ ಮಾಡಿ ಹಣ ಖರ್ಚು ಮಾಡಿ ಚಿಕಿತ್ಸೆ(Treatment) ಕೊಡಿಸಿದ್ದು, ಮುಂದೆ ಚಿಕಿತ್ಸೆ ನೀಡಲು ಹಣವಿರದೇ ಪರದಾಡುತ್ತಿದ್ದಾಳೆ.

ಮಗು ಚನ್ನಯ್ಯನಿಗೆ ಹುಬ್ಬಳ್ಳಿ(Hubballi), ಬಾಗಲಕೋಟಿ(Bagalkote) ಸೇರಿದಂತೆ ಹಲವು ಕಡೆ ಚಿಕಿತ್ಸೆ ಕೋಡಿಸಿದ್ದು, 3ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದ್ದಾರೆ. ಡಯಾಲಿಸಿಸ್‌(Dialysis) ಮಾಡಿಸಲೂ .5 ರಿಂದ 6 ಸಾವಿರ ಖರ್ಚು ಆಗುತ್ತದೆ. ಅದಕ್ಕೂ ಸಹ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ. ಎಲ್ಲ ಕಡೆ ಸಾಲ ಮಾಡಿಬಿಟ್ಟಿದ್ದೇವೆ. ಖಾಸಗಿ ಆಸ್ಪತ್ರೆಯಲ್ಲಿ(Private Hospital) ಚಿಕಿತ್ಸೆಗೆ ಸಾಕಷ್ಟು ಹಣ ಕೇಳುತ್ತಾರೆ. ಇದ್ದ ಒಬ್ಬ ಮಗನನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ ಎಂದು ತಾಯಿ ಈರಮ್ಮ ಕಣ್ಣೀರಿಡುತ್ತಿದ್ದಾಳೆ.

ಮಗುವಿನ ಚಿಕಿತ್ಸೆಗೆ ಬೇಕಿದೆ 16 ಕೋಟಿ: ಸಹಾಯಕ್ಕಾಗಿ ಅಂಗಲಾಚುತ್ತಿರುವ ಪೋಷಕರು

ಮಗನಿಗೆ ಶಕ್ತಿ ಮೀರಿ ಚಿಕಿತ್ಸೆ ಕೊಡಿಸಿದ್ದೇವೆ. ವೈದ್ಯರು(Doctors) ಬೆಂಗಳೂರಿಗೆ(Bengaluru) ಹೋಗಿ ಅಲ್ಲಿ .6 ರಿಂದ .8 ಲಕ್ಷ ಖರ್ಚು ಆಗುತ್ತದೆ ಎಂದು ತಿಳಿಸಿದ್ದಾರೆ. ಹಣವಿಲ್ಲದೆ ಮನೆಯಲ್ಲಿ ದಿಕ್ಕು ತೋಚದಾಗಿದೆ. ನನ್ನ ಮಗನನ್ನು ಹೇಗಾದರೂ ಮಾಡಿ ಉಳಿಸಿಕೊಡಿ ಎಂದು ತಾಯಿ ಈರಮ್ಮ ಬೆಟದೂರ ಕಂಡಕಂಡವರ ಬಳಿ ಬೇಡಿಕೊಳ್ಳುತ್ತಿದಾಳೆ.

ಸಹಾಯ ಮಾಡಿ:

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನಲ್ಲಿ(Karnataka Vikas Grameena Bank) ಈರಮ್ಮ ಬೆಟದೂರ ಖಾತೆ(Account) ಹೊಂದಿದ್ದು, ಖಾತೆ ಸಂ: 89066233552, ಐಎಫ್‌ಎಸ್‌ ಕೋಡ್‌(IFS Code)-ಕೆವಿಜಿ0006311. ಗದಗ(Gadag) ಜಿಲ್ಲೆಯ ರೋಣ(Ron) ತಾಲೂಕಿನ ಹೊಳೆಹಡಗಲಿ ಗ್ರಾಮದವರಾಗಿದ್ದು, ಮೊಬೈಲ್‌(8722624810) ಮೂಲಕ ಸಂಪರ್ಕಿಸಿ ಸಹಾಯ ಮಾಡಬಹುದಾಗಿದೆ.

