ಉತ್ತರ ಕನ್ನಡ(ಮೇ.08): ಯಲ್ಲಾಪುರ ತಾಲೂಕಿನ ಕುಂದರಗಿ ಗ್ರಾಪಂ ವ್ಯಾಪ್ತಿಯ ದೊಡ್ಡಬೇಣದಲ್ಲಿ ಬುಧವಾರ ರಾತ್ರಿ ಇಬ್ಬರು ಮಹಿಳೆಯರು ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ವಿಷಯ ತಿಳಿದ ಮೃತ ಮಹಿಳೆಯೊಬ್ಬರ ತಾಯಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಶ್ವೇತಾ ಶಿವಾ ನಾಯ್ಕ (28), ಉಷಾ ಆದಿತ್ಯ ನಾಯ್ಕ (25) ಬಾವಿಗೆ ಬಿದ್ದು ಮೃತಪಟ್ಟರೆ, ಶ್ವೇತಾ ಅವರ ತಾಯಿ ಗೌರಿ ಶಿವಾ ನಾಯ್ಕ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

ಕೆರೆಯಲ್ಲಿಯೇ ನಡೆಯಿತು ಕಾರ್ಮಿಕರ ವೆಡ್ಡಿಂಗ್ ಆ್ಯನಿವರ್ಸರಿ..!

ಉಷಾ ಮತ್ತು ಶ್ವೇತಾ ಅವರದು ನಾದಿನಿ ಸಂಬಂಧವಾಗಿದ್ದು, ಈ ಪೈಕಿ ಒಬ್ಬರು ಕಾಲುಜಾರಿ ಬಾವಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಹೋದ ಮತ್ತೊಬ್ಬರು ಸಹ ನೀರಿನಲ್ಲಿ ಮುಳುಗಿದ್ದಾರೆ.

ವಿಷಯ ತಿಳಿದ ಶ್ವೇತಾ ಅವರ ತಾಯಿಗೆ ಸ್ಥಳದಲ್ಲೇ ಹೃದಯಾಘಾತ ಸಂಭವಿಸಿದೆ. ಮಂಚಿಕೇರಿ ಪೊಲೀಸ್‌ ಹೊರಠಾಣೆಯ ಬಸವರಾಜ ಮುಂಡಗೋಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ತನಿಖೆ ಕೈಗೊಂಡಿದ್ದಾರೆ.