Asianet Suvarna News Asianet Suvarna News

ಮಗುವಿನ ಚಿಕಿತ್ಸೆಗೆ ಬೇಕಿದೆ 16 ಕೋಟಿ: ಸಹಾಯಕ್ಕಾಗಿ ಅಂಗಲಾಚುತ್ತಿರುವ ಪೋಷಕರು

*  ಮಗುವಿಗೆ ಬೆನ್ನು ಮೂಳೆ ಸ್ನಾಯು ಕ್ಷೀಣತೆ ಕಾಯಿ
*  ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ 16 ತಿಂಗಳ ಮಗು
*  ಮಗುವಿನ ಸ್ಥಿತಿ ಕಂಡು ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಪೋಷಕರು 
 

Parents Faces Financial Problem for Treatment of the Child in Belagavi grg
Author
Bengaluru, First Published Oct 31, 2021, 2:58 PM IST
  • Facebook
  • Twitter
  • Whatsapp

ಬೆಳಗಾವಿ(ಅ.31): ಅಪರೂಪದ ಕಾಯಿಲೆಯಿಂದ(Rare Disease) ಬಳಲುತ್ತಿರುವ 16 ತಿಂಗಳ ಮಗುವಿನ ವೈದ್ಯಕೀಯ ಚಿಕಿತ್ಸೆಗೆ(Medical Treatment) ನೆರವಿನ ಸಹಾಯಹಸ್ತ ಬೇಕಿದೆ. ಶಹಾಪುರದ ಸರ್ವಮ್ ಬಾಳೆಕುಂದ್ರಿ ಎಂಬ ಪುಟ್ಟ ಮಗುವಿನ ಬೆನ್ನು ಮೂಳೆ ಸ್ನಾಯು ಕ್ಷೀಣತೆ ಕಾಯಿಲೆಯಿದೆ. 

ಮಗು(Child) ಉಳಿಸಿಕೊಳ್ಳಲು ಬರೋಬ್ಬರಿ 16 ಕೋಟಿ ಮೌಲ್ಯದ ಚುಚ್ಚುಮದ್ದು(Injection) ನೀಡಬೇಕಿದೆ. ಆದರೆ, ಈ ಮಗುವಿನ ತಂದೆ, ತಾಯಿ ಕಡುಬಡವರಿದ್ದಾರೆ(Poor). ಹಾಗಾಗಿ ಇಂತಹ ದುಬಾರಿ ವೆಚ್ಚದ ವೈದ್ಯಕೀಯ ಚಿಕಿತ್ಸೆ ನೀಡುವುದು ಈ ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ.

ಮಗುವಿನ ವೈದ್ಯಕೀಯ ಚಿಕಿತ್ಸೆಗೆ ಈ ಕುಟುಂಬ ದಾನಿಗಳ(Help) ನೆರವಿಗಾಗಿ ಕೈಚಾಚಿದೆ. ಪುಟ್ಟ ಬಾಲಕನ ಜೀವ ಉಳಿಸಲು ಬೆಳಗಾವಿ(Belagavi) ನಗರ ಕೂಡ ಸ್ಪಂದಿಸುತ್ತಿದೆ. ನೊಂದ ಕುಟುಂಬಕ್ಕೆ ಸರ್ಕಾರದ(Government of Karnataka) ಜತೆಗೆ ದಾನಿಗಳ ಆಸರೆಯೂ ಬೇಕಿದೆ. ಸರ್ವಮ್ 6 ತಿಂಗಳದವನಿದ್ದಾಗ ಆತನ ಚಲನವಲನದಲ್ಲಿ ವ್ಯತ್ಯಾಸ ಕಂಡುಬಂತು. ಈ ವೇಳೆ ವೈದ್ಯರನ್ನು ಸಂಪರ್ಕಿಸಿದ್ದ ಪೋಷಕರು(Parents) ಹೈದರಾಬಾದ್‌ನ(Hyderabad) ಖಾಸಗಿ ಲ್ಯಾಬ್‌ನಲ್ಲಿ ಸರ್ವಮ್‌ನ ರಕ್ತ ಮಾದರಿ ಪರೀಕ್ಷೆ ನಡೆಸಿದರು. 