ನಮ್ಮಲ್ಲಿರುವ ಹಣ ಮುಗಿದು, ಬಂಗಾರದೊಡವೆಗಳು ಮಾರಿ ಖರ್ಚು ಮಾಡಿದ್ದೇವೆ. ಆದರೂ ಆರಾಮ ಆಗವಲ್ಲ. ಆದರೆ, ಡಾಕ್ಟರ್‌ ಬಹಳ ಹಣ ಖರ್ಚಾಗುತ್ತೆ ಹಣ ಹೊಂದಿಸಿಕೊಂಡು, ಬೆಂಗಳೂರಿಗೆ ಹೋಗ್ರಿ ಎಂತಾರ, ನಮ್ಮ ಹತ್ತಿರ ನೋಡಿದ್ರ ಡಯಾಲಿಸಸ್‌ ಮಾಡಿಸಲೂ ಹಣ ಇಲ್ಲ. ಹಣ ಉಳ್ಳವರು ಸಹಾಯ ಮಾಡಿ ನನ್ನ ಮಗನ ಜೀವ ಉಳಿಸಿಕೊಡಿ ಅಂತ ಮಗುವಿನ ತಾಯಿ ಈರಮ್ಮ ಬೆಟದೂರ ಅಂಗಲಾಚಿ ಬೇಟಿಕೊಂಡಿದ್ದಾರೆ.  

ಕೊರೋನಾ ನಡುವೆಯೂ ಯೋಧನ ಕುಟುಂಬದ ನೆರವಿಗೆ ಬಂದ ಸಿಎಂ!

ಬೆಳಗಾವಿ: ಅಂಧನ ನೆರವಿಗೆ ನಿಂತ ಡಿಸಿಪಿ ಅಮಟೆ

ಹಣ, ಬಸ್‌ ಪಾಸ್‌, ಗುರುತಿನ ಪತ್ರ ಕಳೆದುಕೊಂಡು ಪರದಾಡುತ್ತಿದ್ದ ಅಂಧ ವ್ಯಕ್ತಿಯೊಬ್ಬರಿಗೆ ಬೆಳಗಾವಿ(Belagavi)ಡಿಸಿಪಿ ಡಾ.ವಿಕ್ರಮ ಅಮಟೆ(Dr Vikram Amathe) ಸಹಾಯಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಬಸ್ಸಿಗೆ ಹಣವಿಲ್ಲದೇ ಪರದಾಡುತ್ತಿದ್ದ ಕೊಡಗು(Kodagu) ಮೂಲದ ಅಂಧ ವ್ಯಕ್ತಿ ಕಲ್ಲಪ್ಪ ಬಸಪ್ಪ ಬೂದಿಹಾಳ ಎಂಬುವರು ಪರದಾಡುತ್ತಿದ್ದರು. ಕೊನೆಗೆ ಈತ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಭೇಟಿಗೆ ನಿರ್ಧರಿಸಿ, ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ. ಈ ವೇಳೆ ಈತನನ್ನು ಗಮನಿಸಿದ ಡಿಸಿಪಿ ಡಾ.ವಿಕ್ರಮ ಅಮಟೆ ಆತನ ಬಳಿ ತೆರಳಿ, ವಿಚಾರಿಸಿದ ವೇಳೆ ತಾನು ಹಣ, ಬಸ್‌ ಪಾಸ್‌ ಮತ್ತು ಗುರುತಿನ ಪತ್ರ ಕಳೆದುಕೊಂಡಿರುವುದು ಗಮನಕ್ಕೆ ಬಂದಿತು. ಬಳಿಕ ಆತನಿಗೆ ಧೈರ್ಯ ಹೇಳಿ ಕೊಡಗು ಜಿಲ್ಲೆಯ ಕುಶಾಲನಗರ ತಲುಪಲು ನೆರವಾದರು. ಆತನಿಗೆ ತಮ್ಮ ಊರಿಗೆ ಪ್ರಯಾಣ ಬೆಳೆಸಲು ಬಸ್ಸಿನ ಟಿಕೆಟ್‌ ಖರ್ಚು ಹಾಗೂ ಆಹಾರದ ವ್ಯವಸ್ಥೆಯನ್ನು ಮಾಡಿ ಗಮನ ಸೆಳೆದರು. ಅಮಟೆ ಅವರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Latest Videos
Follow Us:
Download App:
  • android
  • ios