ಬೆಳಗಾವಿ: ಅಂಧನ ನೆರವಿಗೆ ನಿಂತ ಡಿಸಿಪಿ ಅಮಟೆ

9 ತಿಂಗಳಿದ್ದಾಗ ಸ್ಪೈನಲ್ ಮಸ್ಕಲರ್ ಅಟ್ರಾಫಿ(Spinal Muscular Atrophy) ಕಾಯಿಲೆ ಇರುವುದು ದೃಢಪಟ್ಟಿತು. ಈ ಕಾಯಿಲೆ ದೇಶದ ಕೆಲವೇ ಕೆಲವು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಬಳಿಕ ಬೆಳಗಾವಿ, ಬೆಂಗಳೂರಿನ(Bengaluru) ಖಾಸಗಿ ಆಸ್ಪತ್ರೆಯಲ್ಲಿ ಸದ್ಯ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಗು ಸಂಪೂರ್ಣ ಗುಣಮುಖರಾಗಲು 16 ಕೋಟಿ ಮೌಲ್ಯದ ಚುಚ್ಚುಮದ್ದು ನೀಡಬೇಕಿದೆ. ಈ ಚುಚ್ಚುಮದ್ದು ಯುಎಸ್‌ಎನಲ್ಲಿ(America) ದೊರೆಯುತ್ತದೆ. ಇನ್ನು ಆರು ತಿಂಗಳಲ್ಲಿ ಚುಚ್ಚುಮದ್ದು ನೀಡಬೇಕು. ಇಲ್ಲದಿದ್ದರೆ ಮಗುವಿನ ಒಂದೊಂದು ಅಂಗವು ನಿಷ್ಕ್ರೀಯಗೊಳ್ಳುವ ಆತಂಕ ಎದುರಾಗಿದೆ. 

ಮಗುವಿನ ಸ್ಥಿತಿ ಕಂಡು ನಿತ್ಯ ಪೋಷಕರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿರುವ ಸರ್ವಮ್ ತಂದೆ ಮಹೇಶ ಬಾಳೇಕುಂದ್ರಿ ಅವರು ಮಗು ಉಳಿಸಿಕೊಳ್ಳಲು ಸತತ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಮಗನ ಚಿಕಿತ್ಸೆ ವೆಚ್ಚ ಕೇಳಿ ಬರ ಸಿಡಿಲು ಬಡಿದಂತಾಗಿದೆ. ಸ್ನೇಹಿತರ ಸಲಹೆ ಮೇರೆಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಮುಂದಾದರು. ಕಳೆದ 45 ದಿನಗಳಿಂದ ಬೆಳಗಾವಿಯಲ್ಲಿ ಸೇವ್ ಸರ್ವಮ್ ಅಭಿಯಾನ(Save Sarvam Campaign) ನಡೆಯುತ್ತಿದ್ದು, ಈ ಮೂಲಕ ಈವರೆಗೆ 27 ಲಕ್ಷ ಸಂಗ್ರಹಿಸಲಾಗಿದೆ. ಆದರೆ, ಇದು ಏತಕ್ಕೂ ಸಾಲದು. ಈ ಕುರಿತು ಸೋಶಿಯಲ್ ಮಿಡಿಯಾದಲ್ಲಿ(Social Media) ಅಭಿಯಾನವೂ ನಡೆಯುತ್ತಿದೆ. ಮಗುವಿನ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡುವಂತೆ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ(Abhay Patil) ಮೂಲಕ ಸಿಎಂಗೆ(Chief Minister) ಮನವಿ ಸಲ್ಲಿಸಲಾಗಿದೆ. ಸಹಾಯ ಮಾಡುವವರು 7899775977 ಸಂಪರ್ಕಿಸಿ. ಅಕೌಂಟ್(Bank Account) 50100455282652 ಐಎಫ್‌ಎಸ್ಸಿ(IFSC)- ಎಚ್‌ಡಿಎಫ್‌ಸಿ(HDFC) 0009529 ಸಹಾಯ ಮಾಡಬಹುದು.
 

Follow Us:
Download App:
  • android
  • ios